ಆಗಸ್ಟ್ 30 ಶ್ರೀಕೃಷ್ಣ ಜನ್ಮಾಷ್ಟಮಿ. ಈ ಸಂಭ್ರಮಕ್ಕೆ ಕರ್ನಾಟಕದಲ್ಲಿರುವ ವೇಣುಗೋಪಾಲ ದೇವರ ದೇವಸ್ಥಾನಗಳ ಬಗ್ಗೆ ಮಾಹಿತಿ ಇಲ್ಲಿದೆ.
*ಶ್ರೀನಿವಾಸ ಮೂರ್ತಿ ಎನ್ ಎಸ್
ಶ್ರಾವಣ ಮಾಸ ಬಂದಿತೆಂದರೆ ಹಲವು ದೇವುರುಗಳ ಆರಾಧನೆಯ ಸಂಭ್ರಮ. ಅಂತಹ ಹಬ್ಬಗಳ ಸರಮಾಲೆಯಲ್ಲಿ ಶ್ರಿ ಕೃಷ್ಣಜನ್ಮಾಷ್ಟಮಿಯೂ ಒಂದು. ಈ ಹಿನ್ನೆಲೆಯಲ್ಲಿ ಅಪರೂಪದ ವೇಣುಗೋಪಾಲ ಮೂರ್ತಿಗಳ ದರ್ಶನ ಮಾಡುವ ಪ್ರಯತ್ನ ಇಲ್ಲಿದೆ.
ಕುಪ್ಪಗದ್ದೆ ವೇಣುಗೋಪಾಲ ದೇವಾಲಯ :
ಕುಪ್ಪಗದ್ದೆ ಎಂದರೆ ನೆನಪಾಗುವುದು ಇಲ್ಲಿನ ಪ್ರಸಿದ್ಧ ಐತಿಹಾಸಿಕ 11 ನೇ ಶತಮಾನದ ರಾಮೇಶ್ವರ ದೇವಾಲಯ. ಆದರೆ ಇಲ್ಲಿ ಸಮೀಪದ ಚಿಕ್ಕ ಮಂದಿರದಲ್ಲು ಸುಂದರ ವೇಣುಗೋಪಾಲ ಮೂರ್ತಿ ಇದೆ. ಸುಮಾರು 5 ಅಡಿ ಎತ್ತರದ ಈ ಮೂರ್ತಿ ಉಳಿದ ವೇಣುಗೋ ಪಾ ಲ ಮೂರ್ತಿಗಳಂತೆ ಇರದೆ ಸಾಮಾನ್ಯ ಗೋಪಾಲಕನ ಮೂರ್ತಿಯಂತೆ ಕೆತ್ತನೆ ಹೊಂದಿದೆ, ವೇಣುವಾದನದಲ್ಲಿ ತನ್ಮಯನಾಗಿರುವಂತೆ ಕೆತ್ತನೆಯಾಗಿದ್ದು ಕಟಿಯಿಂದ ವೈಜಯಂತಿ ಮಾಲೆಯ ಕೆತ್ತನೆ ಸುಂದರ ಮೂರ್ತಿಯ ಎರಡೂ ಬದಿಯಲ್ಲಿ ರುಕ್ಮಿಣಿ ಮತ್ತು ರಾಧೆ, ಪೀಠದ ಸುತ್ತಲೂ ಗೋವಿನ ಸುಂದರ ಕೆತ್ತನೆ ಇದೆ. ಪೀಠದಲ್ಲಿ ಯೋಗಿಗಳು ಧ್ಯಾನ ಮಾಡುತ್ತಿರುವಂತೆ, ತಾಳವಾದಕರು ಹಿಮ್ಮೇಳದಲ್ಲಿರುವಂತೆ ಇದ್ದು, ಮೂರ್ತಿಯ ಪ್ರಭಾವಳಿಯಲ್ಲಿ ದಶಾವತಾರ ಹಾಗು ಮೂರ್ತಿಯ ಮೇಲಿನ ಛತ್ರಿಯಾಕರದ ಕೆತ್ತನೆ ಸುಂದರ.
ತಲುಪುವುದು ಹೀಗೆ: ಸೊರಬದಿಂದ ಸುಮಾರು 15 ಕಿಮೀ ದೂರದಲ್ಲಿರುವ ತೊಗರ್ಸಿ ಮಾರ್ಗದ ಮೂಲಕ ಅಥವಾ ಅನವಟ್ಟಿಯಿಂದ ನೇರವಾಗಿ ಸುಮಾರು 16 ಕಿಮೀ ದೂರದಲ್ಲಿದೆ.
ಹೊಳಲ್ಕೆರೆ ವೇಣುಗೋಪಾಲ ದೇವಾಲಯ:
ಪಾಳೇಗಾರರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯದ ಗರ್ಭಗುಡಿಯಲ್ಲಿ ಸುಂದರ 6 ಅಡಿ ಎತ್ತರದ ವೇಣುಗೋಪಾಲನ ಮೂರ್ತಿ ಇದೆ. ವೇಣುವಾದನ ಮಾಡುತ್ತಿರುವಂತೆ ಈ ಮೂರ್ತಿಯಲ್ಲಿನ ಪ್ರಭಾವಳಿ ಸುಂದರವಾಗಿ ಕೆತ್ತನೆಯಾಗಿದೆ. ದೇವಾಯಲಕ್ಕೆ ಸುಂದರವಾದ ಮಂಟಪವಿದ್ದು ಇಲ್ಲಿನ ಕಂಭದಲ್ಲಿನ ಉಬ್ಬು ಶಿಲ್ಪಗಳ ಕೆತ್ತನೆಗಳು ಸುಂದರವಾಗಿದೆ. ಇದರಲ್ಲಿನ ಬೇಡರ ಕಣ್ಣಪ್ಪ, ಶಿವಲಿಂಗಕ್ಕೆ ಹಾಲು ನೀಡುತ್ತಿರುವ ನಂದಿ, ನರಸಿಂಹ ಕೆತ್ತನೆ ಇದೆ. ಇಲ್ಲಿನ ಶಿಖರ ದ್ರಾವಿಡ ಶೈಲಿಯಲ್ಲಿದ್ದು ದೇವಾಲಯ ನವೀಕರಣ ಗೊಂಡಿದೆ. ಸುಮಾರು 14 ನೇ ಶತಮಾನಕ್ಕೆ ಸೇರಬಹುದಾದ ಈ ದೇವಾಲಯ ಇಲ್ಲಿನ ಗಣಪತಿ ದರ್ಶನಕ್ಕೆ ಬರುವವರು ನೋಡಲೇಬೇಕು.
ತಲುಪುವುದು ಹೀಗೆ: ಹೊಳಲ್ಕೆರೆ ಚಿತ್ರದುರ್ಗ – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿತ್ರದುರ್ಗದಿಂದ ಸುಮಾರು 30 ಕಿಮೀ ದೂರದಲ್ಲಿ ಇದೆ
ಪಾವಗಡ ವೇಣುಗೋಪಾಲ ದೇವಾಲಯ:
ಈ ಮೂರ್ತಿಯನ್ನು ಬಾಲಪ್ಪನಾಯಕ ಬೆಟ್ಟದ ಮೇಲೆ 1586ರಲ್ಲಿ ಸ್ಥಾಪಿಸಿದ್ದು ಕಾಲಾಂತರದಲ್ಲಿ ಬೆಟ್ಟದ ಕೆಳಭಾಗದಲ್ಲಿ ನಂತರ ನಿರ್ಮಾಣವಾದ ದೇವಾಲಯಕ್ಕೆ ಸ್ಥಳಾಂತರಿಸಲಾಗಿದೆ. ದೇವಾಲಯ ಗರ್ಭಗುಡಿ, ನವರಂಗ ಹಾಗೂ ತೆರೆದ ಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ರುಕ್ಮಿಣಿ ಸತ್ಯಭಾಮ ಸಮೇತನಾದ ಸುಂದರ ಶ್ರೀ ವೇಣುಗೋಪಾಲನ 3 ಅಡೀ ಎತ್ತರದ ಮೂರ್ತಿ ಇದೆ. ಕೊರಳಲ್ಲಿ ಧರಿಸಿರುವ ಕಂಠಾಭರಣ ಸುಂದರವಾಗಿದ್ದು ಕದಂಬ ವೄಕ್ಷದ ಕೆಳಗೆ ಮೂರ್ತಿ ಇರುವಂತೆ ಕೆತ್ತನೆ ಇರುವುದು ವಿಶೇಷ. ದ್ವಾರದಲ್ಲಿ ಸುಂದರ ದ್ವಾರಪಾಲಾಕರ ಕೆತ್ತನೆ ಇದೆ. ದೇವಾಲಯಕ್ಕೆ ಸುಂದರ ರಾಜಗೋಪುರ ನಿರ್ಮಿಸಲಾಗಿದ್ದು ಇಲ್ಲಿ ವೇಣುಗೋಪಾಲನ ಚಿಕ್ಕ ಮೂರ್ತಿ ಇದೆ. ದೇವಾಲಯದ ಮುಂಭಾಗದಲ್ಲಿ ಎತ್ತರದ ದೀಪಸ್ಥಂಭ ಇದ್ದು ಬಲಿಪೀಠ ಗರುಡ ಸನ್ನಿಧಿಯ ಗೂಡು ಇದೆ. ಶ್ರಾವಣ ಮಾಸದಲ್ಲಿ ಗೋಕುಲಾಷ್ಟಾಮಿಯ ದಿನ ಇಲ್ಲಿ ವಿಶೇಷ ಪೂಜೆ ಇರುತ್ತದೆ. ಮೂಲತಹ ಪುರಾತನ ಮೂರ್ತಿ ನಿರ್ಮಾಣವಾದ ಈ ದೇವಾಲಯ ಸಾಕಷ್ಟು ಬಾರಿ ನವೀಕರಣಗೊಂಡಿದ್ದು 1777 ರಲ್ಲಿ ತಿಮ್ಮಪ್ಪನಾಯಕ ಈಗಿನ ದೇವಾಲಯವನ್ನು ನಿರ್ಮಾಣ ಮಾಡಿದ್ದು 1942 ರಲ್ಲಿ ರಾಜಗೋಪುರ, ಹಜಾರಾ ಮಂಟಪ ನಿರ್ಮಾಣ ಮಾಡಿದ್ದು ಹೊಸ ರೂಪ ಪಡೆದಿದೆ.
ತಲುಪುವುದು ಹೀಗೆ: ಪಾವಗಡವನ್ನು ಬೆಂಗಳೂರು – ಡಾಬಸ್ ಪೇಟ್ – ಮಧುಗಿರಿ – ಮಡಕಶೀರ ಮೂಲಕವೂ ಅಥವಾ ಚಿತ್ರದುರ್ಗ – ಪರುಶುರಾಂಪುರ ಅಥವಾ ಶಿರಾದ ಮೂಲಕವೂ ತಲುಪಭಹುದು. ಇಲ್ಲಿನ ಶನೀಶ್ವರ ದೇವಾಲಯದಲ್ಲಿ ಶ್ರಾವಣದ ಈ ಮೂರ್ತಿಯನ್ನು ಬಾಲಪ್ಪನಾಯಕ ಬೆಟ್ಟದ ಮೇಲೆ 1586 ರಲ್ಲಿ ಸ್ಥಾಪಿಸಿದ್ದು ಕಾಲಾಂತರದಲ್ಲಿ ಬೆಟ್ಟದ ಕೆಳಭಾಗದಲ್ಲಿ ನಂತರ ನಿರ್ಮಾಣವಾದ ದೇವಾಲಯಕ್ಕೆ ಸ್ಥಳಾಂತರಿಸಲಾಗಿದೆ. ದೇವಾಲಯ ಗರ್ಭಗುಡಿ, ನವರಂಗ ಹಾಗೂ ತೆರೆದ ಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ರುಕ್ಮಿಣಿ ಸತ್ಯಭಾಮ ಸಮೇತನಾದ ಸುಂದರ ಶ್ರೀ ವೇಣುಗೋಪಾಲನ 3 ಅಡೀ ಎತ್ತರದ ಮೂರ್ತಿ ಇದೆ. ಕೊರಳಲ್ಲಿ ಧರಿಸಿರುವ ಕಂಠಾಭರಣ ಸುಂದರವಾಗಿದ್ದು ಕದಂಬ ವೄಕ್ಷದ ಕೆಳಗೆ ಮೂರ್ತಿ ಇರುವಂತೆ ಕೆತ್ತನೆ ಇರುವುದು ವಿಶೇಷ. ದ್ವಾರದಲ್ಲಿ ಸುಂದರ ದ್ವಾರಪಾಲಾಕರ ಕೆತ್ತನೆ ಇದೆ. ದೇವಾಲಯಕ್ಕೆ ಸುಂದರ ರಾಜಗೋಪುರ ನಿರ್ಮಿಸಲಾಗಿದ್ದು ಇಲ್ಲಿ ವೇಣುಗೋಪಾಲನ ಚಿಕ್ಕ ಮೂರ್ತಿ ಇದೆ. ದೇವಾಲಯದ ಮುಂಭಾಗದಲ್ಲಿ ಎತ್ತರದ ದೀಪಸ್ಥಂಭ ಇದ್ದು ಬಲಿಪೀಠ ಗರುಡ ಸನ್ನಿಧಿಯ ಗೂಡು ಇದೆ. ಶ್ರಾವಣ ಮಾಸದಲ್ಲಿ ಗೋಕುಲಾಷ್ಟಾಮಿಯ ದಿನ ಇಲ್ಲಿ ವಿಶೇಷ ಪೂಜೆ ಇರುತ್ತದೆ. ಮೂಲತಹ ಪುರಾತನ ಮೂರ್ತಿ ನಿರ್ಮಾಣವಾದ ಈ ದೇವಾಲಯ ಸಾಕಷ್ಟು ಬಾರಿ ನವೀಕರಣಗೊಂಡಿದ್ದು 1777 ರಲ್ಲಿ ತಿಮ್ಮಪ್ಪನಾಯಕ ಈಗಿನ ದೇವಾಲಯವನ್ನು ನಿರ್ಮಾಣ ಮಾಡಿದ್ದು 1942 ರಲ್ಲಿ ರಾಜಗೋಪುರ, ಹಜಾರಾ ಮಂಟಪ ನಿರ್ಮಾಣ ಮಾಡಿದ್ದು ಹೊಸ ರೂಪ ಪಡೆದಿದೆ.
ಗೋವಿಂದನಹಳ್ಳಿ ವೇಣುಗೋಪಾಲ ದೇವಾಲಯ :
ಕಿಕ್ಕೇರಿ ಸಮೀಪದ ಗೋವಿಂದನಹಳ್ಳಿ ಎಂದರೆ ನೆನಪಾಗುವುದೇ ಇಲ್ಲಿನ ಅಪರೂಪದ ಪಂಚಲಿಂಗೇಶ್ವರ ದೇವಾಲಯ, ಆದರೆ ಇಲ್ಲಿ ಮತ್ತೊಂದು ದೇವಾಲಯವಿದ್ದು ಸಾಕಷ್ಟು ಹಾನಿಯಾಗಿದ್ದು ಈಗ ನವೀಕರಣಗೊಂಡಿರುವ ವೇಣುಗೋ ಪಾ ಲ ದೇವಾಲಯ. ಈ ದೇವಾಲಯದ ಗರ್ಭಗುಡಿಯಲ್ಲಿ ಸುಂದರ ಐದು ಅಡಿ ಎತ್ತರದ ಸುಂದರ ವೇಣುಗೋಪಾಲನ ಮೂರ್ತಿ ಇದ್ದು ವೇಣುನಾದನ ಮಾಡುತ್ತ ನೃತ್ಯ ಭಂಗಿಯಲ್ಲಿರುವಂತೆ ಕಾಣುವ ಸುಂದರ ಕೆತ್ತನೆ ಇದೆ. ಗರ್ಭಗುಡಿಯ ದ್ವಾರ ಸರಳವಾಗಿದ್ದು ದ್ವಾರಪಾಲಕರ ಕೆತ್ತನೆ ಹಾಗು ಲಲಾಟದಲ್ಲಿ ಸುಂದರ ಗಜಲಕ್ಷ್ಮೀಯ ಕೆತ್ತನೆ ಇದೆ. ದೇವಾಲಯದ ಗರ್ಭಗುಡಿ, ಸುಖನಾಸಿ ಮತ್ತು ಅಂತರಾಳ ಇದ್ದು ಹೊರಭಿತ್ತಿಯಲ್ಲಿ ಸರಳವಾದ ರಚನೆ ಇದೆ.
ತಲುಪುವುದು ಹೀಗೆ: ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ – ಕಿಕ್ಕೇರಿಯ ಮೂಲಕ ಗೋವಿಂದನಹಳ್ಳಿ ತಲುಪಬಹುದು.
Add this temple in this list Sri venugoala swamy temple Dimbala Ronur post Srinivasaur taluk. It is under reconstruction. Please support financial support contact this no 9448542103