ಒತ್ತಡದ ಜೀವನ ವಾರಾಂತ್ಯದಲ್ಲಿ ವಿಶ್ರಾಂತಿ ಬಯಸುತ್ತದೆ. ಬೆಂಗಳೂರಿನ ಸುತ್ತಮುತ್ತವೇ ಹಲವಾರು ಪ್ರವಾಸಿ ತಾಣಗಳಿವೆ. ಚಾರಣ ಕೈಗೊಳ್ಳಲು ಹಲವಾರು ಪ್ರವಾಸೀ ತಾಣಗಳಿವೆ. ಅವುಗಳಲ್ಲಿ ಸ್ಕಂದ ಗಿರಿ ಕೂಡಾ ಒಂದು. ಬೆಂಗಳೂರಿನಿಂದ 70ಕಿಮೀ ದೂರದಲ್ಲಿದೆ. ಒಂದು ದಿನದ ಚಾರಣ ಕೈಗೊಳ್ಳಲು ಸೂಕ್ತ ತಾಣ.
ಸಾಹಸೀ ತಾಣವಿದು
ಚಿಕ್ಕಬಳ್ಳಾಪುರ ಗ್ರಾಮದಿಂದ 3ಕಿಮೀ ದೂರದಲ್ಲಿದೆ. ಇಲ್ಲಿ ಪ್ರಕೃತಿ ಸದೃಶ ದೃಶ್ಯಗಳನ್ನು ಸೆರೆಯಾಗಿಸಿಕೊಳ್ಳಬಹುದು. ಈ ತಾಣ 18ನೇ ಶತಮಾನದ ಒಂದು ಕೋಟೆಯ ಭಗ್ನಾವಶೇಷ. ಈ ಕೋಟೆ ಶಿಥಿಲಾವಸ್ಥೆಯಲ್ಲಿದೆ ಮತ್ತು ಇಲ್ಲಿಗೆ ಸಮೀಪದಲ್ಲಿ ಒಂದು ದೇವಸ್ಥಾನವಿದೆ.
ಬೆಳದಿಂಗಳ ಚಾರಣ
ಬೆಂಗಳೂರಿನಲ್ಲಿರುವವರು ರಾತ್ರಿ ಹೊತ್ತು ಬೆಳದಿಂಗಳಿನಲ್ಲಿ ಇಲ್ಲಿಗೆ ಚಾರಣ ಕೈಗೊಳ್ಳಬಹುದು. ಬೆಟ್ಟದ ತುದಿ ತಲುಪಲು 2 ಗಂಟೆ ಸಮಯ ಹಿಡಿಯುತ್ತದೆ. ರಾತ್ರಿ 12ಗಂಟೆಗೆ ಹೊರಟರೆ ಮುಂಜಾನೆ 2ಗಂಟೆಗೆಲ್ಲಾ ತಲುಪಿ ಬಿಡುತ್ತೀರಿ. ಬೆಟ್ಟದ ತುದಿ ತಲುಪಿದಾಗ ಅಲ್ಲಿ ಆಗುವ ಅನುಭವವೇ ರೋಮಾಂಚನ. ಚಳಿಗಾಲದಲ್ಲಿ ಈ ಬೆಟ್ಟ ಮಂಜಿನ ಮುಸುಕು ಹೊದ್ದು ಮಲಗಿರುತ್ತದೆ. ರಾತ್ರಿ ಹೊತ್ತು ಟ್ರೆಕ್ಕಿಂಗ್ ಕೈಗೊಳ್ಳುವುದು ತುಸು ಕಷ್ಟ. ಪಾಪಗಣಿ ದೇವಸ್ಥಾನದಿಂದ ಟ್ರೆಕ್ಕಿಂಗ್ ಆರಂಭಗೊಳ್ಳುತ್ತದೆ. ಕಾಡುಗಳ ನಡುವೆಯೇ ನಡೆದು ಹೋಗಬೇಕು.
ಕೋಟೆಯ ಗೋಡೆ ಹತ್ತಿರ ತಲುಪಿದರೆ, ಇನ್ನೊಂದು ಕೋಟೆಯ ಗೋಡೆ ಕಾಣಿಸುತ್ತದೆ. ಅಂತಹ 6ಕಲ್ಲಿನ ಕೋಟೆಗಳಿವೆ. ಅಂತಹ ಆರು ಕಲ್ಲಿನ ಗೋಡೆಗಳಿವೆ. ಬೆಟ್ಟದ ತಪ್ಪಲಿನಲ್ಲಿ ಪುರಾತನ ದೇವಸ್ಥಾನವಿದೆ. ಚಾರಣ ಅಂದಾಜು 8ಕಿಮೀ ಇದ್ದು, ಸುಮಾರು ಒಂದೂವರೆಯಿಂದ ಮೂರು ಗಂಟೆ ಸಮಯಬೇಕಾಗುತ್ತದೆ. ಬೆಟ್ಟದ ತುದಿಯಲ್ಲಿ 360 ಡಿಗ್ರಿ ಕೋನದಲ್ಲಿ ಸುತ್ತಲೂ ವೀಕ್ಷಣೆ ಮಾಡಬಹುದು. ಅಲ್ಲಿಂದ ನಂದಿ ಹಿಲ್ಸ್ ಕೂಡಾ ಕಾಣುತ್ತದೆ.
ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕುಡಿಯಲು ನೀರು, ಉಪಾಹಾರ ಅಥವಾ ಲೈಟ್ ಫುಡ್ ತೆಗೆದುಕೊಂಡು ಹೋಗುವುದೊಳ್ಳೆಯದು. ಬೆಟ್ಟದಲ್ಲಿ ಚಳಿ ಜಾಸ್ತಿ ಇರುವುದರಿಂದ ಮೈ ಬಿಸಿಯಾಗಿಸಿಕೊಳ್ಳಲು ವಾಟರ್ ಪ್ರೂಫ್ ಬಟ್ಟೆ ತೆಗೆದುಕೊಂಡು ಹೋಗಿ. ಬೆಟ್ಟದಲ್ಲಿ ಸ್ಥಳೀಯರ ಹೋಟೆಲ್ಗಳಿವೆ. ಟೀ-ಕಾಫಿ ಸಿಗುತ್ತದೆ.
ರಿಫ್ರೆಶ್ ಮೆಂಟ್ ಲಭ್ಯ
ಸ್ಥಳೀಯರು ಬೆಟ್ಟದಲ್ಲಿ ಆಮ್ಲೇಟ್, ತಂಪು-ಪಾನೀಯ, ಟೀ ಇತರ ರಿಫ್ರೆಶ್ಮೆಂಟ್ ಸ್ಥಳೀಯರೆ ತಯಾರಿಸಿ ನೀಡುತ್ತಾರೆ. ಕ್ಯಾಂಪ್ ಫೈರ್ ಹಾಕಲು ಕಟ್ಟಿಗೆ ಬೇಕಿದ್ದರೆ ಸ್ಥಳೀಯರು ನೀಡುತ್ತಾರೆ ಜತೆಗೆ ಟ್ರೆಕ್ಕಿಂಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಸಾಮಾನ್ಯವಾಗಿ ಟ್ರೆಕ್ಕಿಂಗ್ ಕೈಗೊಳ್ಳುವವರು ಮುಂಜಾನೆ 2ಗಂಟೆಗೆ ಟ್ರೆಕ್ಕಿಂಗ್ ಆರಂಭಿಸುತ್ತಾರೆ. ಬೆಳಗ್ಗೆ 5ಗಂಟೆಗೆ ಸ್ಕಂದಗಿರಿ ತಲುಪಿದರೆ ಸೂರ್ಯೋದಯವನ್ನು ನೋಡಬಹುದು. ಕೆಲವೊಮ್ಮೆ ಭದ್ರತೆಯ ದೃಷ್ಟಿಯಿಂದ ಇಲ್ಲಿ ರಾತ್ರಿ ಟ್ರೆಕ್ಕಿಂಗ್ ಮಾಡುವುದನ್ನು ನಿಷೇಧಿಸಿರುತ್ತಾರೆ.
ಹೋಗೋದು ಹೇಗೆ?
ಸ್ಕಂದಗಿರಿಗೆ ಬೆಂಗಳೂರಿನಿಂದ ಸಾಕಷ್ಟು ಬಸ್ ಸೌಲಭ್ಯವಿದೆ. ಸ್ಕಂದಗಿರಿಗೆ ಹೋಗಲು ಬೆಂಗಳೂರಿನಿಂದ ಬಸ್ ಮೂಲಕ ಪ್ರಯಾಣಿಸಿ ಚಿಕ್ಕಬಳ್ಳಾಪುರದಲ್ಲಿ ಇಳಿದುಕೊಳ್ಳಬೇಕು ಅಲ್ಲಿಂದ ಸ್ಕಂದಗಿರಿಗೆ ಹೋಗಲು ಬಸ್ ಸಿಗುತ್ತದೆ.
ಅಂದಾಜು ಖರ್ಚು: ಒಂದು ದಿನದ ಚಾರಣ ಆಗಿರುವುದರಿಂದ ಬೆಂಗಳೂರಿನಿಂದ ತಲಾ ಎರಡು ಸಾವಿರ ರೂಪಾಯಿ ಸಾಕು.