ದಾಸರ ಪದಗಳ ಗಾಯನ

ದಾಸವಾಣಿ ಫೇಸ್ಬುಕ್ ಸಮೂಹವು ಏರ್ಪಡಿಸಿದ್ದ ನವರಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಕ್ಟೋಬರ್ 10 ರಂದು ಕು|| ಸ್ಫೂರ್ತಿ ಗುರುಪ್ರಸಾದ್ ನಡೆಸಿಕೊಟ್ಟ ದಾಸವಾಣಿ ಕಾರ್ಯಕ್ರಮದಲ್ಲಿ, ವಿಘ್ನೇಶ್ವರನನ್ನು ಸ್ತುತಿಸುವ “ಶರಣು ಸಿದ್ದಿ ವಿನಾಯಕ” ಎಂಬ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, ನಂತರ “ಕೊಡು ಬೇಗ ದಿವ್ಯಮತಿ ಸರಸ್ವತಿ” ಅಂತ ವಿದ್ಯಾದೇವಿಯನ್ನು ಪ್ರಾರ್ಥಿಸಿ, ನಂತರ ಮನೋನಿಯಾಮಕ ದೈವ ಈಶ್ವರನನ್ನು ಕುರಿತು, “ಶಿವ ದರುಶನ ನಮಗಾಯಿತು ಕೇಳೇ ಶಿವರಾತ್ರಿಯ ಜಾಗರಣೆ” ಎಂದು ಶಿವನನ್ನು ಆರಾಧಿಸುತ್ತಾ, ನಂತರ ಜೀವೋತ್ತಮನಾದ ವಾಯು ದೇವರನ್ನು ಕುರಿತ “ವೀರ ಹನುಮ ಬಹು ಪರಾಕ್ರಮ ಸುಜ್ಞಾನವಿತ್ತು ಪಾಲಿಸೆಮ್ಮ ಜೀವರೋತ್ತಮ” ಎಂದು ಹನುಮನನ್ನು ಬೇಡಿ, ಮುಂದೆ “ಶೃಂಗಾರವಾಗಿಹಳು ಶ್ರೀ ಮಹಾಲಕ್ಷ್ಮಿ”, “ಕಂಡೆನಾ ಗೋವಿಂದನಾ”, “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ”, “ಎನಗೂ ಆಣೆ ರಂಗ ನಿನಗೂ ಆಣೆ” ಮುಂತಾದ ಅಪರೂಪದ ಕೃತಿಗಳನ್ನು ಪ್ರಸ್ತುತ ಪಡಿಸಿದರು.

ವಾದ್ಯ ಸಹಕಾರದಲ್ಲಿ : ಕೀಬೋರ್ಡ್ ನಲ್ಲಿ ಶ್ರೀ ಅನಿರುದ್ಧ ಶ್ರೀಧರ್, ತಬಲಾದಲ್ಲಿ ಶ್ರೀ ಧನಂಜಯ ಅವರು ಸಾಥ್ ನೀಡಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles