ಬೆಂಗಳೂರು: ಎನ್‍ಆರ್ ಕಾಲೊನಿಯಲ್ಲಿ ನವೆಂಬರ್ 2ರಿಂದ ಮಕ್ಕಳ ದಾಸರ ಪದಗಳ ಹಾಡಿನ ಚಿತ್ರೀಕರಣ ಆರಂಭಗೊಳ್ಳಲಿದೆ.
8ರಿಂದ 18 ವರ್ಷದೊಳಗಿನವರು ಪಾಲ್ಗೊಳ್ಳಲು ಅವಕಾಶವಿದೆ.
ಸ್ಪರ್ಧೆಗೆ ಕೆಲವೊಂದು ನಿಯಮಗಳಿವೆ.
- ಅಂಕಿತವಿರುವ ದಾಸರ ಪದಗಳನ್ನು ಹಾಡಬೇಕು.
- ಯಾವುದೇ ಪಕ್ಕವಾದ್ಯ ಇಲ್ಲದೇ ಕೇವಲ ಶ್ರುತಿ ಇಟ್ಟುಕೊಂಡು ಹಾಡಲು ಬರಬೇಕು. (ಶ್ರುತಿ ಇಲ್ಲದೇ ಹಾಡಲು ಅವಕಾಶವಿಲ್ಲ)
- ಭಾಗವಹಿಸುವ ಗಾಯಕ ಗಾಯಕಿಯರು ಒಂದು ದಾಸರ ಪದವನ್ನು ಶ್ರುತಿ ಇಟ್ಟುಕೊಂಡು ಹಾಡಿ ಆ ಹಾಡಿನ ವೀಡಿಯೋವನ್ನು 9019395953 ಗೆ ವಾಟ್ಸಾಪ್ ಮಾಡಬೇಕು.
-ಆಯ್ಕೆ ಆದ ಗಾಯಕ ಗಾಯಕಿಯರಿಗೆ ಮೊಬೈಲ್ ಮುಖಾಂತರ ಸಂಪರ್ಕಿಸಿ ಶೂಟಿಂಗ್ ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುವುದು. - ಆಯ್ಕೆಯಾದವರು ಶೂಟಿಂಗ್‍ಗೆ ಸರಿಯಾದ ಸಮಯಕ್ಕೆ ಹಾಜರಿರಬೇಕು.
- ಶೂಟಿಂಗ್‍ಗೆ ಬರುವಾಗ ಮಾಸ್ಕ್ ಧರಿಸಿಕೊಂಡು ಬರುವುದು ಕಡ್ಡಾಯ ಎಂದು ಪ್ರಕಟಣೆ ತಿಳಿಸಿದೆ.