ಇಂದಿನಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಆರಂಭ, 7 ದಿನ ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮಠದಲ್ಲಿ ಜ. 9ರಿಂದ 15 ರವರೆಗೆ ಸಪ್ತೋತ್ಸವ ನಡೆಯಲಿದೆ.

ಶ್ರೀ ವಿಶ್ವಪ್ರಿಯ ತೀರ್ಥ ಹಾಗೂ ಶ್ರೀ ಈಶಪ್ರಿಯ ತೀರ್ಥ ಪರ್ಯಾಯ ಅದಮಾರು ಮಠ

ಜನವರಿ 9 ರಂದು ಸಂಜೆ 5.30 ಕ್ಕೆ ಸಪ್ತೋತ್ಸವ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಪರ್ಯಾಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ ಅನುಗ್ರಹ ಸಂದೇಶ ನೀಡುವರು. ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸುವರು.


ಗೃಹಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಉಪಸ್ಥಿತರಿರುವರು.

ಭಾಗವತ ಸಪ್ತಾಹ

ವಿದ್ವಾನ್ ರಾಮನಾಥ ಆಚಾರ್ಯ ಹಾಗೂ
ವಿದ್ವಾನ್ ಕೃಷ್ಣರಾಜ ಕುತ್ಪಾಡಿ


ಜ. 9ರಿಂದ ಜ.15ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ 12 ರವರೆಗೆ ಕೃಷ್ಣ ಸಮೀಕ್ಷಾ- ವಿ. ರಾಮನಾಥ ಆಚಾರ್ಯ ಉಡುಪಿ ಹಾಗೂ ಸಂಜೆ 3.30 -5.30ರವರೆಗೆ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರಿಂದ ಭಾಗವತ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.

ಸ್ಥಳ: ಶ್ರೀ ನರಹರಿತೀರ್ಥ ವೇದಿಕೆ, ರಾಜಾಂಗಣ, ಶ್ರೀಕೃಷ್ಣ ಮಠ, ಉಡುಪಿ. ಕಾರ್ಯಕ್ರಮವನ್ನು www.adamarumatha.com ಯುಟ್ಯೂಬ್ ಚಾನೆಲ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

ಮಠದ ವಾರ್ಷಿಕ ಜಾತ್ರೆ
13ನೇ ಶತಮಾನದಲ್ಲಿ ಆಚಾರ್ಯ ಮಧ್ವರು ಮಕರ ಸಂಕ್ರಾಂತಿಯಂದು ಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು, ಮಠದ ವಾರ್ಷಿಕ ಜಾತ್ರೆ ಅಂಗವಾಗಿ ಸಪ್ತೋತ್ಸವ ಪ್ರತಿ ವರ್ಷ ನಡೆಯುತ್ತದೆ. 15 ರಂದು ಹಗಲು ರಥೋತ್ಸವ ನಡೆಯಲಿದ್ದು, ಚೂರ್ಣೋತ್ಸವ ಎಂದೇ ಪ್ರಸಿದ್ಧಿ.
ಜ. 9 ರಂದು ಸಂಜೆ ಶ್ರೀಕೃಷ್ಣ ಉತ್ಸವ ಮೂರ್ತಿಯನ್ನು ಸುವರ್ಣ ಪಲ್ಲಕಿಯಲ್ಲಿರಿಸಿ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಯಲಿದೆ. ಬಳಿಕ ರಥಬೀದಿಯಲ್ಲಿ ಮಹಾಪೂಜೆ. ರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರು, ಗರುಡ ರಥದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರ ರಥೋತ್ಸವ ನಡೆಯಲಿದೆ.

ಮಕರ ಸಂಕ್ರಾಂತಿಗೆ ಮೂರು ರಥ
ಮಕರ ಸಂಕ್ರಾಂತಿಯಂದು ಸಾಯಂಕಾಲ ಶ್ರೀಕೃಷ್ಣ, ಮುಖ್ಯಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ವೈಭವದ ತೆಪ್ಪೋತ್ಸವ ನಡೆಯಲಿದೆ. ಬಳಿಕ ರಥಬೀದಿಯಲ್ಲಿ ಬ್ರಹ್ಮರಥದಲ್ಲಿ ಕೃಷ್ಣನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಸಣ್ಣರಥದಲ್ಲಿ ಮುಖ್ಯಪ್ರಾಣ ದೇವರು, ಗರುಡ ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರೇಶ್ವರ ದೇವರ ಮೂರ್ತಿಗಳನ್ನಿಟ್ಟು ಅಷ್ಟಮಠಾಧೀಶರ ಸಹಿತ ಭಕ್ತರು ತೇರನ್ನು ಎಳೆಯಲಿದ್ದಾರೆ.

ಜ. 15ರಂದು ಹಗಲು ರಥೋತ್ಸವ ನಡೆಯಲಿದ್ದು ಬೆಳಗ್ಗೆ 8.30ಕ್ಕೆ ಮಹಾಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿರಿಸಿ ಪರ್ಯಾಯ ಶ್ರೀಪಾದರ ಸಹಿತ ಅಷ್ಟಮಠದ ಯತಿಗಳು ಮಂಗಳಾರತಿ ಬೆಳಗಲಿದ್ದಾರೆ. ಬ್ರಹ್ಮರಥೋತ್ಸವದ ಬಳಿಕ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟಮಠದ ಸ್ವಾಮೀಜಿ ಅವರಿಗೆ ಪರ್ಯಾಯ ಮಠದಿಂದ ಗೌರವ ಸಮರ್ಪಣೆ ಮಧ್ವ ಸರೋವರದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಅವಭೃತೋತ್ಸವ ದೊಂದಿಗೆ ಏಳಾಯನೋತ್ಸವ ಸಂಪನ್ನವಾಗಲಿದೆ.

ಸಪ್ತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ

ಜ. 9ರಿಂದ ಜ.15ರವರೆಗೆ ಸಂಜೆ 7 ಗಂಟೆಯಿಂದ
ಸ್ಥಳ: ಶ್ರೀ ನರಹರಿತೀರ್ಥ ವೇದಿಕೆ, ರಾಜಾಂಗಣ, ಶ್ರೀಕೃಷ್ಣ ಮಠ, ಉಡುಪಿ
. ಕಾರ್ಯಕ್ರಮವನ್ನು www.adamarumatha.com ಯುಟ್ಯೂಬ್ ಚಾನೆಲ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

ರಾಹುಲ್ ವೆಲ್ಲಾಲ್

ಜ.9: ಕರ್ನಾಟಕ ಶಾಸ್ತ್ರೀಯ ಸಂಗೀತ

ರಾಹುಲ್ ವೆಲ್ಲಾಲ್ ಮತ್ತು ವೃಂದದವರಿಂದ, ಬೆಂಗಳೂರು

ಸಂಗೀತ ಕಟ್ಟಿ


ಜ.10: ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ದಾಸವಾಣಿ

ಶ್ರೀಮತಿ ಸಂಗೀತ ಕಟ್ಟಿ ವೃಂದದವರಿಂದ, ಬೆಂಗಳೂರು

ವೈಜಯಂತಿ ಕಾಶಿ

ಜ.11: ಕೂಚಿಪುಡಿ ನೃತ್ಯ
ವೈಜಯಂತಿ ಕಾಶಿ ಮತ್ತು ಪ್ರತೀಕ್ಷ ಕಾಶಿ ವೃಂದದವರಿಂದ, ಬೆಂಗಳೂರು

ಕಾಂಚನ ಸಹೋದರಿಯರು


ಜ.12: ಕರ್ನಾಟಕ ಶಾಸ್ತ್ರೀಯ ಸಂಗೀತ

ಶ್ರೀರಂಜನಿ ಮತ್ತು ಶೃತಿರಂಜನಿ (ಕಾಂಚನ ಸಹೋದರಿಯರು), ಬೆಂಗಳೂರು.

ಪಾರ್ಶ್ವನಾಥ ಉಪಾಧ್ಯ, ಶ್ರುತಿ ಗೋಪಾಲ್,
ಆದಿತ್ಯ ಪಿವಿ

ಜ. 13: ಭರತನಾಟ್ಯ ಕಾರ್ಯಕ್ರಮ

ಪಾರ್ಶ್ವನಾಥ ಉಪಾಧ್ಯ, ಶ್ರುತಿ ಗೋಪಾಲ್, ಆದಿತ್ಯ ಪಿವಿ

ಪುಣ್ಯ ಡಾನ್ಸ್ ಕಂಪನಿ ಬೆಂಗಳೂರು.

ವಿ. ಹೆಚ್.ಎಸ್.ವೇಣುಗೋಪಾಲ್

ಜ.14: ಪಂಚವೇಣು ವಾದನ
ವಿ. ಹೆಚ್.ಎಸ್.ವೇಣುಗೋಪಾಲ್ ಮತ್ತು ವೃಂದದವರಿಂದ

ಪಂ.ಜಯತೀರ್ಥ ಮೇವುಂಡಿ

ಜ.15: ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ದಾಸವಾಣಿ
ಪಂ.ಜಯತೀರ್ಥ ಮೇವುಂಡಿ ಮತ್ತು ವೃಂದದವರಿಂದ.


Related Articles

ಪ್ರತಿಕ್ರಿಯೆ ನೀಡಿ

Latest Articles