ಮೇಲುಕೋಟೆ: ಆಷಾಢಮಾಸದ ಜಾತ್ರಾ ಮಹೋತ್ಸವದ ಅಂಗವಾಗಿ ಜುಲೈ 29ರಂದು ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ಶ್ರೀಕೃಷ್ಣರಾಜಮುಡಿ ಉತ್ಸವ ನೆರವೇರಲಿದೆ.
ಉತ್ಸವದ ಅಂಗವಾಗಿ ಧಾರ್ಮಿಕ ಕೈಂಕರ್ಯಗಳು ಜುಲೈ24ರಂದು ಆರಂಭಗೊಂಡಿದ್ದು, ಆಗಸ್ಟ್ 4ರ ಪುಷ್ಪಯಾಗದವರೆಗೆ ನೆರವೇರಲಿದೆ. ಕೊರೊನಾ ನಿರ್ಬಂಧದ ಕಾರಣ ಎಲ್ಲ ಉತ್ಸವಗಳು ದೇವಾಲಯದ ಒಳಭಾಗಕ್ಕೆ ಸೀಮಿತವಾಗಿ ನಡೆಯಲಿದೆ.
ಜುಲೈ 29ರಂದು ಕೃಷ್ಣರಾಜಮುಡಿ ಕಿರೀಟಧಾರಣೆ, 30ರಂದು ಪ್ರಹ್ಲಾದಪರಿಪಾಲನ, 31ರಂದು ಗಜೇಂದ್ರಮೋಕ್ಷ, ಆಗಸ್ಟ್ 1ರಂದು ರಥೋತ್ಸವ, 2 ರಂದು ತೆಪ್ಪೋತ್ಸವ, 3ರಂದು ತೀರ್ಥಸ್ನಾನ ಪಟ್ಟಾಭಿಷೇಕ, ಆ.4ರಂದು ಪುಷ್ಪಯಾಗ ನಡೆಯಲಿವೆ.