ಬೂದುಗುಂಬಳಕಾಯಿಯಿಂದ ಮನೆಯಲ್ಲೇ ಮಾಡಿ ಆಗ್ರಾಪೇಟ

ಬೂದುಗುಂಬಳಕಾಯಿ ಹಲ್ವಾ, ಪೇಟ, ಪಾಯಸ ಕೂಡಾ ಮಾಡಬಹುದು.
ಆಗ್ರಾ ಪೇಟ ಎಂದು ಕರೆಸಿಕೊಳ್ಳುವ ಈ ಸಿಹಿಯನ್ನು ಮನೆಯಲ್ಲೇ ಮಾಡಿ ಸವಿಯಬಹುದು.


ಬಹಳ ದಿನಗಳವರೆಗೆ ಉಳಿಯುವ ತರಕಾರಿ ಅಂದರೆ ಬೂದುಗುಂಬಳಕಾಯಿ. ಇದನ್ನು ದೇವ ಕಾರ್ಯಕ್ಕೂ ಬಳಸುತ್ತಾರೆ. ಇದರ ಸೇವನೆ ದೇಹಾರೋಗ್ಯಕ್ಕೆ ಒಳ್ಳೆಯದು. ಇದರಿಂದ ಜ್ಯೂಸ್, ಸಾಂಬಾರು, ಹುಳಿ, ಪಲ್ಯ, ಮಾತ್ರವಲ್ಲ ಸಿಹಿ ತಿನಿಸುಗಳನ್ನು ತಯಾರಿಸಬಹುದು.


ಬೇಕಾಗುವ ಸಾಮಗ್ರಿ: ಕುಂಬಳಕಾಯಿ-ಒಂದು ಕೆಜಿ, ಸಕ್ಕರೆ -ಮೂರು ಕಪ್, ನಿಂಬೆ ರಸ-2 ಚಮಚ, ನೀರು-ಮೂರು ಕಪ್, ಹಾಲು -ಎರಡು ಚಮಚ, ಏಲಕ್ಕಿ ನಾಲ್ಕು.
ಮಾಡುವ ವಿಧಾನ: ಕುಂಬಳಕಾಯಿಯ ಸಿಪ್ಪೆ ತೆಗೆದು ಬೀಜವನ್ನು ಬೇರೆ ಮಾಡಿ. ದೊಡ್ಡ ಡೊಡ್ಡ ತುಂಡುಗಳನ್ನಾಗಿ ಕತ್ತರಿಸಿ. ಕತ್ತರಿಸಿದ ಕುಂಬಳಕಾಯಿಯನ್ನು ಫೋರ್ಕ್‍ನಿಂದ ಚುಚ್ಚಿ. ನಂತರ ನೀರಿಗೆ ನಿಂಬೆ ಹಣ್ಣಿನ ರಸ ಸೇರಿಸಿ ಕುಂಬಳಕಾಯಿ ತುಂಡುಗಳನ್ನು ಅದರಲ್ಲಿ ನೆನೆಸಿ, ನೀರನ್ನು ಸೋಸಬೇಕು.

ನಂತರ ಪುನಃ ನಿಂಬೆ ಹಣ್ಣಿನ ರಸಕ್ಕೆ ನೀರು ಸೇರಿಸಿ 2 ಗಂಟೆಗಳ ಕಾಲ ಕುಂಬಳಕಾಯಿಯನ್ನು ನೆನೆಸಿಡಬೇಕು. ನೀರನ್ನು ಸೋಸಿ, ಕುಂಬಳಕಾಯಿ ತುಂಡುಗಳನ್ನು ಕೈಯಲ್ಲಿ ಹಿಂಡಬೇಕು. ಆ ಕುಂಬಳಕಾಯಿಗೆ ನೀರು ಸೇರಿಸಿ ಬೇಯಿಸಿ. ಮತ್ತೊಂದು ಬಾಣಲೆಯಲ್ಲಿ ಮೂರು ಕಪ್ ನೀರಿಗೆ ಸಕ್ಕರೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಆಗಾಗ್ಗೆ ಕದಡುತ್ತಿರಿ.

ನಿಂಬೆಹಣ್ಣಿನ ರಸ ಮತ್ತು ಏಲಕ್ಕಿಯನ್ನು ಸೇರಿಸಿ. ಬೆಂದ ಕುಂಬಳಕಾಯಿಯನ್ನು ಸಕ್ಕರೆ ಪಾಕಕ್ಕೆ ಬಿಸಿಯಾಗಿರುವಾಗಲೇ ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಬಿಸಿ ಮಾಡಬೇಕು.

Related Articles

ಪ್ರತಿಕ್ರಿಯೆ ನೀಡಿ

Latest Articles