ರಂಭಾಪುರಿ ಪೀಠ (ಬಾಳೆಹೊನ್ನೂರು): ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಮಾರ್ಚ್ 26 ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಅಂಗವಾಗಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸೌಹಾರ್ದ ಶಾಂತಿ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾಯಕ ಮತ್ತು ದಾಸೋಹದ ಮೂಲಕ ಜೀವನ ಶ್ರೇಯಸ್ಸಿಗೆ ದಾರಿ ತೋರಿದ ಮೂಲ ಪುರುಷರು ರೇಣುಕಾಚಾರ್ಯರು. ಅಂಗ ಅವಗುಣಗಳನ್ನು ದೂರ ಮಾಡಿ ಲಿಂಗಾ0ಗ ಸಾಮರಸ್ಯ ಉಂಟು ಮಾಡಿದ ಕೀರ್ತಿ ಇವರದು. ಅಹಿಂಸಾ ಸತ್ಯ ಅಸ್ತೇಯ ಬ್ರಹ್ಮಚರ್ಯ, ದಯಾ, ಕ್ಷಮಾ, ದಾನ, ಪೂಜಾ, ಜಪ ಧ್ಯಾನ ಎಂಬ ಧರ್ಮದ ದಶಸೂತ್ರಗಳನ್ನು ಬೋಧಿಸಿ ಜೀವನ ಉನ್ನತಿಗೆ ಬೆಳಕು ತೋರಿದವರು. ಸತ್ಯ ಮತ್ತು ಶಾಂತಿಯ ತಳಹದಿಯ ಮೇಲೆ ಸುಸಂಸ್ಕೃತ ಸಮಾಜ ನಿರ್ಮಿಸಲು ನಿರಂತರ ಶ್ರಮಿಸಿದವರು. ಶಿವಾದ್ವೆöÊತ ಜ್ಞಾನ ಸಂಪತ್ತನ್ನು ಕರುಣಿಸಿದ ಕಾರುಣ್ಯ ಶಕ್ತಿ ಇವರದಾಗಿದೆ. ಶಿವನ ಸದ್ಯೋಜಾತ ಮುಖದಿಂದ ಕೊನಲುಪಾಕ ಶ್ರೀ ಸೋಮೇಶ್ವರ ಮಹಾಲಿಂಗದಿ0ದ ಆವಿರ್ಭವಿಸಿ ಮಹಾಮುನಿ ಅಗಸ್ತö್ಯರಿಗೆ ಧರ್ಮ ದೀಕ್ಷೆ ಮತ್ತು ಷಟ್ ಸ್ಥಲ ಶಿವಸಿದ್ಧಾಂತವನ್ನು ಬೋಧಿಸಿ ಹರಿಸಿದ ಮಹಾನ್ ಶಕ್ತಿ ಇವರಾಗಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ ಶ್ರೀ ಕೇದಾರ ಜಗದ್ಗುರು ಭೀಮಾಶಂಕರಲಿ0ಗ ಶಿವಾಚಾರ್ಯ ಭಗವತ್ಪಾದರು ತಮ್ಮ ಆಶೀರ್ವಚನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ದೂರ ದೃಷ್ಟಿ ಮತ್ತು ಆಧ್ಯಾತ್ಮ ಜ್ಞಾನದ ಶ್ರೇಷ್ಠತೆಯನ್ನು ಪ್ರಶಂಸಿಸಿದ ಅವರು ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಬೆಳೆಸಲು ಶ್ರಮಿಸಿದವರು. ವೀರಶೈವ ಧರ್ಮ ಗಂಗೋತ್ರಿಯಾಗಿ ಸಮಾಜದ ಸ್ವಾಸ್ಥö್ಯ ಕಾಪಾಡಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಬರಲಿರುವ ದಿನಗಳು ಭಕ್ತರಿಗೆ ಆಶಾದಾಯಕವಾಗಿವೆ ಎಂದರು.
ವೀರಶೈವ ಪರಿಶೋಧ ಪರಂಪರೆ ಇತಿಹಾಸ ಮತ್ತು ವರ್ತಮಾನ ಸಂಶೋಧನಾ ಅಮೂಲ್ಯ ಕೃತಿ ಬಿಡುಗಡೆ ಮಾಡಿದ ವ್ಹಿ.ಆರ್.ಎಲ್. ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ. ವಿಜಯ ಸಂಕೇಶ್ವರ ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ಜ್ಞಾನ ಕ್ರಿಯಾತ್ಮಕವಾದ ಬದುಕಿನೊಂದಿಗೆ ಸಾಮಾಜಿಕ ಸಂವೇದನಾಶೀಲ ಗುಣಗಳನ್ನು ಬೆಳೆಸಿದ ಶ್ರೇಷ್ಠ ಆಚಾರ್ಯರು. ವೀರಶೈವ ಧರ್ಮ ವೃಕ್ಷದ ತಾಯ್ಬೇರಿನಂತಿರುವ ರೇಣುಕಾಚಾರ್ಯರು ಸಕಲ ಜೀವಾತ್ಮರ ಅಭ್ಯುದಯಕ್ಕೆ ದುಡಿದವರು. ಭಾರತೀಯ ಸಂಸ್ಕೃತಿಗೆ ಅತ್ಯಮೂಲ್ಯ ಕೊಡುಗೆಯಿತ್ತ ಕಾರುಣಿಕರು. ವೀರಶೈವ ಧರ್ಮೀಯರು ಸರ್ವ ಸಮರ್ಥರಾಗಿದ್ದರೂ ಜಾತೀಯತೆಯ ಸಂಕೋಲೆಯಿ0ದ ಸಂಕಷ್ಟವನ್ನು ಎದುರಿಸುವಂತಾಗಿದೆ. ವೀರಶೈವ ಧರ್ಮದ ಕುರಿತಾಗಿ ಪ್ರಕಟಗೊಳ್ಳುವ ಕೃತಿಗಳು ಹೆಚ್ಚು ಹೆಚ್ಚಾಗಿ ಪ್ರತಿಯೊಬ್ಬರ ಮನೆ ಸೇರಬೇಕು ಎಂದರು.
ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದಿಂದ ಪ್ರತಿಷ್ಠಿತ ‘ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ಯನ್ನು ಸ್ವೀಕರಿಸಿದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗಳ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಹೆಚ್. ಸುದರ್ಶನ ಬಲ್ಲಾಳ ಇವರು ಮಾತನಾಡಿ ಆರೋಗ್ಯಕ್ಕಿಂತ ಮಿಗಿಲಾದ ಯಾವ ಸಂಪತ್ತು ಇಲ್ಲ. ಆರೋಗ್ಯವೇ ನಿಜವಾದ ಸಂಪತ್ತು. ಆಹಾರ ಆರೋಗ್ಯ ಆಧ್ಯಾತ್ಮ ಇವುಗಳ ಅರಿವಿನಿಂದ ಬಾಳಿದರೆ ನಮ್ಮೆಲ್ಲರ ಬಾಳು ನಂದನವನವಾಗಲು ಸಾಧ್ಯ. ನನ್ನ ಸಾಧನೆಯನ್ನು ಕಂಡು ಶ್ರೀ ರಂಭಾಪುರಿ ಪೀಠ ಇಂದು ‘ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ತುನ್ನತ ಪ್ರಶಸ್ತಿ’ಯನ್ನು ಅನುಗ್ರಹಿಸಿರುವುದು ನನ್ನ ಸೌಭಾಗ್ಯ ಮತ್ತು ಪುಣ್ಯ ಎಂದು ಸ್ಮರಿಸಿದ ಅವರು ಈ ಸಾಧನೆಗೆ ಹೆತ್ತ ತಾಯ್ತಂದೆಯವರು ಕಾರಣರೆಂಬುದನ್ನು ಮರೆಯಲಾಗದು ಎಂದರು. ಸಿದ್ಧರಬೆಟ್ಟದ ವೀರಭದ್ರ ಶ್ರೀಗಳು ಪ್ರಶಸ್ತಿ ವಾಚಿಸಿದರು.
ಅಮ್ಮಿನಭಾವಿ ಅಭಿನವ ಶಾಂತಲಿ0ಗ ಶ್ರೀಗಳು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾಡಿದ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾçಂತಿಯ ಹೆಜ್ಜೆಗಳನ್ನು ಕೊಂಡಾಡಿದರು. ನೇತೃತ್ವ ವಹಿಸಿದ ಎಮ್ಮಿಗನೂರಿನ ಹಂಪಿ ಸಾವಿರ ಮಠದ ವಾಮದೇವ ಮಹಂತ ಶ್ರೀಗಳು ಮಾತನಾಡಿ ಭವ ಬಂಧನ ಕಳೆದು ಆಧ್ಯಾತ್ಮ ಜ್ಞಾನದ ಆದರ್ಶ ಚಿಂತನಗಳನ್ನು ಅರಿತು ಆಚರಿಸಿಕೊಳ್ಳುವ ಮನೋಭಾವ ಬೆಳೆದು ಬರಬೇಕಾಗಿದೆ ಎಂದರು.
ಗೌರಿಗದ್ದೆ ಅವಧೂತ ಆಶ್ರಮದ ವಿನಯ ಗುರೂಜಿ ಮಾತನಾಡಿ ಭಾರತ ದೇಶದಲ್ಲಿರುವಷ್ಟು ಧರ್ಮಗಳು ಮತ್ತು ಆಚಾರ್ಯ ಶ್ರೇಷ್ಠರು ಬೇರಾವ ದೇಶಗಳಲ್ಲಿಯೂ ಇಲ್ಲ. ಅವರೆಲ್ಲರೂ ಇರುವುದರಿಂದಲೇ ಈ ನಾಡಿನಲ್ಲಿ ಶಾಂತಿ ಸಾಮರಸ್ಯ ಸದ್ಭಾವನೆಗಳು ಉಳಿದು ಬಂದಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಶಿವಾದ್ವೆöÊತ ಸಿದ್ಧಾಂತದ ಖಣಿಯಾಗಿದ್ದಾರೆಂದರು.
ಬಿಜೆಪಿ ಕರ್ನಾಟಕ ಘಟದಕ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮಾರಂಭ ಉದ್ಘಾಟಿಸಿ ಮಾತನಾಡಿ ಬಾಳೆಹೊನ್ನೂರು ರಂಭಾಪುರಿ ಪೀಠ ಮಾನವ ಧರ್ಮದ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಜಾತಿ ಧರ್ಮಗಳ ಸಂಘರ್ಷಮಯ ಇಂದಿನ ದಿನಗಳಲ್ಲಿ ರಂಭಾಪುರಿ ಪೀಠದ ಸಂದೇಶ ನಮ್ಮೆಲ್ಲರಲ್ಲಿ ಶಾಂತಿ ಸೌಹಾರ್ದತೆ ಮೂಡಿ ಬರಲು ಕಾರಣವಾಗಿರುತ್ತದೆ. ಶ್ರೀ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಕೈಲಾದ ಸಹಕಾರವನ್ನು ಕೊಡುವುದೆಂದ ಅವರು ಶ್ರೀ ರಂಭಾಪುರಿ ಜಗದ್ಗುರುಗಳ ಸಾಧನೆ ಬೋಧನೆ ಮತ್ತು ಮಾರ್ಗದರ್ಶನ ನಮ್ಮೆಲ್ಲರ ಬಾಳಿಗೆ ದಾರಿ ದೀಪವೆಂದರು.
ಮುಖ್ಯ ಅತಿಥಿಗಳಾಗಿ ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ(ನ)ದ ಅಧ್ಯಕ್ಷ ಎಂ. ರುದ್ರೇಶ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ ಭಾಗವಹಿಸಿದ್ದರು. ನಾಡಿನ ವಿವಿಧ ಮಠಗಳ ಶ್ರೀಗಳು ಉಪಸ್ಥಿತರಿದ್ದರು.
ಶಿವಮೊಗ್ಗದ ಕುಮಾರಿ ಜಿ.ಜಿ. ರಕ್ಷಿತಾರಿಂದ ಭರತ ನಾಟ್ಯ ಪ್ರದರ್ಶನ ಜರುಗಿತು. ಗದಗಿನ ಸಂಗಮೇಶ ಉತ್ತಂಗಿ ಪ್ರಾರ್ಥನೆ ಸಲ್ಲಿಸಿದರು. ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ|| ಬೇಳೂರು ರಾಘವೇಂದ್ರ ಶೆಟ್ಟಿ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಭಕ್ತಾದಿಗಳು ಶ್ರೀ ಕೇದಾರ ಜಗದ್ಗುರುಗಳಿಗೆ ಸುವರ್ಣ ಕಿರೀಟವನ್ನು ಅರ್ಪಿಸಿದರು. ಬೆಂಗಳೂರಿನ ಬಾಳೆಎಲೆ ಬಸವರಾಜ ಅವರು ಐವತ್ತು ಸಾವಿರ ರುದ್ರಾಕ್ಷಿಗಳಿಂದ ತಯ್ಯಾರಿಸಿದ ಬೃಹತ್ ರುದ್ರಾಕ್ಷಿ ಮಾಲೆಯನ್ನು ಉಭಯ ಜಗದ್ಗುರುಗಳಿಗೆ ಅರ್ಪಿಸಿದರು. ಪಾಲ್ಗೊಂಡ ಭಕ್ತರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಹಳೆ ವಿದ್ಯಾರ್ಥಿಗಳ ಸಂಘದವರು ಮಜ್ಜಿಗೆ ಪಾಕೇಟುಗಳನ್ನು ವಿತರಿಸಿದರು.
ಸಮಾರಂಭದ ನಂತರ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಜರುಗಿತು. ಸಂಜೆ ಗಾನ ಗಂಧರ್ವ ಪಂಡಿತ ರಾಜಗುರು ಗುರುಸ್ವಾಮಿ ಕಲಕೇರಿ ಸಂಗಡಿಗರಿ0ದ ಸಂಗೀತ ಸೌರಭ ಜರುಗಿತು. ರಾತ್ರಿ ಶ್ರೀ ಜಗದ್ಗುರು ರೇಣುಕಾಚಾ ಕೃಪಾ ಪೋಷಿತ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಶೃಂಗೇರಿ ಕ್ಷೇತ್ರ ಮಟ್ಟದ ಹೊನಲು ಬೆಳಕಿನ ಪ್ರೊ ಮಾದರಿ ಕಬಡ್ಡಿ ಪಂದ್ಯಾವಳಿ ನಡೆಯಿತು. ಪಾತ:ಕಾಲ 32 ವಟುಗಳಿಗೆ ಶಿವದೀಕ್ಷೆ ಅಯ್ಯಾಚಾರ ಕಾರ್ಯಕ್ರಮ ಜರುಗಿತು.
ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಜಗದ್ಗುರು ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು.