ರಂಗಾ… ಶ್ರೀರಂಗಾ

*ರೂಪಾಪ್ರಸಾದ ಕೋಡಿಂಬಳ
ನಿತ್ಯ ನಿನ್ನನು ನಾನು ನೆನೆಯುವೆ
ರಂಗನಾಥನೆ ರಕ್ಷಿಸು
ಭಕ್ತಿಯಿಂದಲಿ ಧ್ಯಾನಗೈಯುವೆ
ಜನ್ಮ ಪಾಪವ ತೊಲಗಿಸು... ||

ಪಟ್ಟೆ ಪೀತಾಂಬರದಿ ಅಲಂಕೃತ
ರಂಗನಾಥನ ಬೇಡುವೆ
ಮುತ್ತು ರತ್ನ ಹೊನ್ನುಗಳನು
ನಿನ್ನ ಕೊರಳಲಿ ನೋಡುವೆ..... ||

ತುಳಸಿ ದಳವನು ಅರ್ಪಿಸಲು ನೀ
ಭವದ ಭಯವನು ಕಳೆವೆಯಾ
ಭಕ್ತ ವತ್ಸಲ ಪಾಂಡುರಂಗನೆ
ಮುಕ್ತಿ ಮಾರ್ಗವ ತೋರೆಯಾ... ||

ವ್ರತವ ಗೈದು ತಪವ ಮಾಡುವೆ
ಹರಿಯ ನಾಮವ ಪಾಡುವೆ
ದಯೆಯ ತೋರು ಪಾದಕೆರಗುವೆ
ರಂಗ ನಾಮವ ಭಜಿಸುವೆ...... ||

ವಿಠ್ಠಲ.. ವಿಠ್ಠಲ.. ಜೈಜೈ ವಿಠ್ಠಲ
ಜಯ ಹರಿ ವಿಠ್ಠಲ ಶ್ರೀರಂಗಾ
ವಿಠ್ಠಲ... ವಿಠ್ಠಲ.. ಜೈಜೈ ವಿಠಲ
ಜಯ ಹರಿ ವಿಠಲ ಶ್ರೀರಂಗಾ... ||

Related Articles

ಪ್ರತಿಕ್ರಿಯೆ ನೀಡಿ

Latest Articles