ಶಿವರಾತ್ರಿ ಪ್ರಯುಕ್ತ ಅಖಂಡ ಭಕ್ತಾಮರ ಸ್ತೋತ್ರಪಠಣ, ದೀಪಾರಾಧನೆ, ಭಜನೆ

ರತ್ನಕರಂಡಕ ಶ್ರಾವಕಾಚಾರ ಸ್ವಾಧ್ಯಾಯ ಪ್ರೇಮಿಗಳ ಗಣದಿಂದ ಅಭೂತಪೂರ್ವವಾದ ಕಾರ್ಯಕ್ರಮವೊಂದು ಆನ್ಲೈನ್ ಮಾಧ್ಯಮದಲ್ಲಿ ನಡೆಯಲಿದೆ. ಮಾರ್ಚ್ 11 ರಂದು ಪ್ರಾತಃಕಾಲ 07 ರಿಂದ ಅಖಂಡ ಭಕ್ತಾಮರ ಸ್ತೋತ್ರ ಪಠಣ ಪ್ರಾರಂಭವಾಗಲಿದೆ. ನಾಡಿನ ಖ್ಯಾತ ಗಾಯಕಿ ಜಯಶ್ರೀ ಹೊರನಾಡು ಅವರ ತಂಡದಿಂದ ಆರಂಭವಾಗುವ ಭಕ್ತಾಮರ ಸ್ತೋತ್ರ ಪಠಣ, ಮರುದಿವಸ ಮಾರ್ಚ್ 12 ರ ಬೆಳಗ್ಗೆ ಏಳಕ್ಕೆ ರತ್ನತ್ರಯ ಧಾರಾವಾಹಿಯ ನಿರ್ಮಾಪಕಿ ಡಾ. ನೀರಜಾ ನಾಗೇಂದ್ರ ಕುಮಾರ ಅವರ ತಂಡದ ಪಠಣದೊಂದಿಗೆ ಮುಕ್ತಾಯವಾಗಲಿದೆ.

ಒಂದು ತಂಡದಲ್ಲಿ ಕನಿಷ್ಠ ಎರಡು ಜನ ಹಾಗೂ ಗರಿಷ್ಠ ಎಷ್ಟು ಜನ ಬೇಕಾದರೂ ಇರಬಹುದಾದ ತಂಡಗಳು ಈಗಾಗಲೇ ಶಾಸ್ತ್ರೋಕ್ತ ಅಭ್ಯಾಸ ಮಾಡಿ ಕಾತರದಿಂದ ಕಾಯುತ್ತಿವೆ. ಒಟ್ಟು 48 ಕ್ಕೂ ಅಧಿಕ ತಂಡಗಳು ಅಂತಿಮ ಅಭ್ಯಾಸ ಮುಗಿಸಿ ಕಾರ್ಯಕ್ರಮ ನೀಡಲು ಸಜ್ಜಾಗಿವೆ.

ಬಹುತೇಕವಾಗಿ ರಿಹರ್ಸಲ್ ಮುಗಿದಿದೆ. ರತ್ನಕರಂಡಕ ಶ್ರಾವಕಾಚಾರ ಸ್ವಾಧ್ಯಾಯ ಪ್ರೇಮಿಗಳ ಗಣದ ಮುಖ್ಯಸ್ಥರಾದ ಜಿನೇಂದ್ರ ಬಂಗ ಪಡಂಗಡಿ ಇವರ ನೇತೃತ್ವದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಕಾರ್ಯಕ್ರಮ ನೀಡಲಿರುವ ತಂಡಗಳ ಸದಸ್ಯರು ವಿವಿಧ ರೀತಿಯ ಶಾಸ್ತ್ರೋಕ್ತ ಉಡುಗೆ ತೊಡುಗೆಗಳಲ್ಲಿ ಮಿಂಚಲಿದ್ದಾರೆ.

ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸಲು ತಂಡದ ರಚನೆಯಾಗಿದೆ. ನಿರ್ವಿಘ್ನವಾಗಿ, ನಿರಂತರವಾಗಿ ಕಾರ್ಯಕ್ರಮವು zoom app ಮೂಲಕ ನಡೆಯಲಿದೆ. zoom ಸದಸ್ಯರ ಸಾಮರ್ಥ್ಯವು 500 ಜನರನ್ನು ಒಳಗೊಂಡಿರುತ್ತದೆ.

ಹಲವು ಫೇಸ್ಬುಕ್ ಪೇಜುಗಳಲ್ಲಿ ಕಾರ್ಯಕ್ರಮವು ನೇರ ಪ್ರಸಾರವಾಗಲಿದೆ. ಭಕ್ತಾಮರ ಆರಾಧನೆ ಮಾರ್ಚ್ 12 ರ ಬೆಳಗ್ಗೆ ಭಕ್ತಾಮರ ಸ್ತೋತ್ರದ ಪಠಣ ಮುಗಿಯುತ್ತಿದ್ದಂತೆ ಭಕ್ತಾಮರ ಆರಾಧನೆ ಶ್ರೀ ಜಿನೇಂದ್ರ ಬಂಗರ ನೇತೃತ್ವದಲ್ಲಿ ನಡೆಯಲಿದೆ. ವಿವಿಧ ಸಂಗೀತಗಾರರು ಭಕ್ತಿ ರಸವನ್ನು ಹರಿಸಲಿದ್ದಾರೆ. ಆರಾಧನೆಗೆ ಯಾರೂ ಬೇಕಾದರೂ ಪ್ರತ್ಯಕ್ಷವಾಗಿ ಭಾಗವಹಿಸಬಹುದು.

ಮಾರ್ಚ್ 12 ರ ಸಂಜೆ 07 ರಿಂದ ಭಕ್ತಾಮರ ದೀಪಾರಾಧನೆ ಹಾಗೂ ಭಜನೆ ನಡೆಯಲಿದೆ. ವಿವಿಧ ಶ್ರಾವಕರಿಂದ ಆದಿನಾಥ ಭಗವಂತರಿಗೆ ಭಕ್ತಿಯ ದೀಪದಿಂದ ಆರಾಧನೆಯು ಭಜನೆ ಪೂರ್ವಕವಾಗಿ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳು ರತ್ನಕರಂಡಕ ಶ್ರಾವಕಾಚಾರ ಸ್ವಾಧ್ಯಾಯ ಪ್ರೇಮಿಗಳ ಗಣದಿಂದ ನಡೆಯಲಿದೆ. ಆಸಕ್ತ ಶ್ರಾವಕ ಬಂಧುಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷವಾಗಿ‌ ಪರೋಕ್ಷವಾಗಿ ಭಾಗವಹಿಸಬಹುದು.

ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ನಡೆಯುವ ಈ ಅಭೂತಪೂರ್ವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಎಂಬುದು ಭಕ್ತರ ಆಶಯವಾಗಿದೆ.

zoom link ID – 459 399 9080

Passcode – 1008

ಫೇಸ್ಬುಕ್ ಪೇಜುಗಳು ಸ್ವಾಧ್ಯಾಯಃ ಪರಮಂ ತಪಃ

https://www.facebook.com/Aagamavaani/ ನಿರಂಜನ ಲಹರಿ https://www.facebook.com/ನಿರಂಜನ-ಲಹರಿ-Niranjana-Lahari-103970481525475/ ಕರ್ನಾಟಕದಲ್ಲಿ ಜೈನ ಧರ್ಮ https://www.facebook.com/Mmjinendra/ ಜಿನಗಾನ ವಿಶಾರದೆ https://www.facebook.com/JinagaanaVisharade/ ಜಿನಗಾನ ಸುಧಾ https://www.facebook.com/jingaansudha/ ಇನ್ನೂ ಮುಂತಾದ ಫೇಸ್ಬುಕ್ ಪೇಜುಗಳಲ್ಲಿ ಕಾರ್ಯಕ್ರಮವು ನಿರಂತರವಾಗಿ ನೇರ ಪ್ರಸಾರದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9113607671 / 9945563529.

Related Articles

ಪ್ರತಿಕ್ರಿಯೆ ನೀಡಿ

Latest Articles