ಬೆಂಗಳೂರು: ಶ್ರೀ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನಾ ಮಂಡಳಿಯವರು ನಗರದ ಬಳೇಪೇಟೆಯಲ್ಲಿರುವ ಶ್ರೀ ಲಾಲ್ ದಾಸ್ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಜನವರಿ 9ರಂದು ಏರ್ಪಡಿಸಿರುವ ಧನುರ್ಮಾಸ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ಚಾಂದಿನಿ ಗರ್ತಿಗೆರೆಯವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಮಹಿಪತಿದಾಸರ “ದೇವಾದಿಗಳು ವಂದಿತನಮ್ಮ”, ಕನಕದಾಸರ “ನಮ್ಮಮ್ಮ ಶಾರದೆ”, “ಶಿವ ಶಿವ ಶಿವ ಎನ್ನಿರೋ”, ಶ್ರೀಪಾದರಾಜರ “ಆಡಪೋಗೋಣ ಬಾರೋ ರಂಗ”, ಪುರಂದರದಾಸರ “ನಿನ್ನ ಮಗನ ಲೂಟಿ ಘನವಮ್ಮ”, “ರಂಗ ಬಂದ ಮನೆಗೆ”, “ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ”, “ನೀರೇ ನೀ ಕರೆದರೇ”, “ಭಾಗ್ಯದ ಲಕ್ಷ್ಮಿ ಬಾರಮ್ಮ” ಮುಂತಾದ ಹಾಡುಗಳನ್ನು ಅವರು ಪ್ರಸ್ತುತ ಪಡಿಸಿದರು.
ವಾದ್ಯ ಸಹಕಾರದಲ್ಲಿ: ವಿದ್ವಾನ್ ಮೈಸೂರು ಸಂಜೀವ್ ಕುಮಾರ್ (ಪಿಟೀಲು), ವಿದ್ವಾನ್ ಮುರಳಿ (ಮೃದಂಗ), ವಿದ್ವಾನ್ ರಾಜೇಶ್ (ಹಾರ್ಮೋನಿಯಂ) ನಲ್ಲಿ ಸಾಥ್ ನೀಡಿದರು.
ಕಾರ್ಯಕ್ರಮದ ಸಂಚಾಲಕರೂ, ತಬಲಾ ವಾದ್ಯಕಾರರೂ ಆದ ವಿದ್ವಾನ್ ಶ್ರೀನಿವಾಸ್ ಅನಂತರಾಮಯ್ಯ ಹಾಗೂ ಅನೇಕ ಭಕ್ತಾದಿಗಳೂ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ : ದೇಸಾಯಿ ಸುಧೀಂದ್ರ