ದೀಪಾವಳಿ ಅಮಾವಾಸ್ಯೆಯ ದಿನ ಪ್ರಾರಂಭ ಮಾಡಿ ಸಂಜೆ ಸಮಯ ಮನೆಯ ಮುಂಬಾಗಿಲಿಗೆ ಹೊಸ್ತಿಲಿನ ಎರಡು ಬದಿಯಲ್ಲಿ ದೀಪವನ್ನು ಬೆಳಗಿ ಅರಶಿಣ ಕುಂಕುಮ ಇಟ್ಟು, ಪುಷ್ಪವನ್ನು ಸಮರ್ಪಿಸಿ. ಬಾಗಿಲಿನ ಮುಂದೆ ಕುಳಿತು ಇಲ್ಲಿ ತಿಳಿಸಿರುವ ಮಂತ್ರವನ್ನು ಜಪಿಸಿ.
ಮಂತ್ರ: “ಓಂ ಹ್ರೀಂ ಶ್ರೀಂ ಆದಿಲಕ್ಷ್ಮೀ ಸ್ವಯಂಭುವೇ ಹ್ರೀಂ ಜೇಷ್ಠಾಯೈ ನಮಃ‘ ಎಂದು 18 ಸಲ ಜಪಿಸಿ. ನಂತರ ಹೊಸ್ತಿಲಿಗೆ ಇಟ್ಟ ಕುಂಕುಮವನ್ನು ಹಣೆಗೆ ಇಟ್ಟುಕೊಂಡು ಮನೆಯ ಒಳಗೆ ಹೋಗಬೇಕು ಈ ರೀತಿ ಒಂದು ತಿಂಗಳ ಕಾಲ ಮಾಡುತ್ತಾ ಬಂದರೆ ಮನೆಯಲ್ಲಿ ಜೇಷ್ಠ ದೇವಿ ಹೊರ ಹೋಗಿ ಅದೃಷ್ಟ ಲಕ್ಷ್ಮೀ ಬಂದು ನೆಲೆಸುವಳು ಎಂಬ ನಂಬಿಕೆ ಇದೆ.
ಮಾಹಿತಿ: ಅಶ್ವತ್ ನಾರಾಯಣ.ಕೆ