ಶ್ರೀಶೈಲ ಶರಣೆ ಹೇಮರಡ್ಡಿ ಮಲ್ಲಮ್ಮ

ಮೇ 10 ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿ. ಈ ನಿಮಿತ್ತ ಸಕಾಲಿಕ ಲೇಖನ.

* ವೈ.ಬಿ.ಕಡಕೋಳ (ಶಿಕ್ಷಕರು)

ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರ ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದಿದ್ದು, ಈ ಕ್ಷೇತ್ರದ ಅದಿದೇವನಾದ ಶ್ರೀ ಮಲ್ಲಿಕಾರ್ಜುನನ ಪರಮಭಕ್ತೆ ಹೇಮರಡ್ಡಿ ಮಲ್ಲಮ್ಮ. ಸತಿ ಸಾದ್ವಿ ಮಲ್ಲಮ್ಮನ ಭಕ್ತಿಗೆ ಮೆಚ್ಚಿ ಅನವರತ ಬೆಂಬಲಿಸಿ ಅವಳ ಭಕ್ತಿಯನ್ನು ಉತ್ಕಟ ಪರೀಕ್ಷೆಯ ಮೂಲಕ ಮನೆಯವರೆಗೆ ಮತ್ತು ಜನಸಾಮಾನ್ಯರಿಗೆ ಅರಿಯುವಂತೆ ಮಾಡಿ ಕೊನೆಗೆ ತನ್ನಲ್ಲೆ ಅಂತರ್ಧಾನವಾಗುವ0ತೆ ಕರುಣಿಸಿದವನೇ ಶ್ರೀಶೈಲ ಮಲ್ಲಯ್ಯ.

ಕ್ರಿ.ಶ. 15 ನೇ ಶತಮಾನದಲ್ಲಿ ಶ್ರೀಶೈಲ ಸುತ್ತಮುತ್ತಲಿನ ಪ್ರಾಂತಗಳನ್ನು ಅನೇಕ ರೆಡ್ಡಿ ಜನಾಂಗದ ಮನೆತನಗಳು ಆಳುತ್ತಿದ್ದವು. ಈ ಮನೆತನಗಳಿಗೆ ಪಕನಾಕರೆಡ್ಡಿ ಕೊಂಡವೀಡುರೆಡ್ಡಿ ಮತ್ತು ಬಡಗನಾಡು ರೆಡ್ಡಿ ಎಂದು ಕರೆಯುತ್ತಿದ್ದರು. ಇತಿಹಾಸ ಪ್ರಸಿದ್ದವಾದ ಶ್ರೀಶೈಲದ ದಕ್ಷಿಣ ಭಾಗದಲ್ಲಿರುವ ರಾಮಪೂರವು ಶಿವಭಕ್ತಿ ಸಂಪನ್ನರಿ0ದ ತುಂಬಿತ್ತು. ಈ ಊರಿನಲ್ಲಿ ಧರ್ಮ ಮತ್ತು ಭಕ್ತಿಗೆ ಸೋಮರೆಡ್ಡಿ ಎಂಬ ಮನೆತನ ಹೆಸರಾಗಿತ್ತು.

ಸೋಮರೆಡ್ಡಿಯ ಮನೆಯಲ್ಲಿ ನಾಗರೆಡ್ಡಿ ಮತ್ತು ಗೌರಮ್ಮ ದಂಪತಿಗಳು ಶ್ರೀಶೈಲ ಮಲ್ಲಿಕಾರ್ಜುನನ ಪರಮಭಕ್ತರು. ಸದಾಕಾಲ ಸೇವಾನಿರತರು. ಧನ-ಕನಕಾದಿಯಿಂದ ಸಂಪನ್ನರು. ಆದರೆ ಇವರಿಗೆ ಮಕ್ಕಳ ಭಾಗ್ಯ ಮಾತ್ರ ಇರಲಿಲ್ಲ. ಮಕ್ಕಳಿಗಾಗಿ ಹಗಲಿರುಳು ಶ್ರೀಶೈಲ ಮಲ್ಲಿಕಾರ್ಜುನನನ್ನು ಪ್ರಾರ್ಥಿಸುತ್ತಿದ್ದರು. ಶ್ರೀಶೈಲ ಮಲ್ಲಿಕಾರ್ಜುನನ ಅವರ ಭಕ್ತಿಗೆ ಮೆಚ್ಚಿದನು. ಒಂದು ದಿನ ದಂಪತಿಗಳು ಪ್ರಾರ್ಥಿಸಿ ಮಲಗಿದಾಗ ಕನಸಿನಲ್ಲಿ ಬಂದು “ಭಕ್ತರೆ ಚಿಂತಿಸಬೇಡಿ ನಿಮಗೆ ಮಹಿಮಾಶಾಲಿಯಾದ ಸತ್ಪುತ್ರಿ ಜನಿಸುವಳು. ನಿಮ್ಮ ಮನೆತನದ ಕೀರ್ತಿಯನ್ನು ಲೋಕದಲ್ಲಿ ಬೆಳಗುವಳೆಂದು ಅನುಗ್ರಹಿಸಿ” ಮಾಯವಾದನು. ಎಚ್ಚೆತ್ತ ದಂಪತಿಗಳು ಶ್ರೀಶೈಲ ಮಲ್ಲಿಕಾರ್ಜುನ ನೀಡಿದ ಆಶೀರ್ವಾದವು ಬೇಗ ದೊರೆಯಲೆಂದು ಅನುದಿನ ಮಲ್ಲಯ್ಯನನ್ನು ಪೂಜಿಸಿದರು.
ಕೆಲವೇ ದಿನಗಳಲ್ಲಿ ಗೌರಮ್ಮ ಗರ್ಭಧರಿಸಿದಳು. ನವಮಾಸ ತುಂಬಿ ಕ್ರಿ.ಶ. 1422 ರಲ್ಲಿ ಸುಪುತ್ರಿಗೆ ಜನ್ಮವಿತ್ತಳು. ಬಂಧು ಬಾಂಧವರು ಸೇರಿ ಗುರುಗಳ ಸಮ್ಮುಖದಲ್ಲಿ ಸಂತೋಷದಿ0ದ ಶ್ರೀಶೈಲ ಮಲ್ಲಿಕಾರ್ಜುನನ ಹರಕೆಯಿಂದ ಮಗು ಪಡೆದಿದ್ದರಿಂದ ‘ಮಲ್ಲಮ್ಮ’ನೆಂದು ನಾಮಕರಣ ಮಾಡಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ0ತೆ ಚಿಕ್ಕಮಗು ಇರುವಾಗಲೇ ಮಲ್ಲಮ್ಮ ದೈವಭಕ್ತಳು. ತನ್ನ ಗೆಳತಿಯರ ಜೊತೆ ಆಟವಾಡುವಾಗಲೂ ದೇವರ ಪೂಜೆ ಮಾಡುತ್ತಿದ್ದಳಂತೆ. ಪ್ರತಿಯೊಂದರಲ್ಲಿಯೂ ದೈವತ್ವ ಕಾಣುತ್ತಿದ್ದ ಈಕೆ ಆಟವಾಡುವಾಗ ಕೈಗೆ ಸಿಕ್ಕ ಕಾಳು ಹಣ್ಣು ನೈವೇದ್ಯ ಮಾಡಿ ದೇವರಿಗೆ ಉಣಿಸುವಳು. ಹೀಗೆ ದೇವರ ಆಟದಲ್ಲಿಯೇ ಮಲ್ಲಮ್ಮ ಬೆಳೆದಳು.
ಒಮ್ಮೆ ಮಲ್ಲಮ್ಮನ ದೈವ ಪರೀಕ್ಷೆ ಜರುಗಿತು. ರೋಗದಿಂದ ಬಳಲುತ್ತಿದ್ದ ಹಣ್ಣು-ಹಣ್ಣಾದ ಮುದುಕನೊಬ್ಬ “ಅಮ್ಮಾ ನೀರು ಕೊಡಿ ನನಗೆ ಬಾಯಾರಿಕೆ ಆಗಿದೆ ನೀರು ಕೊಡಿ ತಾಯಿ” ಎಂದು ಬೇಡಿದನಂತೆ. ಇವರಿದ್ದ ಆ ಓಣಿಯಲ್ಲಿ ತಿರುಗಾಡುವ ಯಾವ ಜನರೂ ಆತನನ್ನು ನೋಡಿದರೂ ನೋಡದಂತೆ ಮೂಗು ಬಾಯಿ ಮುಚ್ಚಿಕೊಂಡು ನಡೆಯತೊಡಗಿದರು. ಮುದುಕ ಒಂದೇ ಸಮನೆ ಕೂಗಿಕೊಳ್ಳುವದನ್ನು ಮನೆಯ ಮುಂದೆ ಗೆಳತಿಯರೊಂದಿಗೆ ಆಟವಾಡುವ ಮಲ್ಲಮ್ಮ ನೋಡಿದಳು. ಆಡುವುದು ಬಿಟ್ಟು ಓಡಿ ಬಂದು ಮನೆಯೊಳಗೆ ಹೋಗಿ ತಂಬಿಗೆಯಲ್ಲಿ ನೀರು ತಂದು ”ಕುಡಿಯಿರಿ” ಎಂದು ಕೊಟ್ಟಳು. ನೀರು ಕುಡಿದ ಮುದುಕ “ನಿನ್ನ ದಯಾಗುಣದಿಂದ ಬದುಕಿದೆನು ಮಗಳೆ ನಿನ್ನ ಕೀರ್ತಿ ನಾಡಿನ ತುಂಬಾ ಬೆಳಗಲಿ” ಎಂದು ಆಶೀರ್ವದಿಸಿ ಹೋದನು ಎಂಬ ಒಂದು ಘಟನೆ ಅವಳಲ್ಲಿದ್ದ ದಯೆ, ಕರುಣೆಗೆ ಹಿಡಿದ ಕೈಗನ್ನಡಿ. ಅವಳ ಬದುಕಿನುದ್ದಕ್ಕೂ ಇಂಥ ಅನೇಕ ಸಂಗತಿಗಳನ್ನು ಅವಳ ಚರಿತ್ರೆಯಲ್ಲಿ ನಾವು ಕಾಣುತ್ತೇವೆ.
ಮಲ್ಲಮ್ಮ ದೊಡ್ಡವಳಾಗಿ ಬೆಳೆದು ನಿಂತಳು. ತಂದೆ-ತಾಯಿಗಳು ಮಲ್ಲಮ್ಮನಿಗೆ ವರ ನೋಡಲು ಪ್ರಾರಂಭಿಸಿದರು. ಗಿರಿರಡ್ಡಿ ಪದ್ಮಾವತಿ ದಂಪತಿಗಳಿಗೆ ಐದು ಜನ ಗಂಡು ಮಕ್ಕಳು ಜನಿಸಿದರು. ಮೊದಲನೆಯವನು ಕೋಮಟಿ ವೆಂಕಾರಡ್ಡಿ, ಎರಡನೆಯವರನು ನಾಗರಡ್ಡಿ ಮೂರನೆಯವನು ಬರಮರೆಡ್ಡಿ, ನಾಲ್ಕನೆಯವನು ನಾಗೇಂದ್ರ ರೆಡ್ಡಿ, ಐದನೆದವನು ವೇಮನರೆಡ್ಡಿ. ಇವರಲ್ಲಿ ಮೂರನೆಯವನಾದ ಬರಮರೆಡ್ಡಿಯು ಸ್ವಭಾವತ ಮುಗ್ದನೂ ವ್ಯವಹಾರ ಚತುರನಲ್ಲದಿದ್ದರೂ ದೈವಭಕ್ತಿ ಸಂಪನ್ನನು. ಹೇಮರೆಡ್ಡಿಯವರ ಮಗ ಭರಮರಡ್ಡಿಯೊಂದಿಗೆ ರಾಮಪೂರದ ಸೋಮರೆಡ್ಡಿಯವರ ಮಗಳು ಮಲ್ಲಮ್ಮನ ಮದುವೆ ಕ್ರಿ.ಶ. 1444 ರಲ್ಲಿ ಶುಭದಿನದಲ್ಲಿ ವಿಜೃಂಭಣೆಯಿ0ದ ನೆರವೇರಿತು. ಇದು ಕೂಡ ಅವಳ ಬದುಕಿನಲ್ಲಿ ತಿರುವು ಪಡೆದುಕೊಂಡ ಘಟ್ಟ.

ಗುಣಶೀಲೆ ಮಲ್ಲಮ್ಮ
ಮಲ್ಲಮ್ಮ ಒಳ್ಳೆ ಸುಶೀಲೆ ಮನೆಯ ಕೆಲಸವನ್ನು ತಾನೇ ಹಿರಿಯಳೆಂದು ಒಳ್ಳೆ ಹಿಡಿತದಿಂದ ಮಿತವ್ಯಯದಿಂದ ಅಚ್ಚುಕಟ್ಟಾಗಿ ದಕ್ಷತೆಯಿಂದ ಮಾಡುತ್ತಿದ್ದಳು. ನಸುಕಿನಲ್ಲಿ ಎದ್ದು ಸ್ನಾನಮಾಡಿ ಭಸ್ಮಧರಿಸಿ ಹಿರಿಯರಿಗೆ ನಮಸ್ಕರಿಸಿ ಅಂಗಳವನ್ನು ಗೋಮಯದಿಂದ ಸಾರಿಸಿ ರಂಗದಲ್ಲಿ ಚಿತ್ರಿಸಿ ಉತ್ಸಾಹ ಬೀರುವಳು. ಅತಿಥಿಗಳನ್ನು ಆದರದಿಂದ ಸತ್ಕರಿಸುವಳು. ಅವಳ ದೈವಭಕ್ತಿ ತನ್ನಷ್ಟಕ್ಕೆ ತಾನೇ ಪತಿಯ ಮನೆಯಲ್ಲಿ ಸಾಂಗವಾಗಿ ಸಾಗಿತ್ತು. ಇದು ಅವಳ ಸವತಿಯರಿಗೆ ಮಲತಾಯಿಗೆ ಸಹಿಸದಾಯಿತು. ಅವರು ಮಲ್ಲಮ್ಮನ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಕಾಡತೊಡಗಿದರು. ಇದರ ಪರಿಣಾಮವಾಗಿ ಮಲ್ಲಮ್ಮನಿಗೆ ಮನೆಯ ದನವನ್ನು ಕಾಯುವ ಕೆಲಸ ಒಪ್ಪಿಸಲಾಯಿತು.
ಮಲ್ಲಮ್ಮನು ತನಗೊಪ್ಪಿಸಿದ ದನಕಾಯುವ ಕೆಲಸವನ್ನು ಕೂಡ ನಿಷ್ಠೆಯಿಂದ ಮಾಡುತ್ತಾ ಇದೊಂದು ಮಲ್ಲಿಕಾರ್ಜುನನ ಸೇವೆಯೆಂದು ತಿಳಿದಳು. ಒಂದು ದಿನ ಶ್ರೀಶೈಲ ಮಲ್ಲಿಕಾರ್ಜುನನು ಹೇಮರೆಡ್ಡಿಯ ಮನೆಗೆ ವೃದ್ಧ ಜಂಗಮನಾಗಿ ಭಿಕ್ಷೆಗೆ ಬಂದನು. ಆದರೆ ಆ ಮನೆಯ ಸೊಕ್ಕಿನ ಸೊಸೆಯರು ಅವನನ್ನು ಸತ್ಕರಿಸದೆ ಭಿಕ್ಷೆ ನೀಡದೆ ನಿಷ್ಠುರ ನುಡಿಗಳಿಂದ ಹೀಯಾಳಿಸಿ ಬೈದು ಅಂಗಳಕ್ಕೆ ನೂಕಿ ಕೆಡವಿದರು. ಜಂಗಮನು ತಾಪದಿಂದ ಆ ಮನೆಯಿಂದ ಹಿಂದಿರುಗಿದನು.
ತುಸು ದಿವಸಗಳಲ್ಲೆ ಹೇಮರಡ್ಡಿಯ ಮನೆಯ ಐಶ್ವರ್ಯವೆಲ್ಲ ಮಾಯವಾಯಿತು. ಸಿರಿ ಅಡಗಿ ಧಾನ್ಯದ ರಾಶಿ ಕಾಣದಾಯಿತು. ಅತ್ತೆ ಹಾಗೂ ಸೊಸೆಯರಿಗೆ ಸಹಿಸಲಸಾಧ್ಯ ಬೇನೆಗಳು ಅಂಟಿಕೊ0ಡವು. ಮಕ್ಕಳು ಅನ್ನ ನಿರ್ಗತಿಕರಾದರು. ಇದೆಲ್ಲ ಆ ಜಂಗಮನನ್ನು ಬೈಯ್ದು ಹೊಡೆದಿದ್ದರ ಫಲವೆಂದು ಹೇಮರೆಡ್ಡಿಗೆ ಅರಿವಾಯಿತು. ಕೂಡಲೇ ಅವನು ಮಲ್ಲಮ್ಮನಲ್ಲಿ ಈ ಸಂಗತಿ ಹೇಳಿಕೊಂಡನು. ಮಲ್ಲಮ್ಮನು ಶ್ರೀಶೈಲ ಮಲ್ಲಿಕಾರ್ಜುನನ್ನು ಪರಿ ಪರಿಯಿಂದ ಪ್ರಾರ್ಥಿಸಿದಳು. ಹಾಗೂ ಮಲ್ಲಯ್ಯನ ಪಾದೋದಕಗಳನ್ನು ತನ್ನ ಬಳಗದವರಿಗೆ ಸಿಂಪಡಿಸಿದಳು. ಆಗಲೇ ಅವರೆಲ್ಲರೂ ರೋಗರಹಿತರಾಗಿ ಮೊದಲಿನಂತೆ ನೆಮ್ಮದಿಯುಳ್ಳವರಾದರು. ಹೀಗೆ ಬದುಕಿನುದ್ದಕ್ಕೂ ಆದರ್ಶಪ್ರಾಯಳಾಗಿ ಬದುಕಿದ ಮಲ್ಲಮ್ಮ ಇಂದು ಜಗತ್ತಿಗೆ ತನ್ನ ಬದುಕಿನಿಂದ ಮಾದರಿಯಾಗಿರುವಳು.


ಕೊನೆ ಕೊನೆಗೆ ಮಲ್ಲಮ್ಮನು ಶ್ರೀಗಿರಿಯಲ್ಲಿ ತನ್ನ ಪತಿಯೊಡನೆ ಕೆಲವು ವರ್ಷ ತಪಸ್ಸು ಮಾಡಿ ಸುಮಾರು 1474 ರಲ್ಲಿ ಲಿಂಗದಲ್ಲಿ ಲೀನವಾದಳು. ದಾನಕ್ಕೆ ಕರ್ಣ, ಸತ್ಯಕ್ಕೆ ಹರಿಶ್ಚಂದ್ರ, ನೀತಿಗೆ ಧರ್ಮರಾಜ, ಛಲಕ್ಕೆ ದುರ್ಯೋಧನ, ಪತಿವ್ರತಕ್ಕೆ ಪಂಚಕನ್ಯೆಯರು ಹೆಸರಾದಂತೆ, ಅತ್ತೆ ಮನೆ ಸೊಸೆತನಕ್ಕೆ ಹೇಮರೆಡ್ಡಿ ಮಲ್ಲಮ್ಮಳ ಹೆಸರು ಕಳಶ ಪ್ರಾಯ. ‘ಮಹಿಳೆ ತ್ಯಾಗದ ಪ್ರತೀಕ’ ಎಂಬ ಮಾತು ಮಲ್ಲಮ್ಮನ ಬೇಡಿಕೆಯಿಂದ ಸತ್ಯವಾಗಿದೆ. ಕೇವಲ ಸಿರಿತನವನ್ನಷ್ಟೇ ಬೇಡಿ ಸುಮ್ಮನಾಗಿದ್ದರೆ ಮಲ್ಲಮ್ಮನ ವ್ಯಕ್ತಿತ್ವದಲ್ಲಿ ಕೊಂಚ ಕೊರತೆ ಕಾಣುತ್ತಿತ್ತೇನೋ ಆದರೆ ತನ್ನ ಕುಲದವರಿಗೆ ಬಂದ ನಿಮ್ಮೆöÊಸಿರಿಗೆ ಹಿಗ್ಗದಿರಿ, ದಾನದೊಳು ಹಿಂದಾಗದಿರಿ ಎಂದು ಅಮೂಲ್ಯ ಸಂದೇಶ ಸಾರಿ ಈ ಕೊರತೆಯೂ ಕಾಣದಂತೆ ಮಾಡಿದಳು.

ಪ್ರಸ್ತುತ ಸಮಾಜಕ್ಕೆ ಹೇಮರಡ್ಡಿ ಮಲ್ಲಮ್ಮ ಆದರ್ಶವಾಗಿ ನಿಲ್ಲುವಳು. ಇಂದಿನ ವಿಭಕ್ತ ಕುಟುಂಬಕ್ಕೆ ಮಾದರಿಯಾಗಿದ್ದಾಳೆ. ಕೇವಲ ಅವಳ ಬದುಕಿನ ಸಂದೇಶ ರೆಡ್ಡಿ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಮನುಕುಲಕ್ಕೆ ಅವಳು ನೀಡಿದ ತಾಳ್ಮೆ, ತ್ಯಾಗ, ಸಹನೆ ಹಾಗೂ ಒಂದುಗೂಡಿಸುವ ಮನೋಭಾವವು. ಎಲ್ಲ ಸಮುದಾಯಕ್ಕೂ ಮಾದರಿಯಾಗಿದೆ.

ಮಲ್ಲಮ್ಮನ ಕುರಿತು ಹಲವು ಪುರಾಣ, ಪುಣ್ಯಕತೆಗಳಿವೆ. ಮಲ್ಲಮ್ಮನ ಬಗ್ಗೆ ಹಲವು ಪವಾಡದ ಸಂಗತಿಗಳು
ಬಿತ್ತುವ ಬೀಜವನ್ನು ಜಂಗಮಗೆ ಕೊಟ್ಟು ಮುಳಲು ಬಿತ್ತಿ ಧಾನ್ಯವನ್ನು ಬೆಳೆದುಕೊಂಡ ಮಲ್ಲಮ್ಮನ ಅನುಗ್ರಹದಿಂದ ಬೇರೆ ದಂಪತಿಗಳು ಮಳಲು ಬಿತ್ತಿ ಹೊನ್ನ ಬೆಳೆದು ಮುಕ್ತರಾದದ್ದು.
ದುರ್ವ್ಯಸನವನ್ನು ಬಿಡದೆ ಗತಿಗೆಟ್ಟ ಅವಳ ಮೈದುನನಾದ ವೇಮರೆಡ್ಡಿಗೆ ಮುಗುತಿಯ ಕೊಟ್ಟು ಮೋಹದ ಬಲೆಯನ್ನು ಬಿಡಿಸಿ ಕೃಷಿ ಕಾಯಕಕ್ಕೆ ಹಚ್ಚಿ ಯೋಗಿ ಮಾಡಿದ ಮಹಾಸಾದ್ವಿ ಮಲ್ಲಮ್ಮ.

ಮಲ್ಲಮ್ಮಳ ಪವಾಡ
ಮಲ್ಲಮ್ಮನು ವೇಮರೆಡ್ಡಿಯಿಂದ ಕಾಡಕ ವಡಿಯನ್ನು ಬಿತ್ತಿಸಿ ಹೊನ್ನುಗಳನ್ನು ಒಕ್ಕಿಸಿದು. ಮತ್ತು ಸ್ತಿçà ಧರ್ಮ ನಿಸ್ಪçಹತೆ ನೀತಿ ಶಿವಭಕ್ತಿಗಳನ್ನು ತಿಳಿಸಿ ನೆರೆಹಳ್ಳಿಯ ದಂಪತಿಗಳನ್ನು ಉದ್ದರಿಸಿದ್ದು,
ಶಿವದ್ರೋಹದಿಂದ ಕುರುಡನಾದ ಕಾಳಿದಾಸನಿಗೆ ಮಲ್ಲಮ್ಮನು ಕಣ್ಣುಕೊಟ್ಟು ರಕ್ಷಿಸಿದ್ದು, ಹುಟ್ಟುಗುರುಡರಿಗೆ ಕಣ್ಣುಕೊಟ್ಟು ಶಿವಭಕ್ತರನ್ನು ಮಾಡಿದ್ದು, ಮಲ್ಲಮ್ಮನು ಮಾವನಿಗೆ ಮಲ್ಲಿಕಾರ್ಜುನನನ್ನು ತೋರಿಸಿ, ಕಾಡಿನಲ್ಲಿ ಕೂಡಿಸಿಟ್ಟ ಕುಳಬಾನವನ್ನು ಮುಟ್ಟಿದಾಗ ಅದು ಹೊನ್ನ ರಾಶಿಯಾಗಿ ಮಾರ್ಪಟ್ಟಿದ್ದು ಆಗ ಹೇಮರಡ್ಡಿಯು ಹನ್ನೆರಡು ಸಾವಿರ ಕೂಲಿಕಾರರನ್ನು ಬರಮಾಡಿಕೊಂಡು ಮಲ್ಲಿಕಾರ್ಜುನನ ಮಂದಿರವನ್ನು ನಿರ್ಮಿಸಿದ್ದು ಈ ಎಲ್ಲ ಘಟನೆಗಳು ಅವಳ ಬದುಕಿನುದ್ದಕ್ಕೂ ನಡೆಯುವ ಮೂಲಕ ಮಹಾಸಾದ್ವಿ ಮಲ್ಲಮ್ಮನೆಂದು ಅವಳನ್ನು ಕರೆಯುವಂತಾಯಿತು. ಸ್ವತಃ ತನ್ನ ಮಾವನಿಗೆ ತನ್ನ ಹಿತನುಡಿಗಳಿಂದ ಮನೆಯಲ್ಲಿ ನಡೆಯುತ್ತಿರುವ ಕಟುಸತ್ಯಗಳನ್ನು ಹೊರಗೆಡಹುವ ಮೂಲಕ ತನ್ನ ಗಂಡನಿಗೂ ಜ್ಞಾನವನ್ನುನೀಡಿದ್ದು ಅವಳ ಬದುಕಿನ ಅನೇಕ ಸಂಗತಿಗಳಿ0ದ ತಿಳಿದು ಬರುತ್ತದೆ.
ಶ್ರೀಶೈಲ ಮಲ್ಲಯ್ಯನು ಮಲ್ಲಮ್ಮನನ್ನು ಕುರಿತು “ತಾಯೇ ನೀನು ಅನನ್ಯ ಭಕ್ತಿಯಿಂದ ನನ್ನನ್ನು ಈ ರೀತಿ ಉಪಚರಿಸಿದ ಇತಿಹಾಸ ನಿರಂತರ ಪ್ರಸಿದ್ದವಾಗಲಿ. ನಿನ್ನ ಪವಿತ್ರ ಕುಲವು ಧರಣಿಯ ಮೇಲೆ ಸದಾ ಧನ, ಧಾನ್ಯ ಮತ್ತು ಬಂಗಾರ ವಿಶೇಷಗಳಿಂದ ಮರೆಯಲಿ ನಿನಗೆ ಕೈಲಾಸದಲ್ಲಿ ಶರಣಪದವಿ ದೊರಕಲಿ” ಎಂದು ಅನುಗ್ರಹಿಸಿ ಲಿಂಗದಲ್ಲಿ ಅಂತರ್ಧಾನನಾದನು. ಈ ಮಹಿಮಾ ದೃಶ್ಯವನ್ನು ನೋಡಿದ ಮಲ್ಲಮ್ಮನು ತನ್ನ ಬಳಗವನ್ನೆಲ್ಲ ಕರೆದು ಈ ವರಪ್ರಧಾನದಿಂದ ಬರುವ ಐಶ್ವರ್ಯಕ್ಕೆ ಹಿಗ್ಗಬೇಡಿ, ದಾನದಲ್ಲಿ ಹಿಂದಾಗಬೇಡಿ ಎಂದು ಬೋಧಿಸಿದಳು.

ನಾಟಕ ಮತ್ತು ಚಲನಚಿತ್ರಗಳಲ್ಲಿ ಮಲ್ಲಮ್ಮಳ ಬದುಕಿನ ಚಿತ್ರಣ
ಶ್ರೀಕಂಠಶಾಸ್ತ್ರೀಗಳು ಬರೆದ ಹೇಮರೆಡ್ಡಿ ಮಲ್ಲಮ್ಮ ಎಂಬ ನಾಟಕವು ಮಲ್ಲಮ್ಮನ ಚರಿತ್ರೆಯನ್ನು ನಿರೂಪಿಸುತ್ತದೆ. ಶಾಸ್ತ್ರೀಗಳು ಬರೆದ ಈ ಕೃತಿಯು ಹೆಣ್ಣು ಮಕ್ಕಳಿಗಾಗಿಯೇ ರಚಿತವಾದ ಕೃತಿ ನೀತಿಬೋಧಕವಾಗಿದೆ. ಮಲ್ಲಮ್ಮನ ಜೀವನವು ನಾಟಕ ರೂಪದಲ್ಲಿ ಹಲವಾರು ಪವಾಡಗಳನ್ನು ಹೆಣೆದು ಮನಮುಟ್ಟುವಂತೆ ರಚಿಸಿಕೊಂಡಲಾಗಿದೆ. ಇದು ಸುಂದರ ಗದ್ಯದಲ್ಲಿದೆ. ಹೇಮರೆಡ್ಡಿ ಮಲ್ಲಮ್ಮ ನಾಟಕವು ದೀರ್ಘ ಕಥೆಯನ್ನೊಳಗೊಂಡಿದ್ದರಿ0ದ ಪೂರ್ವಾರ್ಧ ಉತ್ತರಾರ್ಧ ಭಾಗಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ಭಾಗದಲ್ಲಿ ನಾಲ್ಕು ಅಂಕಗಳಿವೆ.ಒಟ್ಟಾರೆ ಇಡೀ ನಾಟಕದ ಕಥಾನಾಯಕಿಯಾಗಿ ಅವಳ ಜೊತೆಗೆ ಒಟ್ಟು ಇಪ್ಪತೈದು ಪಾತ್ರಗಳನ್ನು ಕೃತಿಕಾರರು ರಚಿಸಿರುವರು.
ಕನ್ನಡ ಚಿತ್ರರಂಗದಲ್ಲಿ ಬಿ.ಪುಟ್ಟಸ್ವಾಮಿಯವರ ಕಾದಂಬರಿ ಆಧಾರಿತ ಮಲ್ಲಮ್ಮನ ಪವಾಡ ಹೆಸರಿನಲ್ಲಿ ೧೯೬೯ ರಲ್ಲಿ ಚಲನಚಿತ್ರವು ಡಾ.ರಾಜಕುಮಾರ.ಬಿ.ಸರೋಜಾದೇವಿಯವರ ನಟನೆಯಲ್ಲಿ ಬಂದಿದ್ದು ಇದರಲ್ಲಿ ಮಲ್ಲಮ್ಮನ ಬದುಕಿನ ಕೆಲವು ಘಟ್ಟಗಳನ್ನು ಬಹಳ ವೈಶಿಷ್ಟö್ಯಪೂರ್ಣವಾಗಿ ಚಿತ್ರಿಸಿದ್ದು, ಬಿ.ಸರೋಜಾದೇವಿ ಅಭಿನಯ ನಿಜಕ್ಕೂ ಅಮೋಘವಾಗಿದೆ. ಈ ಚಿತ್ರವು ಚಿತ್ರಬ್ರಹ್ಮ ಎಸ್.ಆರ್.ಪುಟ್ಟಣ್ಣ ಕಣಗಾಲ್ ರ ನಿದೇಶನದಲ್ಲಿ ಅದ್ಬುತವಾಗಿ ಮೂಡಿಬಂದಿದೆ.

೨೦೦೫ ರಲ್ಲಿ “ಮಹಾಸಾದ್ವಿ ಮಲ್ಲಮ್ಮ” ಚಲನಚಿತ್ರವು ಸಾಯಿಕುಮಾರ್ ಮೀನಾರ ನಟನೆಯಲ್ಲಿ ಪ್ರಚಲಿತ ಮಲ್ಲಮ್ಮನ ದೇವಾಲಯದೊಂದಿಗೆ ಅವಳ ಬದುಕಿನ ಘಟ್ಟಗಳನ್ನು ವರ್ಣದಲ್ಲಿ ತೋರಿಸಿತು. ಹೀಗೆ ಮಲ್ಲಮ್ಮಳ ಪತಿವೃತೆ ಧರ್ಮವನ್ನು ಮೂರೂ ಚಲನಚಿತ್ರಗಳು ವಿಭಿನ್ನವಾಗಿ ತೋರಿಸುವ ಮೂಲಕ ಮಲ್ಲಮ್ಮಳ ಬದುಕಿನ ಮೇಲೆ ಬೆಳಕು ಚಲ್ಲುವ ಪ್ರಯತ್ನ ಮಾಡಿವೆ.

ಹೇಮರಡ್ಡಿ ಮಲ್ಲಮ್ಮಳ ಕುರಿತು ಬಾಗಲಕೋಟ ಜಿಲ್ಲೆಯ ಹುನಗುಂದದ ಡಾ.ಮಲ್ಲಣ್ಣ ನಾಗರಾಳ ವಿಶೇಷ ಅಧ್ಯಯನ ಕೈಗೊಂಡಿದ್ದರು. ಹೇಮರಡ್ಡಿ ಮಲ್ಲಮ್ಮಳ ಕುರಿತು ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ ಆಳಂದದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸುಮಂಗಲಾ ನಂದೀಶ ರಡ್ಡಿಯವರು ಪ್ರೊ.ಎಸ್.ಎಂ.ಹಿರೇಮಠರ ಮಾರ್ಗದರ್ಶನದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿ 2010 ರಲ್ಲಿ ಡಾಕ್ಟರೇಟ್ ಪದವಿ ಗೌರವವನ್ನು ಪಡೆದಿರುವರು. ಇವರು ಕ್ಷೇತ್ರ ಅಧ್ಯಯನವನ್ನು ವೈಶಿಷ್ಟö್ಯಪೂರ್ಣವಾಗಿ ಮಾಡಿದ್ದು ಅಲ್ಲಿಯೂ ಕೂಡ ಮಲ್ಲಮ್ಮಳ ಬದುಕಿನ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಮಾಡಿರುವರು.

Related Articles

ಪ್ರತಿಕ್ರಿಯೆ ನೀಡಿ

Latest Articles