ಸವದತ್ತಿ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ರಾಯರ ಆರಾಧನಾ ಮಹೋತ್ಸವ

ಸವದತ್ತಿ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಗಸ್ಟ್ 23, 24 ಹಾಗೂ 25 ರಂದು ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ

ಈ ಪ್ರಯುಕ್ತ ಪ್ರತಿದಿನ ಬೆಳಗ್ಗೆ 6.30ಕ್ಕೆ ಸುಪ್ರಭಾತ, 7ರಿಂದ ಅಷ್ಟೋತ್ತರ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಮಹಾಪೂಜಾ ಪುಷ್ಪಾಲಂಕಾರ ನಡೆಯಲಿವೆ. ಮಧ್ಯಾಹ್ನ 1.30ಕ್ಕೆ ಮಹಾನೈವೇದ್ಯ, ಮಹಾಮಂಗಳಾರತಿ, ಪ್ರಸಾದ ವಿತರಣೆ. ಸಾಯಂಕಾಲ 6.30ಕ್ಕೆ ಭಜನೆ, ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ, ಫಲಮಂತ್ರಾಕ್ಷತೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳಕಾಲ ನಡೆಯಲಿವೆ ಎಂದು ದೇವಸ್ಥಾನದ ಪರ್ಯಾಯ ಅರ್ಚಕರಾದ ರಾಮಾಚಾರ್ಯ ಗು ಕಟ್ಟಿ ಹಾಗೂ ಗುರಾಚಾರ್ಯ ರ ಕಟ್ಟಿ ತಿಳಿಸಿದ್ದಾರೆ

ಬಹುದಿನಗಳಿಂದ ಮಾಡುತ್ತಾ ಬಂದಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ಬಿಡಲು ಆಗುವುದಿಲ್ಲ. ಆದರೆ ಸರಕಾರದ ಕೋವಿಡ್ 19 ಆದೇಶ ಯಾರೂ ಉಲ್ಲಂಘನೆ ಮಾಡಬಾರದು. ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ ಮತ್ತು ಮಹಾಪ್ರಸಾದವೂ ಇರುವುದಿಲ್ಲ ಎಲ್ಲ ಭಕ್ತರು ಸಹಕರಿಸಬೇಕು.- ವೆಂಕಟೇಶ ವೈದ್ಯ, ಮಠದ ಮುಖ್ಯಸ್ಥ.

Related Articles

ಪ್ರತಿಕ್ರಿಯೆ ನೀಡಿ

Latest Articles