ದರ್ಶನಕ್ಕೆ ಮುಕ್ತವಾದ ಶ್ರೀ ಕ್ಷೇತ್ರ ಧರ್ಮಸ್ಥಳ

ಬೆಳ್ತಂಗಡಿ:  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿರುವಂತೆಯೇ ಸಾವಿರಾರು ಮಂದಿ ಭಕ್ತರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಮುಂಜಾನೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಕ್ಷೇತ್ರದಲ್ಲಿ ನಡೆಯುವ ಎಲ್ಲ ಸೇವೆಗಳು ಇಂದಿನಿಂದ ಆರಂಭವಾಗಿವೆ. ಕ್ಷೇತ್ರದ ಅನ್ನಪೂರ್ಣ ಛತ್ರದಲ್ಲಿ ಭಕ್ತರಿಗೆ ಅಂತರ ಕಾಯ್ದುಕೊಂಡು ಅನ್ನ ಪ್ರಸಾದ ನೀಡಲಾಯಿತು. ನೇತ್ರಾವತಿಯಲ್ಲಿ ಭಕ್ತರಿಗೆ ಪುಣ್ಯ ಸ್ನಾನಕ್ಕೂ ಅವಕಾಶ ನೀಡಲಾಗಿದೆ. ಆದರೆ ಸಾಬೂನು ಹಾಕಿ ಸ್ನಾನಗೈಯ್ಯುವುದು, ಹಲ್ಲು ಉಜ್ಜುವುದು, ಬಟ್ಟೆ ಒಗೆಯುವುದನ್ನು ನಿಷೇಧಿಸಲಾಗಿದೆ. ಶುಚಿತ್ವ ಕಾಪಾಡುವಂತೆ ಸೂಚಿಸಲಾಗಿದೆ.

ಶ್ರೀದೇವಿ ಅಂಬೆಕಲ್ಲು
ಶ್ರೀದೇವಿ ಅಂಬೆಕಲ್ಲುhttp://sakshatkara.com/
ಪ್ರತಿಯೊಬ್ಬರ ಬದುಕಿನಲ್ಲಿಯೂ ಆಧ್ಯಾತ್ಮಿಕ ವಿಚಾರಧಾರೆಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಲೇ ಇರುತ್ತದೆ. ಆಧ್ಯಾತ್ಮಿಕ ವಿಚಾರಧಾರೆಗಳು ಅಂದಾಕ್ಷಣ ಅದು ಧರ್ಮವೊಂದಕ್ಕೆ ಮಾತ್ರ ಸೀಮಿತಗೊಂಡುದುದಲ್ಲ. ಎಲ್ಲರ ಬದುಕಿನ ಭಾಗವೂ ಹೌದು. ಮನಸ್ಸಿನ ಸಮತೋಲನಕ್ಕೆ ಯೋಗ, ಧ್ಯಾನ ಹೇಗೆ ಸಹಕಾರಿಯೋ ಹಾಗೆಯೇ ಪ್ರಾರ್ಥನೆ, ದೇವರಪೂಜೆ, ವ್ರತಾಚರಣೆಗಳು, ಹಬ್ಬಗಳು ಮನುಕುಲದ ಬಾಂಧವ್ಯವೃದ್ಧಿಗೆ ಸಹಕಾರಿ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ವಿಚಾರಧಾರೆಯನ್ನು ಪಸರಿಸುವ ಸಣ್ಣ ಪ್ರಯತ್ನ. ನೀವು ಕೂಡಾ ನಿಮಗೆ ತಿಳಿದಿರುವ ದೇಗುಲ, ಯೋಗಕೇಂದ್ರ, ಮಠ-ಮಂದಿರಗಳ ಪರಿಚಯಾತ್ಮಕ ಲೇಖನ, ಹಬ್ಬ, ವ್ರತಾಚರಣೆಗಳ ಮಹತ್ವ, ಯೋಗ, ಧ್ಯಾನ ಕ್ರಮಗಳು, ಆಧ್ಯಾತ್ಮಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಯಾವುದೇ ಲೇಖನಗಳು, ಆಯುರ್ವೇದ, ಮನೆ ಮದ್ದು ಬರಹಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.

Related Articles

1 COMMENT

ಪ್ರತಿಕ್ರಿಯೆ ನೀಡಿ

Latest Articles