ಡಾ. ಶಿವಾನಂದ ಶಿವಾಚಾರ್ಯ ಅವರ 60ನೇ ಜನ್ಮದಿನೋತ್ಸವ ನಾಳೆ

ತುಮಕೂರು: ಹಿರೇಮಠದ ಅಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಅವರು ತಮ್ಮ 60ನೇ ಜನ್ಮದಿನಾಚರಣೆಯನ್ನು ನಾಳೆ ಮಾರ್ಚ್ 29 ರಂದು ಶ್ರೀಮಠದಲ್ಲಿ ಸರಳವಾಗಿ ಆಚರಿಸಲಿದ್ದಾರೆ. ಸರಕಾರದ ನಿಯಮದ ಪ್ರಕಾರ ಭಕ್ತಾದಿಗಳು ವ್ಯಕ್ತಿಗತ ಅಂತರವನ್ನು ಕಾಪಾಡಿಕೊಂಡು ಶ್ರೀಗಳ ಆಶೀರ್ವಾದವನ್ನು ಪಡೆಯಬಹುದು. ಬೆಳಗ್ಗೆ 9 ರಿಂದ ಹಿರೇಮಠದ ಕರ್ತೃ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಯ ಸನ್ನಿಧಾನದಲ್ಲಿ ಶ್ರೀಗಳ ಪಾದಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶ್ರೀಮಠಕ್ಕೆ ಆಗಮಿಸುವ ಭಕ್ತಾದಿಗಳ ಪ್ರಸಾದದ ವ್ಯವಸ್ಥೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ 0816-2273242 ಅಥವಾ 9480418241 ನ್ನು ಸಂಪರ್ಕಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles