ದಾಸ ನಾನು ಈಶ ನೀನು

*ಜಿ. ಹನುಮೇಶ್ ಮಳಗಿ ಧಾರವಾಡ

ಬಂಗಾರದೊಡನೆ ಸೇರಿದ ಹಿತ್ತಾಳೆಯೂ

ಅದೂ ಬಂಗಾರವೇ ಆಗ್ತದೆ..

ಬೆಳ್ಳಿಯೊಡನೆ ಸೇರಿದ

ತಗಡೂ ಬೆಳ್ಳಿಯಾಗ್ತದೆ…

ಸ್ವರಗಳೊಡನೆ ಸೇರಿದ ಗದ್ಯವೂ

ಇಂಪಾದ ಹಾಡಾಗುತ್ತದೆ

ಆದರೆ ಹೊಳೆದ ಮಾತ್ರಕೆ ಗಾಜು ರತ್ನವಾಗುವುದಿಲ್ಲ

ಬಂಗಾರದ ಉಂಗುರದೊಳಗೆ ಸೇರಿದ ಗಾಜು

ವಜ್ರವಾಗುವುದಿಲ್ಲ.

ಹಾಡಲಾಗದ ಧ್ವನಿಗೆ ಸ್ವರವೂ ಕರ್ಕಶ

ಓದಲಾಗದವಗೆ ಗದ್ಯವೂ ಕಬ್ಬಿಣ ಕಡಲೆ

ಕೇಳೆಲೆ ಮೂಢ ಮನವೇ

ಈಶ ನಿನ್ನನು ತನ್ನೊಳಗೆ ಸೇರಿಸಿಕೊಂಡ ಮಾತ್ರಕೆ

ನೀನವನಾಗಲಾರೆ ಅವ ನೀನಾಗಲಾರ.

Related Articles

ಪ್ರತಿಕ್ರಿಯೆ ನೀಡಿ

Latest Articles