ಪೌರ್ಣಿಮೆ ಪ್ರಯುಕ್ತ ಶ್ರೀ ಸತ್ಯನಾರಾಯಣ ವ್ರತ

ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಆಚಾರ್ಯರ ನೇತೃತ್ವದಲ್ಲಿ “ಹೋಳಿ ಹುಣ್ಣಿಮೆ” ಪ್ರಯುಕ್ತ ಮಾರ್ಚ್ 28 ರಂದು ಶ್ರೀಗುರುರಾಯರ ಸನ್ನಿಧಿಯಲ್ಲಿ ಸಾಮೂಹಿಕ ಸತ್ಯನಾರಾಯಣವ್ರತ ಪೂಜೆಯನ್ನು ಪುರೋಹಿತರಾದ ನಂದಕಿಶೋರ್ ಆಚಾರ್ಯರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಜಿ .ಕೆ ಆಚಾರ್ಯ ಹಾಗೂ ನೂರಾರು ಭಕ್ತರು ಭಾಗವಹಿಸಿ ಶ್ರೀಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾದರು.

Related Articles

ಪ್ರತಿಕ್ರಿಯೆ ನೀಡಿ

Latest Articles