ಬಾಯಿ ಹುಣ್ಣುಇದು ಎಲ್ಲ ವಯಸ್ಸಿನವರಲ್ಲೂ ಕಂಡು ಬರುವಂತಹ ಸಮಸ್ಯೆ. ಬಾಯಿ ಹುಣ್ಣು ಆದರೆ ಬಾಯಲ್ಲಿ ಊಟ ಮಾಡುವುದಿರಲಿ ನೀರನ್ನು ಸಹ ಕುಡಿಯಲು ಆಗುವುದಿಲ್ಲ, ಅಷ್ಟರ ಮಟ್ಟಿಗೆ ನೋವು ನೀಡುತ್ತದೆ. ಕೆಲವೊಮ್ಮೆ ಬಾಯಿ ಹುಣ್ಣು ನಾವು ಏನೇ ಮಾಡಿದರು ಮೂರರಿಂದ ನಾಲ್ಕು ದಿನಗಳವರೆಗೆ ಕಡಿಮೆಯಾಗುವುದಿಲ್ಲ, ಇದಕ್ಕೆ ನಾವು ಹಲವು ಮಾತ್ರೆಗಳನ್ನ ಸಹ ತೆಗೆದುಕೊಳ್ಳುತ್ತೇವೆ.
ಮಾತ್ರೆ ನುಂಗುವುದರ ಬದಲು ಮನೆಯಲ್ಲೇ ಮದ್ದು ಮಾಡಿ ಸೇವಿಸುವುದರಿಂದ ಬಹಳ ಬೇಗ ನೋಉ ಕಡಿಮೆಯಾಗುತ್ತದೆ ಹಾಗೂ ಇದರಿಂದ ಅಡ್ಡ ಪರಿಣಾಮಗಳು ಇರುವುದಿಲ್ಲ. ಬಿ ಕಾಂಪ್ಲೆಕ್ಸ್ ಅಧಿಕವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ನೀರು ಮತ್ತು ಎಳನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಬಾಯಿ ಹುಣ್ಣು ಬರದಂತೆ ನೋಡಿಕೊಳ್ಳ ಬಹುದು.
ಖಾಲಿ ಹೊಟ್ಟೆಯಲ್ಲಿ ಒಂದೆರಡು ತುಳಸಿ ಎಲೆಗಳನ್ನ ಜಗಿದು ತಿನ್ನುವುದರಿಂದ ಬಾಯಿಹುಣ್ಣು ಕಡಿಮೆಯಾಗುವುದು. ಬಾಯಿ ಹುಣ್ಣು ಇರುವ ಜಾಗದಲ್ಲಿ ಜೇನುತುಪ್ಪಅಥವಾ ಅರಿಶಿನಪುಡಿಯನ್ನು ಬೆರೆಸಿದ ನೀರನ್ನು ನಯವಾಗಿ ಹಚ್ಚುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ. ತೆಂಗಿನ ಕಾಯಿಯ ಹಾಲಿನಲ್ಲಿ ಆಗಾಗ್ಗೆ ಬಾಯಿಯನ್ನ ಮುಕ್ಕಳಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ ಅಥವಾ ಅದು ಸಾಧ್ಯವಾಗದೆ ಇರುವಾಗ ಬೆಚ್ಚಗಿನ ನೀರಿನಲ್ಲಿ ಉಪ್ಪು ಬೆರೆಸಿಕೊಂಡು ಬಾಯಿ ಮುಕ್ಕಳಿಸಬೇಕು.
ಬಾಯಿಹುಣ್ಣಿಗೆ ಅದೆಲ್ಲ ಮಾಡಿ ನೋಡಿದ್ದೇನೆ. ಯಾವುದೂ ಪ್ರಯೋಜನವಾಗಿಲ್ಲ.
ತ್ರಿಫಲಾ ಚೂರ್ಣ ಮಾತ್ರ ನನಗೆ ಸರಿ ಹೋಗುವುದು