* ಶ್ರೀನಿವಾಸ ಮೂರ್ತಿ ಎನ್ ಎಸ್
ಹೊಸೂರು ಎಂದೊಡನೆ ಕರ್ನಾಟಕದಲ್ಲಿನ ಈ ಊರು ನೆನಪಿಗೆ ಬರುವುದು ಅಪರೂಪ. ಆದರೆ ಎಚ್ ನರಸಿಂಹಯ್ಯ ಎಂದರೆ ಎಲ್ಲರಿಗೂ ನೆನಪು ಬರುತ್ತದೆ. ಆದರೆ ಅದರಲ್ಲಿನ ಎಚ್ ಎಂದರೆ ಗೌರಿಬಿದನೂರು ತಾಲ್ಲೂಕಿನಲ್ಲಿರುವ ಹೊಸೂರು ಎಂಬ ವಿಷಯ ಬಹಳ ಜನರಿಗೆ ತಿಳಿದಿಲ್ಲ. ಇಲ್ಲಿ ಅಪರೂಪದ ವೀರಭದ್ರ ದೇವಾಲಯವಿದ್ದು ತನ್ನ ಲಕ್ಷಣಗಳಿಂದಲೇ ಗಮನ ಸೆಳೆಯುತ್ತದೆ.
ಇನ್ನು ಇತಿಹಾಸ ಪುಟದಲ್ಲಿ ಹೊಯ್ಸಳರ ಕಾಲದಲ್ಲಿ ಈ ಗ್ರಾಮಕ್ಕೆ ಹೊಸ ಊರು ನಾಡು ಎಂಬ ಹೆಸರು
ಇತ್ತು. ಹೊಯ್ಸಳ ದೊರೆ ಬಲ್ಲಾಳನಿಂದ ನಿರ್ಮಾಣವಾಗಿದ್ದ ಈ ಗ್ರಾಮಕ್ಕೆ ಹೊಸವಿಡು ಎಂಬ ಹೆಸರು ಇತ್ತು. ನಂತರ ಕಾಲದಲ್ಲಿ ಪಾಳೇಗಾರರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿಗೊಂಡಿದೆ. ಈಗ ಒಂದು ಸಣ್ಣ ಗ್ರಾಮವಾಗಿರುವ ಇಲ್ಲಿ ಹಲವು ದೇವಾಲಯಗಳಿವೆ ಇನ್ನು ಇಲ್ಲಿನ ವೀರಭದ್ರ ದೇವಾಲಯ ಊರಿನ ಮಧ್ಯದಲ್ಲಿದ್ದು ನೆಲ ಮಟ್ಟದಿಂದ ಕೆಳಗಿರುವ
ಗರ್ಭಗುಡಿಯಲ್ಲಿ ಸುಂದರವಾದ ಸುಮಾರು ಐದು ಆಡಿ ಎತ್ತರದ ವೀರಭದ್ರನ ಮೂರ್ತಿ ಇದೆ. ಈ ಮೂರ್ತಿಯ ವಿಷೇವೆಂದರೆ ಕೈನಲ್ಲಿರುವ ಚಂದ್ರಾಯುದ. ಮತ್ತೊಂದು ಕೈನಲ್ಲಿ ಬಿಲ್ಲು ಬಾಣ ಇದ್ದರೆ ಕೊರಳಲ್ಲಿನ ರುಂಡಮಾಲೆ ಹಾಗು ರುದ್ರಾಕ್ಷಿ ಸುಂದರವಾಗಿದೆ. ಇನ್ನು ಕಾಲಿನ ಸಮೀಪ ಕೈ ಮುಗಿದು ನಿಂತಿರುವ ದಕ್ಷ ಬ್ರಹ್ಮನ ಶಿಲ್ಪವಿದೆ. ಇಲ್ಲಿ ಶಿವರಾತ್ರಿಯಂದು ಅದ್ದೂರಿಯಾದ ಜಾತ್ರೆ ನಡೆಯಲಿದ್ದು ಆ ಸಮಯದ್ದಲ್ಲಿ ವೀರಗಾಸೆ ಕುಣಿತ
ಪ್ರಸಿದ್ದಿಯಾದದ್ದು.
ಇನ್ನು ಇಲ್ಲಿ ಪದ್ಮಭೂಷಣ ಎಚ್ ನರಸಿಂಹಯ್ಯನವರ ಹುಟ್ಟಿದ ಮನೆ ಇದ್ದು ನಿರ್ವಹಣೆಯ
ಕೊರತೆಯಿಂದ ನಾಶದ ಹಂತದಲ್ಲಿದೆ. ಸಂಭಂದಪಟ್ಟ ಇಲಾಖೆ ಹಾಗು ಊರಿನವರು ಮುತುವರ್ಜಿ
ವಹಿಸದಿದ್ದಲ್ಲಿ ಅದು ನೆನಪಿನ ಕೊಂಡಿ ಆಗುವ ಸಾಧ್ಯತೆಯೆ ಹೆಚ್ಚು.
ತಲುಪವ ಬಗೆ: ಹೊಸೂರು ಗ್ರಾಮ ಗೌರಿಬಿದನೂರು – ಮಧುಗಿರಿ ರಸ್ತೆಯಲ್ಲಿ ಗೌರಿಬಿದನೂರಿನಂದ
ಸುಮಾರು 12 ಕಿ ಮೀ ದೂರದಲ್ಲಿದೆ.