ಜ್ಞಾನವೆಂದರೆ ಬರಿ ಓದುವುದಷ್ಟೇ ಅಲ್ಲ…

* ಪ್ರಮೀಳಾ

ಬಹಳಷ್ಟು ಮಂದಿ ಜ್ಞಾನ ಎಂದರೆ ಕೇವಲ ಪುಸ್ತಕವನ್ನು ಓದುವುದು, ಅದರಿಂದಷ್ಟೇ ಜ್ಞಾನ ವೃದ್ದಿಯಾಗುತ್ತದೆ ಎಂದು ತಿಳಿದುಕೊಂಡಿದ್ದಾರೆ. ಅಲ್ಲ, ಜ್ಞಾನ ಎಂದರೆ ಬೆಳಕಿನ ಸಂಕೇತ. ಜ್ಞಾನ ಎಂದರೆ ಅಜ್ಞಾನದಿಂದ ಮುಕ್ತಿ ಪಡೆಯುವುದು. ಜ್ಞಾನ ಎಂದರೆ ಕತ್ತಲೆಯನ್ನು ಹೋಗಲಾಡಿಸಿ ಬೆಳಕಿನ ಹಣತೆಯನ್ನು ಹಚ್ಚುವುದು. ತಿಳುವಳಿಕೆ, ಅರಿವು, ಸತ್ಯತೆ ಇವೆಲ್ಲವೂ ಜ್ಞಾನದ ಸಂಕೇತವಾಗಿದೆ. ತನ್ನನ್ನು ತಾನು ಮೊದಲು ಅರಿತುಕೊಳ್ಳುವುದೇ ಪರಮಜ್ಞಾನವಾಗಿದೆ. ನಾವು ಕಾಲವನ್ನು ವರ್ತಮಾನ ಕಾಲ, ಭೂತ ಕಾಲ, ಭವಿಷ್ಯತ್ ಕಾಲ. ಎಂದು ಮೂರು ವಿಭಾಗಗಳಾಗಿ ವಿಭಜಿಸುತ್ತೇವೆ. ಭೂತಕಾಲದಲ್ಲಾಗುವ ಅನುಭವಗಳನ್ನು ವರ್ತಮಾನ ಕಾಲದಲ್ಲಿ ಸಂಭಾಳಿಸಿಕೊಂಡು ಭವಿಷ್ಯದ ಅನುಭವಗಳಿಗೆ ಸಿದ್ದರಾಗುತ್ತೇವೆ. ಪಂಚಭೂತಗಳು ಕೂಡ ಚೈತನ್ಯದಿಂದ ಇರುತ್ತವೆ. ಗಾಳಿ ಎಲ್ಲವನ್ನೂ ಸಮತೋಲನಕ್ಕೆ ತರುತ್ತದೆ. ಬೆಂಕಿ ತನ್ನ ಹತ್ತಿರ ಇರುವ ಯಾವ ವಸ್ತುವನ್ನೂ ಸುಡುವ ಶಕ್ತಿ ಹೊಂದಿದೆ. ನೀರಿಗೆ ವೇಗವಾಗಿ ಎತ್ತರದಿಂದ ತಗ್ಗಿನ ಜಾಗಕ್ಕೂ ಹರಿಯುವ ಸಾಮರ್ಥ್ಯವಿದೆ. ಸಮುದ್ರದ ಹರಿವನ್ನು ನದಿಗಳು ಚೆನ್ನಾಗಿ ಅರಿತುಕೊಳ್ಳುತ್ತವೆ. ಇನ್ನೂ ಭೂಮಿ ಮೇಲೆ ಯಾವುದೇ ಬೀಜಗಳನ್ನು ಬಿತ್ತಿದರೆ ಮೊಳಕೆಯೊಡೆದು ಫಲ ಕೊಡುವ ಸಾಮರ್ಥ್ಯವಿದೆ.

ಈ ಎಲ್ಲ ಪಂಚಭೂತಗಳ ಸಹಾಯದಿಂದ ಮನುಷ್ಯ ಬದುಕಬಹುದು ಹೊರತು ಇವುಗಳಿಲ್ಲದಿದ್ದರೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಭೂಮಿಯ ಮೇಲೆ ವಾಸಿಸುವ ಗಿಡ -ಮರ, ಬೆಟ್ಟ-ಗುಡ್ಡ, ಪ್ರತಿಯೊಂದು ಸೂಕ್ಷ್ಮ ಜೀವಿಗೂ ಅದರದೇ ಆದ ಭಾಷೆಯಿದೆ. ಆದರೆ ಅ ಭಾಷೆಯನ್ನು ಮನುಷ್ಯ ಅರ್ಥ ಮಾಡಿಕೊಳ್ಳನಾರನಷ್ಟೆ. ಇಡೀ ಪ್ರಕೃತಿಯಂತೆ ಮನುಷ್ಯ ಚೈತನ್ಯದಿಂದ ಇರುತ್ತಾನೆ. ಗಡಿಯಾರ ಹೇಗೆ ಸಮಯವನ್ನು ತೋರಿಸಲು ಅತ್ತಿತ್ತ ಓಡುತ್ತಿರುತ್ತದೆಯೋ ಹಾಗೆ ಮನುಷ್ಯನ ಮನಸು ಕೂಡ ಹಾಗೆ ಪ್ರತಿಯೊಂದು ವಿಷಯದ ಬಗ್ಗೆ ಕುತೂಹಲಭರಿತವಾಗಿರುತ್ತದೆ. ಪ್ರತಿಯೊಂದನ್ನು ‘ಜ್ಞಾಪಕ’ ಎಂಬ ಹೆಸರಿಂದ ನೆನಪು ಮಾಡಿಕೊಳ್ಳುತ್ತಾನೆ. ದೇವರು ಕೊಟ್ಟ ಅದ್ಭುತ ಉಡುಗೊರೆ ಎಂದರೆ ಅದು’ ಜ್ಞಾಪಕ’ ಶಕ್ತಿ. ಪ್ರತಿಯೊಂದನ್ನು ಜ್ಞಾಪಕ ಮಾಡಿಕೊಳ್ಳುವುದರಿಂದ ಮನುಷ್ಯ ಆಕಾಶದಲ್ಲಿ ಹಾರಾಡುತ್ತಾನೆ. ಸಮುದ್ರದಲ್ಲಿ ಸಂಚಾರ ಮಾಡುತ್ತಾನೆ. ಇತರರೊಡನೆ ಬೆರೆಯುತ್ತಾನೆ.

ಆಕಾಶದಷ್ಟು ವಿಶಾಲವಾದ ಜ್ಞಾನವಿದ್ದರೂ ಮನುಷ್ಯನಿಗೆ ನೆಮ್ಮದಿ, ಮನಶಾಂತಿ, ಆತ್ಮ ತೃಪ್ತಿ ಇಲ್ಲ. ಅದಕ್ಕೆ ಕಾರಣ ಮನುಷ್ಯನಿಗೆ ಪ್ರಪಂಚದ ಜ್ಞಾನವಿದ್ದರೂ ಆತನ ಬಗ್ಗೆ ಜ್ಞಾನವಿರುವುದಿಲ್ಲ. ಆತ ಹೆಚ್ಚಾಗಿ ಹೊರ ಪ್ರಪಂಚದ ಜ್ಞಾನ ತಿಳಿದುಕೊಳ್ಳಲ ಬಯಸುತ್ತಾನೆ ಹೊರತು ತನ್ನ ಬಗ್ಗೆ ಅಲ್ಲ. ಯಾವಾಗ ಮನುಷ್ಯ ತನ್ನ ಬಗ್ಗೆ ಅರಿತುಕೊಳ್ಳುತ್ತಾ ಆಗ ಮಾತ್ರ ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ಬೆಳಕಿನತ್ತ ಸಾಗುತ್ತಾನೆ. ಧ್ಯಾನದಿಂದ ಮಾತ್ರ ಮನುಷ್ಯನು ಜ್ಞಾನವೆಂಬ ಪರ್ವತ ಶ್ರೇಣಿಯನ್ನು ಹತ್ತಲು ಸಾಧ್ಯ.

(ಪ್ರಮೀಳಾ, ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು.) 

Related Articles

ಪ್ರತಿಕ್ರಿಯೆ ನೀಡಿ

Latest Articles