ದೇವರಿಗೆ ಒಣಕೊಬ್ಬರಿ ಅರ್ಪಿಸಿದರೆ ಸರ್ವ ಕಷ್ಟಗಳು ಸಕಲ ದೋಷಗಳು ನಿವಾರಣೆಯಾಗುತ್ತದೆಯಂತೆ. ಸಕಲ ಕಷ್ಟಗಳು ಕಡಿಮೆಯಾಗಿ ಎಲ್ಲ ರೀತಿಯ ದೋಷಗಳಿಂದ ಮುಕ್ತಿ ಕಾಣಬಹುದು ಎಂದು ಹೇಳಲಾಗುತ್ತದೆ. ಕಡಲೆ ಹಿಟ್ಟಿನ ಜೊತೆಯಲ್ಲಿ ಒಣ ಕೊಬ್ಬರಿಯನ್ನು ಹಾಕಿ ಕುಲದೇವರಿಗೆ ನೈವೇದ್ಯ ಮಾಡಿ,ದಂಪತಿಗಳಿಗೆ ದಾನವನ್ನು ಮಾಡಿದ್ರೆ ಸ್ತ್ರೀ ದೋಷ, ಸ್ತ್ರೀ ಋಣ ಕಡಿಮೆಯಾಗುತ್ತದೆ. ಒಣ ಕೊಬ್ಬರಿ ಹಾಗೂ ಸಕ್ಕರೆ ಪುಡಿಯನ್ನು ಮಿಶ್ರಣ ಮಾಡಿ ಎಲ್ಲರಿಗೂ ಹಂಚಿದರೆ ಮಂಗಳ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ. ಈ ಕಾರಣಕ್ಕೆ ಲಗ್ನ ಪತ್ರಿಕೆ ಹಾಗೂ ವರ ಪೂಜೆಯ ಸಮಯದಲ್ಲಿ, ಶುಭ ಕಾರ್ಯದಲ್ಲಿ ಕೊಬ್ಬರಿ ಸಕ್ಕರೆ ಹಂಚುತ್ತೇವೆ.

ಒಣ ಕೊಬ್ಬರಿ ದಾನ ಮಾಡಿದ್ರೆ ಮನೆಯಲ್ಲಿ ದಾರಿದ್ರ್ಯ ಕಡಿಮೆಯಾಗುತ್ತದೆ. ಒಣ ಕೊಬ್ಬರಿಯನ್ನು ತಾಂಬೂಲದಲ್ಲಿ ಇಟ್ಟು ಕೆಂಪು ಅಥವಾ ಬಿಳಿ ಕಲ್ಲು ಸಕ್ಕರೆ ಸಮೇತ ಗುರುಗಳಿಗೆ ಅರ್ಪಿಸಿದರೆ ನಿಂತು ಹೋಗಿರುವ ಕಾರ್ಯಗಳು ಬಹುಬೇಗ ಪೂರ್ತಿಯಾಗುತ್ತದೆ.
























