ಮನೆಗಳಲ್ಲಿ ಪೂಜೆ ಮಾಡುವಾಗ ಎರಡು ದೀಪ ಹಚ್ಚುತ್ತೇವೆ. ಇದರ ಹಿಂದಿನ ಸತ್ಯತೆ, ಆಧ್ಯಾತ್ಮಿಕ ರಹಸ್ಯ ಏನಿರಬಹುದು ಎನ್ನುವ ಕುತೂಹಲ, ತಿಳಿದುಕೊಳ್ಳುವ ಹಂಬಲ ಕೆಲವರಲ್ಲಿ ಇರಬಹುದು.
ಹಿರಿಯರು ಅನಾದಿಕಾಲದಿಂದಲೂ ಪಾಲಿಸಿಕೊಂಡು ಬಂದ ಪದ್ಧತಿಗಳಲ್ಲಿ ಇರುವ ವೈಜ್ಞಾನಿಕ ದೃಷ್ಟಿಕೋನವನ್ನ ಅಲ್ಲಗಳೆಯುವಂತಿಲ್ಲ. ದೇವರಿಗೆ ದೀಪ ಹಚ್ಚುವಾಗ ಯಾಕೆ ಜೋಡಿ (ಎರಡು) ದೀಪಗಳನ್ನು ಹಚ್ಚಬೇಕು ಎನ್ನುವ ಕುರಿತು ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
ನಮ್ಮ ಬಲಗಡೆ ಭಾಗದಲ್ಲಿ ಹಚ್ಚುವ ದೀಪವು ಪರಮಾತ್ಮನೆಂಬ ಜ್ಯೋತಿಯ ಪ್ರತೀಕ. ನಮ್ಮ ಎಡಗಡೆ ಭಾಗದಲ್ಲಿ ಹಚ್ಚುವ ದೀಪವು ನಾನು ಆತ್ಮಜ್ಯೋತಿ ಎಂಬುದರ ಪ್ರತೀಕ. ಎರಡು ದೀಪಗಳು ಒಂದನ್ನೊಂದು ನೋಡುತ್ತಿರುವಂತೆ ಇಟ್ಟಿರಬೇಕು. ಇಲ್ಲವಾದರೆ ಎರಡೂ ದೀಪಗಳೂ ಮೇಲೆ ನೋಡುತ್ತಿರುವಂತಿರಬೇಕು.
ಪೂಜಿಸುವಾಗ, ಮೊದಲು ಬಲಗಡೆ ದೀಪ ಹಚ್ಚಿ ನಂತರ ಎಡಗಡೆ ದೀಪ ಹಚ್ಚಬೇಕು. ಇದರರ್ಥ, ಪರಮಾತ್ಮ ಜ್ಯೋತಿಯನ್ನು ನೋಡುತ್ತಾ ನಾನು ಆತ್ಮ ತನ್ನ ಪ್ರಕಾಶವನ್ನು ಹೆಚ್ಚಿಸಿಕೊಳ್ಳುತ್ತಿದ್ದೇನೆ ಎಂಬ ಸ್ಮೃತಿಯನ್ನು ಜಾಗೃತಗೊಳಿಸುವುದು. ನನ್ನೊಳಗಿನ ಅಜ್ಞಾನ ಅಂಧಕಾರವನ್ನು ಪರಮಾತ್ಮನು ಅಳಿಸುತ್ತಾನೆ.
ಎಂಬ ನಂಬಿಕೆ ಇದರಲ್ಲಿದೆ. ಆ ನಂಬಿಕೆಯಂತೆ ನಮ್ಮಲ್ಲೊಂದು ಸಕಾರಾತ್ಮಕ ಮನಸ್ಥಿತಿ ನಿರ್ಮಾಣವಾಗುತ್ತದೆ.