ಹಿರಿಯ ವಿದ್ವಾಂಸ, ವಾಗ್ಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಬನ್ನಂಜೆ ಗೋವಿಂದಾಚಾರ್ಯ ಇಂದು ಡಿಸೆಂಬರ್ 13ರಂದು ವಿಧಿವಶರಾಗಿದ್ದಾರೆ.
ಉಡುಪಿ ಜಿಲ್ಲೆಯ ಅಂಬಲಪಾಡಿ ಮೂಲದವರಾದ ಡಾ.ಬನ್ನಂಜೆ 1936ರಲ್ಲಿ ಜನಿಸಿದ್ದರು. ಮಾಧ್ವ ತತ್ವದಲ್ಲಿ ವಿಶೇಷ ಪಾಂಡಿತ್ಯ, ಅನುಭವ ಹೊಂದಿದ್ದ ಡಾ ಬನ್ನಂಜೆಯವರು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಕೂಡ ಅಷ್ಟೇ ಜ್ಞಾನ ಹೊಂದಿದ್ದರು. ಮಾದ್ವ ತತ್ವಗಳನ್ನು ಪ್ರಚುರಪಡಿಸುತ್ತಿದ್ದರು. ಅನೇಕ ಕೃತಿಗಳನ್ನು, ವ್ಯಾಖ್ಯಾನಗಳು, ಅನುವಾದಗಳನ್ನು ರಚಿಸಿದ್ದಾರೆ.
ಭಾರತೀಯ ತತ್ವಶಾಸ್ತ್ರ, ಹಿಂದೂ ಧರ್ಮಗ್ರಂಥಗಳಲ್ಲಿ ಪ್ರವಚನ ನೀಡುವ ಸಲುವಾಗಿ ದೇಶ ವಿದೇಶಗಳಲ್ಲಿ ಸಂಚಾರ ಮಾಡುತ್ತಿದ್ದರು. ಅವರ ಪುತ್ರ ಡಾ ವೀಣಾ ಬನ್ನಂಜೆ ಕೂಡ ಪ್ರವಚನ, ಭಾಷಣಗಳ ಮೂಲಕ ಜನಪ್ರಿಯರು.
ವಿದ್ವತ್‌ಗೆ ಮತ್ತೊಂದು ಹೆಸರು ಡಾ.ಬನ್ನಂಜೆ: ವಿದ್ವಾಂಸ ಡಾ.ಬನ್ನಂಜೆಯವರು ವೇದ ಭಾಷ್ಯ, ಉಪನಿಷತ್ ಭಾಷ್ಯ, ಮಹಾಭಾರತ, ಪುರಾಣ ಮತ್ತು ರಾಮಾಯಣಗಳಲ್ಲಿ ಅಪಾರ ಜ್ಞಾನ ಹೊಂದಿದ್ದರು. ವೇದ ಸೂಕ್ತ, ಉಪನಿಷತ್, ಶಟ ರುದ್ರಿಯಾ, ಬ್ರಹ್ಮ ಸೂತ್ರ ಭಾಷ್ಯ, ಗೀತ ಭಾಷ್ಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು. ಸಂಸ್ಕೃತ ವ್ಯಾಖ್ಯಾಯನ ಎಂಬ ಸುಮಾರು 4 ಸಾವಿರ ಪುಟಗಳ ಸಮಗ್ರ ಕೃತಿ, ಸುಮಾರು 150 ಪುಸ್ತಕಗಳನ್ನು ಬರೆದಿದ್ದಾರೆ.
ಸಂಸ್ಕೃತದಿಂದ ಕನ್ನಡಕ್ಕೆ ಹಲವಾರು ಅನುವಾದಗಳನ್ನು ಮಾಡಿದ್ದಾರೆ. ಬಾಣ ಬಟ್ಟನ ಕಾದಂಬರಿ ಎಂಬ ಬಾಣ ಬಟ್ಟನ ಕಾದಂಬರಿ, ಕಾಳಿದಾಸನ ಶಕುಂತಲಾ, ಶೂದ್ರಕನ ಮೃಚ್ಛಕಟಿಕವನ್ನು ‘ಆವೆಯ ಮಣ್ಣಿನ ಆಟದ ಬಂಡಿ’ ಎಂದು ಅನುವಾದ ಮಾಡಿದ್ದು ಅದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿತ್ತು. ಭವಭೂತಿಯ ಉತ್ತರರಾಮಚರಿತವನ್ನು ಸಹ ಅನುವಾದ ಮಾಡಿದ್ದಾರೆ.
ಸಂಸ್ಕೃತದಲ್ಲಿ ಅವರ ಕಿರು ವ್ಯಾಖ್ಯಾನಗಳಲ್ಲಿ ಶ್ರೀ ತ್ರಿವಿಕ್ರಮರ್ಯ ದಾಸ ಅವರ ‘ಆನಂದಮಾಲಾ’, ಶ್ರೀ ತ್ರಿವಿಕ್ರಮ ಪಂಡಿತ ಅವರ ‘ವಾಯು ಸ್ತುತಿ’ ಮತ್ತು ಶ್ರೀ ತ್ರಿವಿಕ್ರಮ ಪಂಡಿತ ಅವರ ‘ವಿಷ್ಣು ಸ್ತುತಿ’ ಸೇರಿವೆ.ಮಧ್ವಾಚಾರ್ಯ, ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ ಎಂಬ ಮೂರು ಕನ್ನಡ ಸಿನೆಮಾಗಳಿಗೆ ಸಂಭಾಷಣೆ ಬರೆದಿದ್ದಾರೆ.