ಕಂಕಣ ಕಟ್ಟಿಕೊಳ್ಳುವುದರ ಮಹತ್ವ ಏನು ಗೊತ್ತಾ?

ವರಮಹಾಲಕ್ಷ್ಮೀ ವ್ರತ, ಅನಂತಪದ್ಮನಾಭ ವ್ರತ ಇವೇ ಮೊದಲಾದ ವ್ರತಾಚರಣೆಗಳನ್ನು ಕೈಗೊಳ್ಳುವವರು, ಮದುವೆಯಾಗಲಿರುವ ವಧು-ವರರು, ಯಜ್ಞ ಯಾಗ, ಪೂಜೆ, ಹವನಗಳನ್ನು ಹಮ್ಮಿಕೊಂಡ ಮನೆಯ ಗೃಹಸ್ಥರು ಪೂಜಿಸಿದ ಹಳದಿ ದಾರವನ್ನು ಅಥವಾ ದಾರದಲ್ಲಿ ಕಟ್ಟಿದ ಅರಶಿನ ಕೊಂಬನ್ನು ಬಲಗೈಗೆ ಕಟ್ಟಿಕೊಳ್ಳುವ ಪದ್ಧತಿ ಇದೆ. ಅದನ್ನು ಕಂಕಣ ಕಟ್ಟಿಕೊಳ್ಳುವುದು ಎನ್ನುತ್ತಾರೆ.
ಕಂಕಣ ಬದ್ಧರಾಗಿರುವುದು ಅಂದರೆ ದೃಢ ಸಂಕಲ್ಪ ಮಾಡುವುದು ಎಂದರ್ಥ. ಕೆಲವೊಮ್ಮೆ ಶುಭ ಕಾರ್ಯ ನಡೆಯುವ ದಿನದಂದು ಯಾವುದೋ ಅಡ್ಡಿ, ತೊಂದರೆಗಳು ಕಾಣಿಸಿಕೊಳ್ಳುವುದುಂಟು. ಅದರಿಂದ ವ್ರತಾಚರಣೆಗೆ ಭಂಗವು0ಟಾಗಬಹುದು, ಇಲ್ಲವೇ ಶುಭಕಾರ್ಯ ನಿಂತು ಹೋಗುವ ಸಾಧ್ಯತೆಯೂ ಇರುತ್ತದೆ.
ವ್ರತಾಚರಣೆಗಳಲ್ಲಿ ಭಕ್ತಿ, ಶ್ರದ್ಧೆಯಿಂದ ದೇವರನ್ನು ಪೂಜಿಸಿ ದೇವರ ನಾಮವನ್ನು ನಿರಂತರ ಸ್ಮರಿಸುವ ಸಂಕಲ್ಪ ಮಾಡಿ, ಶಕ್ತಿ ಕರುಣಿಸಿ ಎಂದು ಪ್ರಾರ್ಥಿಸುತ್ತಾರೆ. ದೇವರೆದುರು ಇಟ್ಟು ಪೂಜಿಸಿದ ದಾರ ಅದಾಗಿರುವುದರಿಂದ ದೇವರ ಭರವಸೆಯ ಸಂಕೇತವೂ ಹೌದು. ಅದು ಆಂತರಿಕ ಶಕ್ತಿಯನ್ನು ಪ್ರೇರೇಪಿಸುವ ಸಾಧಕದಂತೆ ಕೆಲಸ ಮಾಡುತ್ತದೆ. ವಿವಾಹ, ಉತ್ಸವ, ಯಜ್ಞ ಯಾಗಾದಿ ಕಾರ್ಯಗಳಲ್ಲೂ ಸೂತಕ ಬಾಧಿಸುವುದುಂಟು. ಅಂತಹ ತೊಡಕುಗಳಿಂದ ಹಿಡಿದ ಕೆಲಸ ನಿರಾಂತಕವಾಗಿ ನಡೆಯುವಂತಾಗಬೇಕು ಎಂಬುದೇ ಕಂಕಣ ಕಟ್ಟಿಕೊಳ್ಳುವುದರ ಹಿಂದಿರುವ ಉದ್ದೇಶ.

Related Articles

ಪ್ರತಿಕ್ರಿಯೆ ನೀಡಿ

Latest Articles