ನವರಾತ್ರಿ ಆರನೇ ದಿನ ಕಾತ್ಯಾಯಿನಿ ಆರಾಧನೆ

*ರಾಘವೇಂದ್ರ ಹರಿತಸ್ ಗುರೂಜಿ

ಇಂದು ನವರಾತ್ರಿ 6ನೇ ದಿನ. ನವ ದುರ್ಗೆಯರಲ್ಲಿ ಕಾತ್ಯಾಯಿನಿ ದೇವಿಯು ಆರನೇಯವಳಾಗಿದ್ದಾಳೆ. ಮದುವೆಯಾಗಲು ತೊಂದರೆಗಳನ್ನು ಎದುರಿಸುತ್ತಿರುವ ಹುಡುಗಿಯರು ಹಾಗೂ ಹುಡುಗರು ತಾಯಿ ಕಾತ್ಯಾಯಿನಿ ದೇವಿಯನ್ನು ಆರಾಧಿಸಿದರೆ ದೋಷಗಳು ಪರಿಹಾರವಾಗಿ ಶೀಘ್ರವೇ ಮದುವೆಯಾಗುತ್ತದೆ ಎಂದು ನಂಬಲಾಗಿದೆ. ವೈವಾಹಿಕ ಜೀವನದಲ್ಲಿ ತೊಂದರೆಯಾಗುತ್ತಿದ್ದರೆ ತಾಯಿ ಆರಾಧನೆಯಿಂದಾಗಿ ಜೀವನ ಸರಿ ದಾರಿಗೆ ಬರುತ್ತದೆ ಎಂದು ಭಕ್ತರು ನಂಬುತ್ತಾರೆ.

ನವರಾತ್ರಿಯಲ್ಲಿ ತಾಯಿ ಕಾತ್ಯಾಯಿನಿ ದೇವಿಯನ್ನು ಪೂಜೆ ಮಾಡುವುದರಿಂದ ಜೀವನದಲ್ಲಿರುವ ಋಣಾತ್ಮಕ ಶಕ್ತಿಗಳು ನಿರ್ಮೂಲನೆಯಾಗುತ್ತವೆ.

ಈ ಷಷ್ಠಿಯ ದಿನ ದೇವಿ ಕಾತ್ಯಾಯನಿಗೆ ಸಮರ್ಪಿತವಾದ ಈ ದಿನದಲ್ಲಿ ಕೆಂಪು ವಸ್ತ್ರ ಧರಿಸಿದರೆ ಶ್ರೇಷ್ಠ. ವೈರಿಗಳೆಡೆಗೆ ಕೆಂಗಣ್ಣು ತೋರುವ ಈ ದೇವಿ, ದುಷ್ಟ ಸಂಹಾರಕ್ಕೆ ಸಿದ್ಧಳಾಗಿರುತ್ತಾಳೆ ಅದೇ ರೀತಿ ಮದುವೆಗೆ ಇರುವ ಅಡೆತಡೆಗಳನ್ನು ಪೂಜೆ ಮಾಡುವುದರಿಂದ ದೂರ ಮಾಡಬಹುದು.

ಬೀಟ್‌ರೂಟ್ ಹಲ್ವಾದಂಥ ಗಾಢ ಬಣ್ಣದ ನೈವೇದ್ಯ ದೇವಿಗೆ ಇಷ್ಟ. ಈ ದಿನ ನಕ್ಷತ್ರವು ಪೂರ್ವಷಾಢವಾಗಿರುವುದರಿಂದ ತುಂಬಾ ವಿಶೇಷ ವಾಗಿರುತ್ತದೆ.

ಪೂಜಾ ವಿಧಾನ

ಒಂದು ತಾಮ್ರ ತಂಬಿಗೆ, ಪಚ್ಚ ಕರ್ಪೂರ , ಅರಿಶಿನ + ಕುಂಕುಮ, ಒಂದು ಕೆಂಪು ಬಟ್ಟೆ 5 ಒಂದು 5 ರೂಪಾಯಿ ,

ವಿಧಾನ

ಬೆಳಗ್ಗೆ ಸ್ನಾನ ಮಾಡಿದ ನಂತರ ಮನೆಯಲ್ಲಿ , ಎಲ್ಲಾ ನಿತ್ಯ ಜಪತಪಗಳು ಮುಗಿಸಿದನಂತರ, ತಾಮ್ರದ ತಂಬಿಗೆ ಒಳಗೆ ಮುಕ್ಕಾಲು ಬಾಗ ನೀರು ಹಾಕಿ ಅದಕ್ಕೆ ಸ್ವಲ್ಪ ಅರಿಶಿಣ, ಕುಂಕುಮ ಹಾಗೂ ಪಚ್ಚ ಕರ್ಪೂರ ಹಾಕಿ. ನಂತರ ಮಾವಿನ ಎಲೆ ಅಥವಾ ವೀಳ್ಯದ ಎಲೆ ಮೇಲೆ ಹಾಕಿ. ನಂತರ ಒಂದು ಮಣಿಯ ಮೇಲೆ ಇಟ್ಟು, ಲಕ್ಷೀ ಅಷ್ಟೋತ್ತರ, ಗಣಪತಿ ಅಷ್ಟೋತ್ತರ ಹಾಗೂ ವರುಣ್ ಅಷ್ಟೋತ್ತರ ಹೇಳಿ.

ತದ ನಂತರ ನಿಂತಿರುವ ಜಾಗದಲ್ಲಿ 9 ಪ್ರದಕ್ಷಿಣೆ ಹಾಕಿ, ನಂತರ ಆ ತಾಮ್ರದ ತಂಬಿಗೆಯ ಮೇಲಿನ ಭಾಗವನ್ನೂ ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಿ.‌ ಈ ತಂಬಿಗೆ ಇಂದಿನಿಂದ ವಿಜಯದಶಮಿವರೆಗೂ ನಿತ್ಯ ಪೂಜೆ ಮಾಡಿ. ವಿಜಯದಶಮಿ ದಿನ ಸಾಯಂಕಾಲ ಆ ತಂಬಿಗೆಯ ಕೆಂಪು ಬಟ್ಟೆಯನ್ನು ಬಿಚ್ಚಿ, ಅದರ ಒಳಗೆ ಇರುವ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳಿ.

Related Articles

ಪ್ರತಿಕ್ರಿಯೆ ನೀಡಿ

Latest Articles