ತುಮಕೂರು: ಇಲ್ಲಿನ ತಿಪಟೂರು ತಾಲ್ಲೂಕಿನಲ್ಲಿರುವ ಭಕ್ತರ ಪಾಲಿನ ಪ್ರಸಿದ್ಧ ಕ್ಷೇತ್ರ ದಸರಿಘಟ್ಟ ಶ್ರೀ ಚೌಡೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ.
ನವರಾತ್ರಿ ಪ್ರಯುಕ್ತ ಶ್ರೀ ದುರ್ಗಾ ಹೋಮ, ಹಾಗೂ ದೇವಿಗೆ ರಜತ ಕವಚ ಅಲಂಕಾರ ನೆರವೇರಿದ್ದು ಶ್ರೀ ಆದಿಚುಂಚನಗಿರಿ ಮಂಗಳೂರಿನ ಕಾವೂರು ಶಾಖಾಮಠದ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು.




























