ಮಾರ್ಚ್ 31 ರಿಂದ ಶ್ರೀ ವ್ಯಾಸತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ

ಬೆಂಗಳೂರು:  ಶ್ರೀ ವ್ಯಾಸರಾಜ ಗುರುಸಾರ್ವಭೌಮರ 482ನೇ ಆರಾಧನೆ ಶ್ರೀ ವಿದ್ಯಾವಿಜಯತೀರ್ಥ ಶ್ರೀಪಾದರ ಶಿಷ್ಯರು ಹಾಗೂ ಶ್ರೀ ವ್ಯಾಸರಾಜ ಭಕ್ತ ವೃಂದದಿ0ದ, ಮಾರ್ಚ್ 31, ಏಪ್ರಿಲ್ 1 ಮತ್ತು 2ರಂದುಯನ್ನು ಬೆಂಗಳೂರು ಮಹಾನಗರದ ಕೋಣನಕುಂಟೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯಲಿದೆ. 

ಮಾ. 31 ರಂದು ಬೆಳಗ್ಗೆ 7ಕ್ಕೆ ಶ್ರೀ ವಾದಿರಾಜ ಗುರುಸಾರ್ವಭೌಮರ ಆರಾಧನಾ ಪ್ರಯುಕ್ತ ಶ್ರೀ ಹರಿವಾಯುಸ್ತುತಿ ಮತ್ತು ಯಂತ್ರೋದ್ಧಾರಕ ಮುಖ್ಯ ಪ್ರಾಣದೇವರ ಸ್ತೋತ್ರ ಪಾರಾಯಣ ಹಾಗೂ ಶ್ರೀ ವಾದಿರಾಜರ ಮಹಿಮಾ ಚಿಂತನೆ,  8 ಗಂಟೆಗೆ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ (ವಿದ್ಯಾಮಠ) ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರಿಗೆ ಮತ್ತು ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಕೇಶವನಿಧಿ ತರ‍್ಥ ಶ್ರೀಪಾದರಿಗೆ  ಪೂರ್ಣಕುಂಭ ಸ್ವಾಗತ, 8.30 ಕ್ಕೆ `ಶ್ರೀಮದ್ದಶಪ್ರಮತಿ ದರ್ಶನ ಪ್ರಕಾಶಿನೀ ವಿದ್ವತ್ ಸಭಾ’ ಉದ್ಘಾಟನೆ, ವಿಷಯ: `ಜೀವಿಯ ಸ್ವರೂಪಗತವಾದ ಭೇದ ಮತ್ತು ತಾರತಮ್ಯಗಳ ನಿರ್ದಿಷ್ಟ ಲಕ್ಷಣ ಹಾಗೂ ಅವುಗಳ ಸ್ವರೂಪ’ ಮಹಾ ಮಹೋಪಾಧ್ಯಾಯ, ರಾಷ್ಟçಪತಿ ಪ್ರಶಸ್ತಿ ಪುರಸ್ಕೃತ ಷಟ್‌ದರ್ಶನ ಪ್ರಕಾಂಡ ವಿದ್ವಾನ್  ಡಾ.ರಾಜಾ ಎಸ್. ಗಿರಿಯಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ನಿರ್ವಹಣೆ: ಮ|| ಶಾ|| ಸಂ|| ಹೊಳವನಹಳ್ಳಿ ಶ್ರೀನಿವಾಸಾಚರ‍್ಯ, ಅನೇಕ ಪಂಡಿತರಿ0ದ ವಿಷಯ ವಿಸ್ತಾರ, ಅಭಿಪ್ರಾಯ ಮಂಡನೆ, ಸಮನ್ವಯ .

ಸಂಜೆ 5 ಗಂಟೆಗೆ ಕನಕ- ಪುರಂದರ ಸಾಹಿತ್ಯದ ನೇತಾರರು ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಗೋಷ್ಟಿ ಉದ್ಘಾಟನೆ: ಶ್ರೀ ಶ್ರೀ ಕೇಶವನಿಧಿತೀರ್ಥ ಶ್ರೀಪಾದರು, ಪೀಠಾಧಿಪತಿಗಳು, ಶ್ರೀ ಶ್ರೀಪಾದರಾಜ ಮಠ, ಮುಳಬಾಗಿಲು, ನಿರ್ವಹಣೆ: ಡಾ.ಬಿ.ಎಸ್ .ಅನಿಲ್ ಕುಮಾರ್ 

ಏಪ್ರಿಲ್ 1 ರಂದು ಬೆಳಗ್ಗೆ 7 ಗಂಟೆಗೆ ಶ್ರೀವ್ಯಾಸರಾಜ ಸ್ತೋತ್ರ ಅಷ್ಟೋತ್ತರ ಶತವಾರ ಪಾರಾಯಣ. ಬೆಳಗ್ಗೆ 7.45 ಕ್ಕೆ ಶ್ರೀ ಮಾಧವತೀರ್ಥರ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಸಾಗರ ಮಾಧವತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ವಿದ್ಯಾಸಿಂಧುಮಾಧವತೀರ್ಥ ಶ್ರೀಪಾದರು, ಉತ್ತರಾಧಿಕಾರಿಗಳು ಮಾಧವತೀರ್ಥ ಸಂಸ್ಥಾನ, ಪೂರ್ಣಕುಂಭ ಸ್ವಾಗತ.
ಬೆಳಗ್ಗೆ 8ಕ್ಕೆ 'ಶ್ರೀಮದ್ದಶಪ್ರಮತಿ ದರ್ಶನ ಪ್ರಕಾಶಿನೀ ವಿದ್ವತ್ ಸಭಾ' ವಿಷಯ: `ಜೀವ ಕೃರ್ತೃತ್ವ ವಿಚಾರ  ಮುಂದುವರೆದ ಭಾಗ ಅಧ್ಯಕ್ಷತೆ: ಶ್ರೀ ಶ್ರೀ ವಿದ್ಯಾಸಾಗರ ಮಾಧವತೀರ್ಥ ಶ್ರೀಪಾದರು,  ಸಭಾ ನಿರ್ವಹಣೆ: ಮ.ಶಾ.ಸ. ಶ್ರೀ ಹೊಳಲಗುಂದ ಜಯತೀರ್ಥಾಚಾರ್ಯರವರಿಂದ ಅನೇಕ ಪಂಡಿತರಿ0ದ ವಿಷಯ ವಿಸ್ತಾರ, ಅಭಿಪ್ರಾಯ ಮಂಡನೆ, ಸಮನ್ವಯ.

ಸಂಜೆ 4ಕ್ಕೆ `ಸಭಾ’ ವಿಷಯ `ಕನಕ-ಪುರಂದರ ಸಾಹಿತ್ಯದ ನೇತಾರರು ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಸಾನ್ನಿಧ್ಯ: ಶ್ರೀ ಶ್ರೀ ವಿದ್ಯಾಸಾಗರ ಮಾಧವತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ವಿದ್ಯಾವಿಜಯತೀರ್ಥ ಶ್ರೀಪಾದರು ಸಭಾ ನಿರ್ವಹಣೆ: ಮ.ಶಾ.ಸಂ. ಶ್ರೀ ಕಂಬಾಲೂರು ಸಮೀರಾಚಾರ್ಯರಿಂದ ಅನೇಕ ಪಂಡಿತರಿ0ದ ವಿಷಯ ವಿಸ್ತಾರ, ಅಭಿಪ್ರಾಯ ಮಂಡನೆ, ಸಮನ್ವಯ,

ಏಪ್ರಿಲ್ 2 ರಂದು ಪ್ರಾತಃಕಾಲ 7 ಕ್ಕೆ ಶ್ರೀರಾಘವೇಂದ್ರ ಸ್ತೋತ್ರ ಅಷ್ಟೋತ್ತರ ಪಾರಾಯಣ, ಬೆಳಗ್ಗೆ 7.45ಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತರ‍್ಥ ಶ್ರೀಪಾದರಿಗೆ ಪೂರ್ಣಕುಂಭ ಸ್ವಾಗತ, ಬೆಳಗ್ಗೆ 8 ಕ್ಕೆ ಸಭಾ ವಿಷಯ ‘ಷೋಡಶ ಸಂಸ್ಕಾರಗಳ ಔಚಿತ್ಯ, ಸ್ವರೂಪ ಮತ್ತು ವಿಧಿಗಳು’ (ಪುರೋಹಿತ ಗೋಷ್ಠಿ)
ಸಾನ್ನಿಧ್ಯ: ಶ್ರೀ ಶ್ರೀ ವಿದ್ಯಾವಿಜಯತೀರ್ಥ ಶ್ರೀಪಾದರು, ಗೋಷ್ಠಿ ಅಧ್ಯಕ್ಷತೆ: ಡಾ|| ಚತುರ್ವೇದಿ ವೇದವ್ಯಾಸಾಚಾರ್ಯರು ಸಭಾ ನಿರ್ವಹಣೆ: ಪ್ರಯೋಗ ಚತುರ ಕಂಬಾಲೂರು ಪವಮಾನಾಚಾರ್ಯರಿಂದ ಅನೇಕ ಪಂಡಿತರಿ0ದ ವಿಷಯ ವಿಸ್ತಾರ, ಅಭಿಪ್ರಾಯ ಮಂಡನೆ, ಸಮನ್ವಯ.ಸಂಜೆ 5 ಕ್ಕೆ `ಕನಕ-ಪುರಂದರ ಸಾಹಿತ್ಯದ ನೇತಾರರು ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಸಮ್ಮೇಳನದ ಸಮಾರೋಪ ಸಮಾರಂಭ. ಅಧ್ಯಕ್ಷತೆ: ಶ್ರೀ ಶ್ರೀ 108 ಶ್ರೀ ವಿದ್ಯಾವಿಜಯತೀರ್ಥ ಶ್ರೀಪಾದರಿಂದ ಉತ್ತರಾಧಿಕಾರಿಗಳು ಶ್ರೀ ವ್ಯಾಸರಾಜ ಮಠ (ಸೋಸಲೆ) ಗೋಷ್ಟಿಯ ಅಧ್ಯಕ್ಷತೆ: ಡಾ.ಅನಂತಪದ್ಮನಾಭ ರಾವ್, ವಿಶ್ರಾಂತ ಪ್ರಾಂಶುಪಾಲರು, ವಿಜಯ ಪದವಿ ಪೂರ್ವ ಕಾಲೇಜು ಭಾಗವಹಿಸಿಲಿದ್ದಾರೆ ಎಂದು ಶ್ರೀ ವಿದ್ಯಾವಿಜಯ ತೀರ್ಥ ಶಿಷ್ಯ ವೃಂದ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles