ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅವಕಾಶ ನೀಡಬೇಕೆಂದು ವಿಶ್ವ ಹಿಂದು ಪರಿಷದ್ ಆಗ್ರಹ

ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಗಣೇಶೋತ್ಸವವನ್ನು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸಾರ್ವಜನಿಕ ಪೆಂಡಾಲುಗಳಲ್ಲಿ ಗಣೇಶೋತ್ಸವ ನಡೆಸಲು ಕಳೆದ ವರ್ಷ ಅವಕಾಶ ನೀಡಲಾಗಿತ್ತು.

ಈ‌ ವರ್ಷವೂ ಸಹ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ವಿಘ್ನ ವಿನಾಶಕನಾದ ಶ್ರೀ ಗಣೇಶನ ಪರಂಪರಾಗತ ಉತ್ಸವವನ್ನು (ಕರೋನಾ ನಿಯಮಗಳನ್ನು ಪಾಲಿಸಿಕೊಂಡು) ಸಾರ್ವಜನಿಕವಾಗಿ ಪೆಂಡಾಲುಗಳಲ್ಲಿ ಆಚರಿಸಲು ಮುಕ್ತ ಅವಕಾಶ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ವಿಶ್ವ ಹಿಂದೂ ಪರಿಷದ್ ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles