ಅನ್ನ ನೀಡಿ ಧನ್ಯರಾಗಿ

*ಜ್ಯೋತಿ ಸಿ ಕೋಟಗಿ

ಆಡಂಬರ ಬಿಡಿ ಅನ್ನ ನೀಡಿ
ವಿಲಾಸಕ್ಕೆ ಎಲ್ಲೆ ಇಲ್ಲ ನೆನಪಿಡಿ.
ವಕ್ಕರಿಸಿರಲು ಮಹಾಮಾರಿ
ಎಲ್ಲಿಹುದು ನೆಮ್ಮದಿ
ಹಸಿದವನಿಗೆ ಅನ್ನ ಉಣಿಸಿ
ಕೈಚಾಚಿರುವಾಗ ಹಸಿದು
ಫೋಟೋ ಕ್ಲಿಕ್ಕಿಸಬೇಡಿ ನೆಗೆದು
ಬಯಕೆಗಳಿಗೆಲ್ಲಿ ಕೊನೆ
ಮನಸ್ಸು ಹುಚ್ಚುತನದ ಕೋಣೆ
ತೃಪ್ತ ಭಾವ ಬೇಕಿದೆ
ನೆಮ್ಮದಿಯ ಬದುಕಿಗೆ
ದಾನ ಧರ್ಮದಲ್ಲಿರಲು ನೀನು
ಮನದ ಸಂತಸಕ್ಕೆ ಕೊರತೆ ಇಹುದೇನು
ಒಂದು ಸಾರಿ ದಾನ ಮಾಡು
ಸಿಗುವ ಸಂತಸ ನೋಡು
ಮುಗುಳು ನಕ್ಕಾಗ ಆ ಜೀವ
ಜಗತ್ತನ್ನೇ ಗೆದ್ದಂತಾಗುವದು ನಿನ್ನ ಜೀವ.

(ಜ್ಯೋತಿ .ಸಿ ಕೋಟಗಿ, ಸಹ ಶಿಕ್ಷಕಿ, ಸರಕಾರಿ ಪ್ರಾಥಮಿಕ ಶಾಲೆ ತಲ್ಲೂರ, ತಾ: ಸವದತ್ತಿ ಜಿ: ಬೆಳಗಾವಿ)

Related Articles

ಪ್ರತಿಕ್ರಿಯೆ ನೀಡಿ

Latest Articles