ವ್ಯಾಸರಾಯರು

*ಜೆ.ಅರ್.ಶಿವಕುಮಾರ್, ಚಿತ್ರದುರ್ಗ

ವ್ಯಾಸರಾಜನು ನೀನಯ್ಯ
ಶ್ರೀಪಾದರಾಜರ ಶಿಷ್ಯನಯ್ಯ
ವಿಜಯನಗರದ ಗುರುವಾಗಿ
ಧರ್ಮ ರಕ್ಷಣೆಯ ಮಾಡಿದೆಯಯ್ಯ

ಕನ್ನಡ ಭಾಷೆಯ ಗೀತೆಯ ರಚಿಸಿ
ಹೊಸ ಸಂಪ್ರದಾಯವ ಕೊಟ್ಟವರಯ್ಯ
ಯಂತ್ರೋದ್ಧಾರಕ ಪ್ರಾಣದೇವನ
ಪ್ರತಿಷ್ಠಾಪಿಸಿದ ಮಹಿಮರಯ್ಯ

ಕನಕ,ಪುರಂದರ ರ ಗುರುವೆಂದು
ಪ್ರಖ್ಯಾತಿಯನು ಪಡೆದವರೈಯ್ಯ
ವೆಂಕಟರಮಣನ ಭಜಿಸುತಲಿ
ಆನಂದವನು ಪಡೆದವರೈಯ್ಯ 

ವ್ಯಾಸರಾಯರ ಕೀರ್ತನೆಗಳಲಿ
ಕೃಷ್ಣ ದೇವನ ಕಂಡವರಯ್ಯ
ಶ್ರೀಕೃಷ್ಣ ನೆಂಬ ಅಂಕಿತ ನಾಮದಿ
ಜನಮನದಲ್ಲಿ ನೆಲೆಸಿಹರಯ್ಯ.

Related Articles

ಪ್ರತಿಕ್ರಿಯೆ ನೀಡಿ

Latest Articles