ಉಡುಪಿ ಶ್ರೀಕೃಷ್ಣ-ಮಧ್ವ-ಪ್ರಾಣರ ದಿವ್ಯ ಸನ್ನಿಧಾನದಲ್ಲಿ, ಅದಮಾರು ಪರ್ಯಾಯ 2020-22 ಅವಧಿಯಲ್ಲಿ ಶ್ರೀನರಹರಿತೀರ್ಥ ವೇದಿಕೆಯಲ್ಲಿ ನಿರಂತರ ಜ್ಞಾನಸತ್ರ ನಡೆಯುತ್ತಿದೆ.
ಮುಂದಿನ ದಿನಗಳಲ್ಲಿ ವೇದವ್ಯಾಸರು ನೀಡಿದ ಪುರಾಣ-ಪ್ರಪಂಚದಲ್ಲಿ ನಾವು ವಿಹರಿಸಲಿದ್ದೇವೆ. ಹದಿನೆಂಟು ಪುರಾಣಗಳ ಅವಲೋಕನವನ್ನು ಮತ್ತು ಸಮಗ್ರ ಪುರಾಣಗಳ ಪಾರಾಯಣವನ್ನು ಹಿರಿಯ ಯತಿಗಳು ಅಧ್ಯಯನಶೀಲ ವಿದ್ವಾಂಸರು ನಡೆಸಿಕೊಡಲಿದ್ದಾರೆ.
ಪುರಾಣ ವಿಹಾರದ ಉದ್ಘಾಟನೆ ಮತ್ತು ವಾಮನ ಪುರಾಣದ ಚಿಂತನೆಯನ್ನು ನಡೆಸಿಕೊಡಲಿರುವವರು ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು. ಈ ಪ್ರವಚನವು ಜುಲೈ 21 ರಿಂದ 26ರ ವರೆಗೆ ಪ್ರತಿದಿನ ಸಂಜೆ 5.00 ರಿಂದ ನಡೆಯಲಿದೆ.
ಇದರ ಸದುಪಯೋಗವನ್ನು ಈ ಲಿಂಕ್ ನ ಮೂಲಕ ಪಡೆದುಕೊಳ್ಳಬಹುದು. https://youtube.com/channel/UCeOdFy66lqGJclr9CUlkJvA
ಈ ಹದಿನೆಂಟು ಪುರಾಣ ಪ್ರವಚನ ಮತ್ತು ಪಾರಾಯಣದ ಮಾಲಿಕೆಯ ಸೇವೆಯಲ್ಲು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.