ಕುಕ್ಕೆ ಸುಬ್ರಹ್ಮಣ್ಯ: ನಾಗದೇವರ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆಸುಬ್ರಹ್ಮಣ್ಯ ದೇಗುಲದಲ್ಲಿ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ದೇವರ ಸೇವೆಗಳು ಇಂದು ಸೆ.14ರಿಂದ ಆರಂಭಗೊಂಡಿವೆ.
ಇಂದು 12 ಸರ್ಪಸಂಸ್ಕಾರ ಸೇವೆಗಳು ನಡೆದಿವೆ. ಬೆಳಗ್ಗೆ 2 ಬಾರಿ ಆಶ್ಲೇಷ ಪೂಜೆ ನಡೆದಿದೆ. ಒಟ್ಟು 60 ಸೇವೆಗಳು ನಡೆದಿವೆ.
ಸೀಮಿತ ಸಂಖ್ಯೆಯ ಸೇವೆಗಳಿಗಷ್ಟೇ ಅವಕಾಶ
ದಿನಕ್ಕೆ 30 ಸರ್ಪಸಂಸ್ಕಾರ, 30 ನಾಗಪ್ರತಿಷ್ಠೆ, ಬೆಳಗ್ಗಿನ ಹೊತ್ತು ಎರಡು ಬಾರಿ ತಲಾ 30 ರಂತೆ ಆಶ್ಲೇಷ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಸರ್ಪಸಂಸ್ಕಾರ ಸೇವೆಗೆ 3 ಸಾವಿರಕ್ಕೂ ಅಧಿಕ ಬುಕ್ಕಿಂಗ್ ಆಗಿದ್ದು, ಹೊಸದಾಗಿ ಬುಕ್ಕಿಂಗ್ ಮಾಡಲು ಅವಕಾಶ ಇಲ್ಲ ಎಂಬುದಾಗಿ ದೇಗುಲದ ಮೂಲಗಳು ತಿಳಿಸಿವೆ.