ಅಜ್ಜಂಪುರ(ತಾ): ಶಿವನಿ ಹೋಬಳಿ ಚೀರನಹಳ್ಳಿ ಶ್ರೀ ಕಂಬದ ನರಸಿಂಹ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ, ಶ್ರೀ ಆದಿಶಕ್ತಿ ಅಮ್ಮ ಹಾಗೂ ಶ್ರೀ ಗುರುಸಿದ್ಧರಾಮೇಶ್ವರ ಸ್ವಾಮಿಯ ಕಾರ್ತಿಕ ಮಹೋತ್ಸವ ಜ.11ರಿಂದ 13ರವರೆಗೆ ನಡೆಯಲಿದೆ.
11ರಂದು ಬೆಳಗ್ಗೆ 5ಗಂಟೆಗೆ ಆಂಜನೇಯ ಸ್ವಾಮಿ, ಶ್ರೀಕಂಬದ ನರಸಿಂಹ ಸ್ವಾಮಿಯವರಿಗೆ ಅಭಿಷೇಕ ಪೂಜೆ ಮತ್ತು ಬೇವಿನ ಮರದ ಶ್ರೀ ಆದಿಶಕ್ತಿ ದೇವಿಗೆ ಕುಂಕುಮಾರ್ಚನೆ, ಬೆಳಗ್ಗೆ 8ಗಂಟೆಗೆ ಸೊಲ್ಲಾಪುರ ವೆ.ಗುರುಪಾದಯ್ಯನವರಿಂದ ಧ್ವಜಾರೋಹಣ, ಸಂಜೆ 4ಗಂಟೆಗೆ ಸಿದ್ಧರ ಗುಡಿ ಬಳಿ ನೂರೊಂದೆಡೆ ಸೇವೆ ಹಾಗೂ ಸಂಜೆ 7ಕ್ಕೆ ಶ್ರೀ ಗುರುಸಿದ್ಧರಾಮೇಶ್ವರ ಸ್ವಾಮಿಯವರ ಆರಾಧನೆ ನಡೆಯಲಿದೆ.
12ರಂದು ಸಂಜೆ 7 ಗಂಟೆಗೆ ಶ್ರೀ ಬೀರಲಿಂಗೇಶ್ವರ ಮತ್ತು ದಳವಾಯಿ ಸ್ವಾಮಿಗಳನ್ನು ಶ್ರೀ ಚನ್ನಬಸವೇಶ್ವರ ಗದ್ದುಗೆಯಿಂದ ಶ್ರೀ ಗುರುಸಿದ್ಧರಾಮೇಶ್ವರ ಮಹಾಮಂಟಪಕ್ಕೆ ಬರಮಾಡಿಕೊಳ್ಳುವುದು, ರಾತ್ರಿ 8ಕ್ಕೆ ಶ್ರೀ ಗುರುಸಿದ್ಧರಾಮೇಶ್ವರ ಮಹಾಮಂಟಪದಲ್ಲಿ ಭಜನಾ ಕಾರ್ಯಕ್ರಮ, ನಂತರ ಶ್ರೀ ಗುರುಸಿದ್ಧರಾಮೇಶ್ವರ ಸ್ವಾಮಿ ಹಾಗೂ ಗ್ರಾಮದೇವರುಗಳಿಗೆ ಮಹಾಮಂಗಳಾರತಿ, ತದನಂತರ ರಾತ್ರಿ 11ಗಂಟೆಗೆ ಶ್ರೀ ಆಂಜನೇಐ ಸ್ವಾಮಿಗೆ ಕದಳಿ ಪ್ರವೇಶ ನಡೆಯಲಿದೆ.
13ರಂದು ಬೆಳಗ್ಗೆ 6ರಿಂದ ಶ್ರೀ ಗುರುಸಿದ್ಧರಾಮೇಶ್ವರ ಸ್ವಾಮಿ ಮತ್ತು ಶ್ರೀ ಬೀರಲಿಂಗೇರ್ಶವರ ಸ್ವಾಮಿ ಹಾಗೂ ದಳವಾಯಿ ಸ್ವಾಮಿ, ನಾಗೇನಹಳ್ಳಿ, ಆದಿಶಕ್ತಿ ಕರಿಯಮ್ಮ ದೇವಿ ಮತ್ತು ಚೀರನಹಳ್ಳಿ ಆದಿಶಕ್ತಿ ಕರಿಯಮ್ಮ ದೇವಿಯವರ ಉತ್ಸವವು ಗ್ರಾಮದ ರಾಜಬೀದಿಗಳಲ್ಲಿ ಚೀರನಹಳ್ಳಿ ಆದಿಶಕ್ತಿ ವೀರಗಾಸೆ ಕಲಾತಂದ, ಡೊಳ್ಳು ಕುಣಿತ, ಉತ್ಸವ ವಾದ್ಯಗೋಷ್ಠಿಗಳೊಂದಿಗೆ ನಡೆಯಲಿದೆ.
ಸಂಜೆ 5 ಗಂಟೆಗೆ ದೊಡ್ಡ ಎಡೆ ಸೇವೆ ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.