ಅನಾದಿಕಾಲದಿಂದಲೂ ಆಚರಣೆಯಲ್ಲಿ ಉಳಿದುಕೊಂಡು ಬಂದ ಪದ್ಧತಿಗಳಲ್ಲಿ ದೇವರಿಗೆ ಆರತಿ ಬೆಳಗುವುದು ಕೂಡಾ ಒಂದು. ದೇವರಿಗೆ ಯಾಕೆ ಆರತಿ ಮಾಡಬೇಕು, ಅದರ ಮಹತ್ವ ಏನು, ವಿವಿಧ ಪ್ರಕಾರದ ಆರತಿ ಬೆಳಗುವುದರಿಂದ ನಮ್ಮ ಮೇಲಾಗುವ ಪರಿಣಾಮ ಏನು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.
ಆರತಿ ಮಾಡುವುದು ಶುಭ ಸಂಕೇತ. ಅದರಿಂದ ಮನೆಯಲ್ಲಿ ಅಭಿವೃದ್ಧಿ, ಸಂತಾನ, ಸಂತೋಷ ಹೆಚ್ಚಾಗುವುದು. ದಾರಿದ್ರ್ಯ ದೂರವಾಗುತ್ತವೆ.
ಏಕಾರತಿ (ಒಂದು): ಮಾಡುವುದರಿಂದ ಪೂಜೆಯ ಪೂರ್ಣ ಫಲ ದೊರೆಯುತ್ತದೆ. ಏಕಾರತಿ ಅಂದರೆ ದೇವರಿಗೆ ಧೂಪದ ನಂತರ ದೀಪ ಸಮರ್ಪಣೆ.
ದ್ವಿ ಆರತಿ(ಎರಡು): ಮಾಡುವುದರಿಂದ ದಾಂಪತ್ಯ ಸಖ್ಯ ಫಲ ದೊರೆಯುತ್ತದೆ. ದ್ವಿ ಆರತಿ ಅಂದರೆ ನೈವೇದ್ಯದ ನಂತರ ಎರಡು ನೀಲಾಂಜನ ಇಟ್ಟು, ಅಥವಾ ಹೂರಣದ ಆರತಿ, ಗೋಧಿ ಹಿಟ್ಟನ್ನು ಹಾಲಿನಲ್ಲಿ ಕಲಿಸಿ ಆರತಿ. ಎರಡು ಆರತಿ ಲಕ್ಷ್ಮೀನಾರಾಯಣ, ಶಿವ-ಪಾರ್ವತಿಯರ ಸಂಕೇತ.ˌ ಹೀಗೆ ಮಾಡುವುದರಿಂದ ಮನೆಯಲ್ಲಿ ದಾಂಪತ್ಯ ಕಲಹಗಳು ಉಂಟಾಗುವುದಿಲ್ಲ.
ಪಂಚ ಆರತಿ (ಐದು): ಪಂಚ ಆರತಿ ಅಂದರೆ ಹಬ್ಬ ಹರಿದಿನಗಳಲ್ಲಿ ಮಾಡುವ ಆರತಿ ಇದರಿಂದ ಲಕ್ಷ್ಮಿ ಪ್ರೀತಳಾಗುತ್ತಾಳೆ.
ನವ ಆರತಿ (ಒಂಬತ್ತು): ಮಾಡುವುದರಿಂದ ಇಡೀ ವರ್ಷ ವೃದ್ದಿ ಫಲ ದೊರೆಯುತ್ತದೆ.
ಏಕಾದಶ ಆರತಿ (ಹನ್ನೊಂದು): ಮಾಡುವುದರಿಂದ ಪರಿಸರದಲ್ಲಿ ಸಸ್ಯವೃದ್ದಿ ಆಗುತ್ತದೆ.
ದ್ವಾದಶ ಆರತಿ (ಹನ್ನೆರಡು): ಮಾಡುವುದರಿಂದ ಸುಖ ನೆಮ್ಮದಿಯುಂಟಾಗುತ್ತದೆ. ಲಕ್ಷ್ಮೀನಾರಾಯಣರು ಪ್ರೀತರಾಗುತ್ತಾರೆ
ಷೋಡಶ ಆರತಿ (ಹದಿನಾರು): ಮಾಡುವುದರಿಂದ ವಿಶೇಷ ಧನಲಾಭವುಂಟಾಗುತ್ತದೆ. ಮಂಗಳಕಾರ್ಯಗಳು ನೆರವೇರುತ್ತವೆ.
ಏಕವಿಂಶತಿ (ಇಪ್ಪತ್ತೊಂದು): ಮಾಡುವುದರಿಂದ ರಾಜ್ಯಲಾಭ ದೊರೆಯುತ್ತದೆ.
ಚತುರ್ವಿಂಶತಿ ಆರತಿ (ಇಪ್ಪತ್ನಾಲ್ಕು): ಉತ್ತಮ ಮಳೆ ಬೆಳೆ ಉಂಟಾಗುತ್ತದೆ.
ನಕ್ಷತ್ರ ಆರತಿ (ಇಪ್ಪತ್ತೇಳು): ಸಕಲ ದೇವತೆಗಳು ಅನುಗ್ರಹಿಸುತ್ತಾರೆ.
ನಾಗ ಆರತಿ: ಮಾಡುವುದರಿಂದ ಉತ್ತಮ ಸಂತಾನ ವೃದ್ಧಿಯಾಗುತ್ತದೆ.
ಕೂರ್ಮ ಆರತಿ: ಮಾಡುವುದರಿಂದ ಧೈರ್ಯ ಸ್ಥೈರ್ಯ ಧೃಡತೆವುಂಟಾಗಿ ಭಗವಂತನ ಪೂರ್ಣಾ ನುಗ್ರಹವಾಗುತ್ತದೆ.
ಅಷ್ಟೋತ್ತರ ಶತದೀಪ (108): ಲಕ್ಷ್ಮೀ ನಾರಾಯಣರ ಸಂಪೂರ್ಣ ಕೃಪಾಕಟಾಕ್ಷವುಂಟಾಗುತ್ತದೆ.
ಸಂಗ್ರಹ: ಹೆಚ್.ಎಸ್.ರಂಗರಾಜನ್, ಅರ್ಚಕರು ಶ್ರೀ ಚನ್ನರಾಯ ಸ್ವಾಮಿ ದೇಗುಲ ಹುಸ್ಕೂರು, ಬೆಂಗಳೂರು