ಪೂಜ್ಯ ಲಿಂಗೈಕ್ಯ ಕುಮಾರ ಶಿವಯೋಗಿಗಳ 110ನೇ ಪುಣ್ಯಸ್ಮರಣೋತ್ಸವ

ಸವದತ್ತಿ: ಪಟ್ಟಣದ ಬಿದರಿ ಕಲ್ಮಠದ ಗುಲಗಾಲ ಜಂಬಗಿಯ ಪರಮ ಪೂಜ್ಯ ಲಿಂಗೈಕ್ಯ ಕುಮಾರ ಶಿವಯೋಗಿಗಳ 110 ನೇಯ ಪುಣ್ಯ ಸ್ಮರಣೋತ್ಸವ ಹಾಗೂ ಯಾತ್ರಾ ಮಹೋತ್ಸವವು ಜನವರಿ 18 ರಂದು ಬಿದರಿ ಕಲ್ಮಠದಲ್ಲಿ ನಡೆಯಲಿದೆ.

ಈ ಪ್ರಯುಕ್ತ ಬೆಳಗ್ಗೆ ಕತೃ ಗದ್ದುಗೆಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಮಧ್ಯಾಹ್ನ 12 ಗಂಟೆಗೆ ಮಠದ ಆವರಣದಲ್ಲಿ ಚಿಕ್ಕ ರಥೋತ್ಸವ ಕೋರೋನಾ ಮುಂಜಾಗೃತಾ ಕ್ರಮಗಳನ್ವಯ ನಿಯಮಾನುಸಾರ ನಡೆಯಲಿದೆ ಎಂದು ಶ್ರೀ ಕುಮಾರೇಶ್ವರ ಕಲ್ಮಠ ಸವದತ್ತಿ
ಸದ್ಬಕ್ತ ಮಂಡಳಿಯವರು ತಿಳಿಸಿದ್ದಾರೆ.

ಸವದತ್ತಿ ಬಿದರಿ ಕಲ್ಮಠದ ಲಿಂಗೈಕ್ಯ ಕುಮಾರ
ಶಿವಯೋಗಿಗಳ ಚಿತ್ರ

Related Articles

ಪ್ರತಿಕ್ರಿಯೆ ನೀಡಿ

Latest Articles