ನವಮಾಸ ಗರ್ಭದಿ ಹೊತ್ತು ಪ್ರೀತಿಯಲಿ ನಮ್ಮನು ಹೆತ್ತು ಸಲುಹಿದೆ ಅಮ್ಮ ಮೂರು ಹೊತ್ತು ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು// ಸುಂದರ ಬದುಕು ನೀಡಿದೆ ತಂದೆ ಕಷ್ಟವನೆಂದು ತೋರಲಿಲ್ಲವೆಮಗೆ ನಮಗಾಗಿ ಮುಡುಪಿಟ್ಟೆ ನಿನ್ನನ್ನೇ ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು// ಹಗಲಿರುಳುಗಳ ಲೆಕ್ಕವಿಲ್ಲ ರಕ್ಷಿಸುವದೊಂದೆ ಮನದಲೆಲ್ಲ ಓ ಸೈನಿಕನೇ ನಿನಗೆ ಸಮನಾರಿಲ್ಲ ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು// ಅಜ್ಞಾನದ ಕೊಳೆಯ ತೊಳೆದೆ ಸುಜ್ಞಾನದ ಬೆಳಕ ಬೀರಿದೆ ಸಮಾಜದಿ ಬಾಳಲು ದಾರಿ ತೋರಿದ ಗುರುವೆ ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು// ಭರವಸೆಯ ಕಿರಣ ನೀವು ಮರು ಜನ್ಮಕ್ಕೆ ಕಾರಣ ತಾವು ವೈದ್ಯೋನಾರಾಯಣಹರಿ ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು// ದುಡಿಮೆಯನ್ನೇ ನಂಬಿದ ಯೋಗಿ ಜಗಕೆ ಅನ್ನವ ನೀಡುವ ತ್ಯಾಗಿ ಅನ್ನದಾತ ಹಸಿರು ಕ್ರಾಂತಿಯ ಹರಿಕಾರ ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು// ಭಾರತಾಂಬೆ ನಮ್ಮ ಹೆಮ್ಮೆ ಯಾವುದಕ್ಕೂ ಕೊರತೆ ಇಲ್ಲ ನೋಡಿರೊಮ್ಮೆ ಇಲ್ಲಿ ಹುಟ್ಟಿದ ನಾವೇ ಧನ್ಯರಮ್ಮ ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//
ರಚನೆ: ಜ್ಯೋತಿ ಕೋಟಗಿ
ಶಿಕ್ಷಕಿ, ಸ.ಮಾ.ಪ್ರಾ.ಶಾಲೆ ತಲ್ಲೂರ