ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನಕ್ಕೆ, ಉಡುಪಿ ಭಂಡಾರಕೇರಿ ಮಠಾಧೀಶರ ಸಂತಾಪ

ಶ್ರೀ ವೇದೇತಿಹಾಸ ಪುರಾಣಗಳ ಶ್ರೇಷ್ಠ ವಿದ್ವಾಂಸರಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ನಿಧನದ ವಾರ್ತೆಯನ್ನು ಕೇಳಿದ ನಾವು ಅವರ ಆತ್ಮಕ್ಕೆ ಸದ್ಗತಿಯನ್ನು, ಅವರ ಕುಟುಂಬ ಸದಸ್ಯರಿಗೆ ದುಃಖವನ್ನು ಸಹಿಸುವ ಮಾನಸಿಕ ಶಕ್ತಿಯನ್ನು ಭಗವಂತನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.
ನಮ್ಮ ಗುರುಗಳಾದ ಪ್ರಾತಃ ಸ್ಮರಣೀಯರಾದ ಶ್ರೀ ಶ್ರೀ ವಿದ್ಯಾಮಾನ್ಯ ಗುರುಗಳ ಬಗ್ಗೆ ಭಕ್ತಿ ಭಾವವನ್ನು ಹೊಂದಿದ್ದ ಅವರು ಮುಕ್ತಕಂಠದಿ0ದ ಸಭೆ ಸಮಾರಂಭಗಳಲ್ಲಿ ತನ್ನ ಗುರುಗಳು “ಶ್ರೀ ವಿದ್ಯಾಮಾನ್ಯ ತೀರ್ಥರೆಂದು ಘೋಷಿಸುತ್ತಿದ್ದರು.

ನಮ್ಮ ಆಶ್ರಮದಲ್ಲಿ (ಭಾಗವತಾಶ್ರಮದಲ್ಲಿ) ಒಂದು ದಶಕಗಳ ಕಾಲ ಭಾಗವತದ ಸಾರ ಸ್ಕಂದವೆನಿಸಿದ ಜಟಿಲವಾದ ಹನ್ನೊಂದನೆಯ ಸ್ಕಂದವನ್ನು ವ್ಯಾಪಕವಾಗಿ, ಹೃದಯಂಗಮವಾಗಿ ವ್ಯಾಖ್ಯಾನಿಸಿ ಸರ್ವಜನರಿಂದ ಆದರಣೀಯರಾಗಿದ್ದರು.
“ಭಾಗವತ ಬೃಹಸ್ಮತಿ’ ಎಂಬ ಹೆಸರು ಅವರಿಗೆ ಅನ್ವರ್ಥವಾಗಿತ್ತು. ಮಾಧ್ವ ಸಮಾಜ ಶ್ರೇಷ್ಠ ವಿದ್ವತ್‌ರತ್ನವನ್ನು ಕಳೆದುಕೊಂಡು ಬಡವಾಗಿದೆ.

ಶ್ರೀ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು, ಭಂಡಾರಕೇರಿ ಮಠ, ಉಡುಪಿ

Related Articles

ಪ್ರತಿಕ್ರಿಯೆ ನೀಡಿ

Latest Articles