ಕುಕ್ಕೆ ದೇಗುಲದಲ್ಲಿ ಸೇವೆ ಹೆಚ್ಚಳ

ಕುಕ್ಕೆ ಸುಬ್ರಹ್ಮಣ್ಯ: ಭಕ್ತರಿಂದ ಹೆಚ್ಚಿನ ಬೇಡಿಕೆ ಬಂದುದರಿಂದ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿಸೇವೆಗಳ ಮಿತಿಯನ್ನು ಸೆ.20ರಿಂದ ಹೆಚ್ಚಳ ಮಾಡಿದೆ.
ಆಶ್ಲೇಷಾ ಬಲಿ ಪೂಜೆ ದಿನಕ್ಕೆ 50ರಂತೆ ಎರಡು ಪಾಳಿಯಲ್ಲಿ 100 ಸೇವೆ, ನಾಗಪ್ರತಿಷ್ಠೆ ದಿನಕ್ಕೆ 60ರಂತೆ (ಸರ್ಪ ಸಂಸ್ಕಾರ 2ನೇ ದಿನ ನಾಗಪ್ರತಿಷ್ಠೆ 60 ಸೇರಿ ಒಟ್ಟು 120 ಸೇವೆ, ಸರ್ಪಸಂಸ್ಕಾರ ದಿನಕ್ಕೆ 60 ಸೇವೆ, ಮಹಾಪೂಜೆ, ಪರಮಾನಯುಕ್ತ ಪಂಚಾಮೃತ ಅಭಿಷೇಕ, ಕಲಶಪೂಜಾಯುಕ್ತ ಪಂಚಾಮೃತ ಅಭಿಷೇಕ ಪ್ರತಿ ಸೇವೆಗಳಿಗೆ 20 ರಶೀದಿ, ಪಂಚಾಮೃತ ಮಹಾಭಿಷೇಕ ದಿನಕ್ಕೆ 2 ಸೇವೆಯಂತೆ, ಶೇಷಸೇವೆ ದಿನಕ್ಕೆ 100ರಂತೆ ಮಿತಿ ಹೆಚ್ಚಳ ಮಾಡಿ ದೇಗುಲದ ಆಡಳಿತ ಮಂಡಳಿ ನಿರ್ಧಾರ ಕೈಗೊಂಡು ಪ್ರಕಟಣೆ ಹೊರಡಿಸಿದೆ. ಒಂದು ರಶೀದಿಗೆ ಇಬ್ಬರು ಭಕ್ತರಿಗೆ ಮಾತ್ರ ಭಾಗವಹಿಸಲು ಅವಕಾಶ.

Related Articles

ಪ್ರತಿಕ್ರಿಯೆ ನೀಡಿ

Latest Articles