ಭರವಸೆಯ ಬೆಳದಿಂಗಳು (ಬೆಳಕು)

ಭರವಸೆಯೆಂಬುವ ಬುತ್ತಿಯ ನೆತ್ತಿಯ
ನರದಲಿ ತುಂಬಿದ ಹೊಳೆಯುವ ಬೆಳಕಿದು
ಹರಿಸುತ ನೂತನ ಚೇತನವೆಮ್ಮಲಿ
ಮರೆಸಿತು ನೋವನು ಭರವಸೆ ಬೆಳಕಿದು//1

ನಂಬಿಕೆಯಿಂದಲಿ ಬದುಕುವ ಭರವಸೆ
ಕುಂಭದ ರೂಪದಿ ಹೊರುತಲಿ ತಂದರು
ಜಂಭವೆಯಿಲ್ಲದ ನಮ್ಮಯ ಅತಿಥಿಯು
ಅಂಬರದಲ್ಲಿಯೆ ತೇಲಿಸಿ ಬಿಟ್ಟರು//2

ವಾಸ್ತವ ಬದುಕಿನ ನಾವೆಯನೇರುತ
ಹಸ್ತವ ಚಾಚುತ ಸುಳಿಯನು ದಾಟಿಸಿ
ಮಸ್ತಕದಲ್ಲಿಯ ಚಿಂತೆಯನಳಿಸುತ
ಶಿಸ್ತಿನ ಜೀವನ ದಾರಿಯ ಸಾಗಿಸಿ//3

ನೊಂದಿಹ ಮನವನು ಸಂತೈಸುತ್ತಲಿ
ಬಂದಿಹ ದುರಿತವನೆದುರಿಸಿ ನಡೆಯುವ
ಮಂದಿರ ಮಠಗಳ ಸುತ್ತುವ ಬದಲಿಗೆ
ನಿಂದನೆ ಮಾಡದೆ ನೋವಿಗೆ ಮಿಡಿಯುವ//4

ಮುಳ್ಳಿನ ನಡುವೆಯು ನಗುತಿದೆ ಹೂವದು
ಬಳ್ಳಿಗಯಾಸರೆ ನೀಡಿದೆ ಮರುವದು
ಉಳ್ಳವರೆಲ್ಲರು ಉದಾರ ಭಾವದಿ
ಒಳ್ಳೆಯ ದಾನವ ಮಾಡಲು ಗುಣವದು//5


ಬಸಮ್ಮ ಏಗನಗೌಡ್ರ ಶಿಕ್ಷಕಿ

ಬಸಮ್ಮ ಏಗನಗೌಡ್ರ ಶಿಕ್ಷಕಿ,

ಹಾವೇರಿ ಜಿಲ್ಲೆ

Related Articles

ಪ್ರತಿಕ್ರಿಯೆ ನೀಡಿ

Latest Articles