- ಡಾ. ಸುದರ್ಶನ್ ಭಾರತೀಯ ನವ ವರುಷ ಮತ್ತೆ ಬಂದಿದೆ ನವ ಹುರುಪು ಸಂತಸ ತಂದಿದೆ. ||ಪ|| ಯುಗದ ಆದಿ ಇದಿರು ನಿಂತಿದೆ ಚೈತ್ರ ಅರಳಿ ಚಿಗುರು ಸೂಸಿದೆ ಶುಕ ಪಿಕ ಸಮೂಹ ಹಾರಿದೆ ನವ ವರುಷ ಮತ್ತೆ ಬಂದಿದೆ ||1|| ಹಿಂದರಿಯದ ಜೀವ ಸಾಗರ ಮುಂದರಿಯದ ಬವಣೆಯಾಗರ ಅವನೊಲುಮೆಯ ಬದುಕೆ ಸಾಕಾರ ಅರಿತು ನಡೆಯೆ ಬಾಳೆ ಗೋಪುರ ||2|| ಹಸಿರೇ ಹೊನ್ನು ನೀರೇ ಬೆಳ್ಳಿ ಉಸಿರು ಉಸಿರಲಿ ಪ್ರಾಣಾಯಾಮ ಶುದ್ಧ ಕಾಯಾ ವಾಚಾ ಮನಸೇ ಸದ್ಯ ತಪವು ಪರಮ ಪದವು. ||3||