ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ವನವಮಿ ಉತ್ಸವ

ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ಆದೇಶದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ಶ್ರೀ ಮಧ್ವ ನವಮಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಫೆ. 21 ರಂದು ಹಮ್ಮಿಕೊಳ್ಳಲಾಗಿತ್ತು.

ಶ್ರೀಮಠದಲ್ಲಿ ಮುಖ್ಯ ಪ್ರಾಣದೇವರಿಗೆ ವಾಯುಸ್ತುತಿ ಪುನಶ್ಚರಣೆಯಿಂದ ಮಧು ಅಭಿಷೇಕ, ಪವಮಾನ ಹೋಮ, ಶ್ರೀ ಸುಮಧ್ವ ವಿಜಯ ಪಾರಾಯಣ, ಶ್ರೀ ಮಧ್ವಾಚಾರ್ಯರ ಭಾವಚಿತ್ರವನ್ನು ಸ್ವರ್ಣಲೇಪಿತವಾದ ರಜತ ಗಜವಾಹನ ಅಂಬಾರಿ, ಸ್ವರ್ಣಪಲ್ಲಕ್ಕಿ ಸ್ವರ್ಣಸಿಂಹಾಸನದ ರಜತ ರಥೋತ್ಸವದ ಮೇಲಿರಿಸಿ ಶ್ರೀ ಸರ್ವಮೂಲ ಗ್ರಂಥಗಳ ಮೆರವಣಿಗೆ, ಭಜನೆ ಮಂಡಳಿಯಿಂದ ಶ್ರೀಹರಿ ಭಜನೆ ಹಾಗೂ ವಿದ್ವಾನ್ ಜಗನ್ನಾಥ್ ಆಚಾರ್ಯರಿಂದ ಪ್ರವಚನ, ಶ್ರೀಮಠದಿಂದ ವಸ್ತ್ರದಾನ ರಜತ ಪಾತ್ರದಾನ ಅಲಂಕಾರ, ಕನಕಾಭಿಷೇಕ ಇತ್ಯಾದಿ ಅನ್ನಸಂತರ್ಪಣೆಯೊಂದಿಗೆ ಮಹಾ ಉತ್ಸವವು ನೆರವೇರಿತು ಎಂದು ಕಿಶೋರ್ ಆಚಾರ್ಯರು ತಿಳಿಸಿದರು.

ಈ ಉತ್ಸವದ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿ ಶ್ರೀಮಧ್ವ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

Related Articles

ಪ್ರತಿಕ್ರಿಯೆ ನೀಡಿ

Latest Articles