ನವರಾತ್ರಿಯ ದಿನಗಳಲ್ಲಿ ಈ ತಪ್ಪುಗಳನ್ನು ಮಾಡದಿರಿ

ನವರಾತ್ರಿಯ ದಿನ ಕೆಲವೊಂದು ಕೆಲಸಗಳನ್ನು ಅಪ್ಪಿ ತಪ್ಪಿಯೂ ಮಾಡಬಾರದು. ಕೂದಲು ಕಟ್ ಮಾಡಿಸುವುದು, ಉಗುರುಗಳನ್ನು ಕಟ್ ಮಾಡುವುದು, ಗುಂಡು ಹೊಡೆಸುವುದು ಮಾಡಲೇ ಬಾರದು.

ಅದರಲ್ಲೂ ಮಹಿಳೆಯರು ಕೂದಲುಗಳನ್ನು ಕತ್ತರಿಸಲೇಬಾರದು ಎಂದು ಇದೆ. ಒಂದು ವೇಳೆ ಕ್ಷೌರ ಮಾಡಿಸಿದರೆ ದೇವಿಯ ಅನುಗ್ರಹ ಸಿಗುವುದಿಲ್ಲ.

ನವರಾತ್ರಿಯ ದಿನಗಳಲ್ಲಿ ನಿಂಬೆ ಹಣ್ಣನ್ನು ಕತ್ತರಿಸಬಾರದು. ನಿಂಬೆ ಹಣ್ಣು ಪವರ್ ಫುಲ್ ಈ ದಿನಗಳಲ್ಲಿ ದೇವಿಗೆ ಅತ್ಯಂತ ಪ್ರೀತಿಯ ನಿಂಬೆ ಹಣ್ಣನ್ನು ಕತ್ತರಿಸಬಾರದು. ಒಂದು ವೇಳೆ ನಿಂಬೆ ರಸದ ಅಗತ್ಯವಿದ್ದರೆ ಲಿಂಬೆ ರಸ ದೊರೆಯುವುದು. ಅದನ್ನು ತಂದು ಬಳಸ ಬಹುದು.

ನವರಾತ್ರಿಯ ದಿನ ಹಗಲು ಮಲಗಬಾರದು. ಉಪವಾಸ ವಿದ್ದು ಪೂಜೆ ಮಾಡಿದರೆ ಫಲ ಹೆಚ್ಚು. ಹಾಲು ಹಣ್ಣು ಒಣ ಹಣ್ಣುಗಳನ್ನು ಸೇವಿಸಬಹುದು. ಆದರೆ ಉಪವಾಸ ಒಂಬತ್ತು ದಿನವು ಇರಲು ಆಗುವುದಿಲ್ಲ. ಮಿತವಾಗಿ ಆಹಾರವನ್ನು ಸೆವಿಸಬಹುದು. ಭಕ್ತಿ ಮುಖ್ಯ. ನೀರನ್ನು ಹೆಚ್ಚಾಗಿ ಸೇವಿಸಬಹುದು. ನವರಾತ್ರಿ ಹಬ್ಬದಂದು ಬಣ್ಣಗಳಿಗೆ ವಿಶೇಷ ಮಹತ್ವ. ದೇವಿಯನ್ನು ಪ್ರಸನ್ನಗೊಳಿಸಲು 9 ದಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles