ಚಾರಿತ್ರಿಕ ವ್ಯಕ್ತಿಚಿತ್ರ ಶ್ರೀಕೃಷ್ಣದೇವರಾಯ ಕೃತಿ ಬಿಡುಗಡೆ

ಹಿರಿಯ ಸಂಶೋಧಕ ಮತ್ತು ಕಾದಂಬರಿಕಾರ ಡಾ.ಕೆ.ರಮಾನಂದರವರ ಚಾರಿತ್ರಿಕ ವ್ಯಕ್ತಿಚಿತ್ರ ಶ್ರೀಕೃಷ್ಣದೇವರಾಯ ಕೃತಿಯನ್ನು ನಗರದ ಗಾಂಧಿ ಭವನದಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನ ಅಧ್ಯಕ್ಷ ಜೀರಿಗೆ ಲೋಕೇಶ್ ಲೋಕಾರ್ಪಣೆಗೊಳಿಸಿದರು.
ವಿಜಯನಗರದ ಸಾಮ್ರಾಜ್ಯದ ಕೀರ್ತಿಶಿಖರವಾಗಿದ್ದ ಶ್ರೀಕೃಷ್ಣದೇವರಾಯನ ಕುರಿತು ಆಳವಾದ ಅಧ್ಯಯನ ಮಾಡಿ ರಚಿಸಿರುವ ಈ ಕೃತಿ ಗತವೈಭವವನ್ನು ಮತ್ತೆ ನೆನಪಿಗೆ ತರಿಸುವಂತಿದೆ. ಸಾಹಿತ್ಯ – ಸಂಸ್ಕೃತಿ ಸಂವರ್ಧನೆಗೆ ನೀಡಿದ ಕೊಡುಗೆ ಅಪಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯನಗರ ಕಾಲದ ಶಾಸನಗಳ ಸಾಂಸ್ಕೃತಿಕ ಅಧ್ಯಯನ ನಡೆಸಿ ಡಾಕ್ಟರೇಟ್ ಪಡೆದಿರುವ ಲೇಖಕರು ಐತಿಹಾಸಿಕ ರಾಜಮನೆತನದ ನಾಯಕನೋರ್ವನ ಕುರಿತು ಮನಮುಟ್ಟುವಂತೆ ಚಿತ್ರಿಸಿರುವುದು ಅವರ ಗದ್ಯ ಬರವಣಿಗೆಯ ನಿಪುಣತೆಗೆ ಸಾಕ್ಷಿ ಎಂದು ಕೃತಿ ಪರಿಚಯ ಮಾಡಿದ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ತಿಳಿಸಿದರು.
ಶ್ರೀಕೃಷ್ಣದೇವರಾಯನ ಸಾಧನೆ, ಆಡಳಿತ, ಕಲೆಗೆ ಪ್ರೋತ್ಸಾಹ, ಶಿಲ್ಪಕಲೆಯ ಔನ್ನತ್ಯದ ಬಗೆಗೆ ಲೇಖಕ ಡಾ.ಕೆ.ರಮಾನಂದರವರು ಮಾತನಾಡಿದರು.
ಕಾವ್ಯಕಲಾ ಪ್ರಕಾಶನದ ಪ್ರಕಟಣೆ ಇದಾಗಿದ್ದು, ಈ ಕೃತಿಯ ಬೆಲೆ: ರೂ. 155 /- ವಿವರಗಳಿಗೆ ಮೊ:9901078969.

Related Articles

ಪ್ರತಿಕ್ರಿಯೆ ನೀಡಿ

Latest Articles