ಶ್ರೀ ರಾಯರ ಮಠದಲ್ಲಿ ಶರನ್ನವರಾತ್ರೋತ್ಸವ

ಬೆಂಗಳೂರು: ಜಯನಗರದ 5ನೆ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಪ್ರತಿವರ್ಷದಂತೆ ಶ್ರೀ ಗುರುರಾಯರ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮಗಳು ಅಕ್ಟೋಬರ್ 7ರಂದು ಆರಂಭಗೊ0ಡಿದ್ದು, 15 ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿನಿತ್ಯ ಬೆಳಗ್ಗೆ 7-30ಕ್ಕೆ ಹೋಮ, 8 ಕ್ಕೆ ರಾಯರ ಬೃಂದಾವನಕ್ಕೆ ಅಭಿಷೇಕ 10-30 ಕ್ಕೆ ಉತ್ಸವಗಳು ಕನಕಾಭಿಷೇಕ ಮಂಗಳಾರತಿ ಕಾರ್ಯಕ್ರಮ ನೆರವೇರಲಿದೆ.

ವಿಶೇಷವಾಗಿ 15 ರಂದು “ವಿಜಯ ದಶಮಿಯ” ಹಬ್ಬದ ಪ್ರಯುಕ್ತ ಸಾಮೂಹಿಕ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಶ್ರೀ ಮಠದ ಆವರಣದಲ್ಲಿ ಬೆಳಗ್ಗೆ 8 ಗಂಟೆಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾ ಚಾರ್ಯರ ನೇತೃತ್ವದಲ್ಲಿ ನೆರವೇರಲಿದೆ. ಈ ಎಲ್ಲಾ ಸೇವೆಗಳಲ್ಲಿಯೂ ಭಕ್ತರು ಆನ್ಲೈನ್ ಮುಖಾಂತರವು ಭಾಗವಹಿಸಬಹುದು.

9449133929 ಈ ನಂಬರ್ ಕ್ಯಾಟ್ಲಾಗ್ ಮುಖಾಂತರ ಸೇವೆ ಸಲ್ಲಿಸಿ ಶ್ರೀ ಹರಿವಾಯು ಗುರುಗಳ ಅನುಗ್ರ ಹಕ್ಕೆ ಪಾತ್ರರಾಗಬಹುದು ಎಂದು ನಂದಕಿಶೋರಾಚಾರ್ಯರು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ 08022443962 – 9449133929 – 9945429129- 8660349906

Related Articles

ಪ್ರತಿಕ್ರಿಯೆ ನೀಡಿ

Latest Articles