ಚರ್ಮರೋಗಕ್ಕೆ ರಾಮಬಾಣ, ಹಿತ್ತಲಲ್ಲೆ ಬೆಳೆವ ಈ ಗಿಡ

ಕಹಿಬೇವಿನ ಸೊಪ್ಪು ತಂದು ಅದನ್ನು ಅರೆದು ಸ್ವಲ್ಪ ಅರಸಿನ ಹುಡಿ ಬೆರೆಸಿ ಚೆನಾಗಿ ಮೈಗೆ ಉಜ್ಜಬೇಕು. ಹತ್ತು ನಿಮಿಷ ಬಿಟ್ಟು ಸ್ನಾನ ಮಾಡಬೇಕು. ಇದರಿಂದ ಮೈಯಲ್ಲಿರುವ ಕಜ್ಜಿಯ ಕ್ರಿಮಿಗಳು ನಾಶವಾಗಿ ಕಜ್ಜಿ ಯಾ ತುರಿಕೆ ನಿಲ್ಲುತ್ತದೆ.

ತುರಿಕೆ, ಕಜ್ಜಿ ಇಲ್ಲದವರು ಕೂಡ ಸ್ನಾನದ ನೀರಿನಲ್ಲಿ ಸ್ವಲ್ಪ ಕಹಿಬೇವಿನ ಸೊಪ್ಪು ಹಾಕಿ ನೀರು ಬಿಸಿ ಆದ ಮೇಲೆ ಸ್ನಾನ ಮಾಡಿದಲ್ಲಿ ಚರ್ಮ ರೋಗಗಳು ಬರುವುದಿಲ್ಲ.

ಕಹಿಬೇವಿನರಸಕ್ಕೆ ಒಂದು ಅಥವಾ ಎರಡು ಹನಿ ತೆಂಗಿನೆಣ್ಣೆ ಬೆರೆಸಿ ಮುಖಕ್ಕೆ ಚೆನ್ನಾಗಿ ತಿಕ್ಕುವುದರಿಂದ ಮೊಡವೆಯ ಬಾಧೆ ಇರುವುದಿಲ್ಲ.

ಸ್ಕಿನ್ ಅಲರ್ಜಿ ಇದ್ದರೆ ಲೋಳೆಸರದ ಒಂದು ಕಡ್ಡಿ ಉಪ್ಪು ಅರಿಶಿನದೊಂದಿಗೆ ಕುದಿಸಿ ನಂತರ ಬರುವ ಲೋಳೆಯೆನ್ನು ಚೆನ್ನಾಗಿ ತಿಕ್ಕಿ ಹದಿನೈದು ನಿಮಿಷ ಬಿಟ್ಟು ಸ್ನಾನ ಮಾಡಿ . ದಿನ ಮಾಡಿನೋಡಿ ಪೂರ್ಣ ಗುಣಹೊಂದಬಹುದು.

ಚರ್ಮರೋಗ ಇರುವವರು ಮೈಯಿಗೆ ಸಾಬೂನು ಹಚ್ಚಬಾರದು. ಕಡಲೆ ಹಿಟ್ಟು ಅಥವಾ ಹೆಸರುಕಾಳಿನ ಹಿಟ್ಟು ಹಚ್ಚಿ ಸ್ನಾನ ಮಾಡಬೇಕು. ಬಿಸಿ ನೀರಿನ ಸ್ನಾನ ಉತ್ತಮ. ಋತುಮಾನಗಳಿಗೆ ತಕ್ಕಂತೆ ಉಡುಪನ್ನು ಧರಿಸಿದರೆ, ಚರ್ಮದ ಆರೋಗ್ಯಕಾಪಾಡಲು ಉತ್ತಮ.

ಆಲೂಗಡ್ಡೆಯನ್ನು ನಿಂಬೆ ರಸದಲ್ಲಿ ನುಣ್ಣಗೆ ಅರೆದು ಚರ್ಮದ ಮೇಲೆ ಲೇಪಿಸಿದರೆ ಕಜ್ಜಿ ನಿವಾರಣೆಯಾಗುವದು.

ಮೆಂತೆಕಾಳನ್ನು ಹಸುವಿನ ತುಪ್ಪದಲ್ಲಿ ಹುರಿದು ನಿತ್ಯ ಎರಡು ಚಮಚ ಬಿಸಿನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿಸೇವಿಸಬೇಕು. 45 ದಿನಗಳಿಂದ 3 ತಿಂಗಳೊಳಗೆ ತೊನ್ನು ಸೇರಿದಂತೆ ಚರ್ಮರೋಗಗಳೆಲ್ಲವೂ ಮಾಯವಾಗುತ್ತದೆ. ಈ ಸಂದರ್ಭ ಟೊಮೆಯೋ, ಬದನೆ ಸೇವಿಸಬಾರದು. ಉಪ್ಪು, ಹುಳಿ, ಖಾರ ಕಡಿಮೆ ಮಾಡಬೇಕು.

ಒಣ ಚರ್ಮವಿದ್ದರೆ, ಅರಿಶಿನ ಪುಡಿಯನ್ನು ಸ್ವಲ್ಪ ಹಾಲು ಹಾಗೂ ಎಳ್ಳೆಣ್ಣೆಯೊಂದಿಗೆ ಬೆರೆಸಿ ಮೈಗೆ ಲೇಪಿಸಿ 15 ನಿಮಿಷದ ಬಳಿಕ ಸ್ನಾನ ಮಾಡಿದರೆ, ಚರ್ಮಮೃದುವಾಗಿ ಹೊಳಪು ಪಡೆಯುತ್ತದೆ. ತ್ವಚೆ ಅಲರ್ಜಿಗೆ ಮನೆ ಮದ್ದು.

ಎಣ್ಣೆ ಹಚ್ಚುವುದು: ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಮೇಗೆ ಹಚ್ಚಿ ಒಂದು ರಾತ್ರಿ ಬಿಡಬೇಕು. ನಂತರ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಈ ರೀತಿ ಎಣ್ಣೆ ಹಚ್ಚಿದಾಗ ಕಾಟನ್ ಬಟ್ಟೆ, ಧರಿಸುವುದು ಒಳ್ಳೆಯದು.

ನಿಂಬೆ ರಸ ಮತ್ತು ತೆಂಗಿನೆಣ್ಣೆ: ನಿಂಬೆ ರಸ ಮತ್ತು ತೆಂಗಿನೆಣ್ಣೆಯನ್ನು ಮಿಶ್ರ ಮಾಡಿ ರಾತ್ರಿಯಲ್ಲಿ ಮೈಗೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಬೇಕು. ಈ ರೀತಿ ಮಾಡುತ್ತಿದ್ದರೆ ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು.

ಕಹಿ ಬೇವಿನ ಪೇಸ್ಟ್: ಕಹಿ ಬೇವಿನ ಎಲೆಯನ್ನು ಅರೆದು ಮೈಗೆ ಹಚ್ಚಿ ಅರ್ಧ ಗಂಟೆ ಬಳಿಕ ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ಅಲರ್ಜಿ ಇದ್ದರೂ, ಇಲ್ಲದಿದ್ದರೂ ಕಹಿ ಬೇವಿನ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕುವುದು ಒಳ್ಳೆಯದು.

ಗಸೆಗಸೆ ಮತ್ತು ನಿಂಬೆ ರಸ: ಅಲರ್ಜಿಯಿಂದ ಉಂಟಾಗಿರುವ ಗಾಯವನ್ನು ಒಣಗಿಸಲು ಗಸೆಗಸೆಯನ್ನು ಅರೆದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ಅಲರ್ಜಿಯಿಂದ ಉಂಟಾದ ಗಾಯಕ್ಕೆ ಹಚ್ಚುವುದು ಒಳ್ಳೆಯದು.

ತಣ್ಣೀರು ಸ್ನಾನ: ತ್ವಚೆ ಅಲರ್ಜಿ ಉಂಟಾಗಿದ್ದರೆ ಬಿಸಿ ನೀರಿನಲ್ಲಿ ಸ್ನಾನ ಮಾಡದಿರುವುದು ಒಳ್ಳೆಯದು. ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಗಾಯದ ಉರಿ ಹೆಚ್ಚಾಗುತ್ತದೆ. ತಣ್ಣೀರಿನಲ್ಲಿ ಸ್ನಾನ ಮಾಡುವುದು ಅಲರ್ಜಿ ಸಮಸ್ಯೆ ನಿವಾರಣೆಗೆ ಮತ್ತು ಆರೋಗ್ಯಕ್ಕೆ ಒಳ್ಳೆಯದು.

ಒಣದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಅವುಗಳನ್ನ್ನು ಕಿವುಚಿ ರಸ ತೆಗೆದು ಆ ರಸವನ್ನು 40 ದಿನಗಳವರೆಗೆ ಸೇವಿಸಿದರೆ ದೀರ್ಘಕಾಲದಿಂದ ಇದ್ದ ಚರ್ಮರೋಗ ಗುಣವಾಗುವುದು.

ನಿಂಬೆ ಹಣ್ಣಿನ ರಸದ ಜೊತೆ ಗುಲಾಬಿ ನೀರು, ಜೇನುತುಪ್ಪ, ಗ್ಲಿಸೆರಿನ್ ಸಮ ಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಪ್ರತಿದಿನ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತೊಳೆದು ಕೊಳ್ಳುವುದರಿಂದ ಮುಖದ ಮೇಲಿನ ಕಪ್ಪು ಚುಕ್ಕಿಗಳು ಮೊಡವೆಗಳು, ಗೆರೆಗಳು, ಸುಕ್ಕುಗಳು ಮಾಯವಾಗಿ ಚರ್ಮ ಕಾಂತಿಯುಕ್ತವಾಗುತ್ತದೆ .

ಸಂಗ್ರಹ: ಹೆಚ್.ಎಸ್.ರಂಗರಾಜನ್

Related Articles

ಪ್ರತಿಕ್ರಿಯೆ ನೀಡಿ

Latest Articles