ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತಗೊಂಡ ಬಾದಾಮಿ ಬನಶಂಕರಿ ಜಾತ್ರೆ, ಭಕ್ತರಿಗೆ ನಿರ್ಬಂಧ

ಬಾದಾಮಿ: ಬಾಗಲಕೋಟೆಯ ಬಾದಾಮಿ ಬನಶಂಕರಿ ದೇವಿ ಜಾತ್ರೆ ಬಹಳ ಪ್ರಸಿದ್ಧಿ. ಲಕ್ಷಾಂತರ ಮಂದಿ ಭಾಗವಹಿಸಿ ದೇವಿ ದರ್ಶನ ಪಡೆಯುತ್ತಿದ್ದ ಭಕ್ತರಿಗೆ ನಿರಾಸೆ ಉಂಟಾಗಿದೆ. ಈ ಬಾರಿ ಕೊರೋನಾ ಕಾರಣದಿಂದ ಜಾತ್ರೆ ರದ್ದುಗೊಂಡಿದ್ದು, ದೇಗುಲದ ಒಳಗೆ ಸಾಂಪ್ರದಾಯಿಕವಾಗಿ ಪೂಜಾ ವಿಧಿವಿಧಾನಗಳು ನಡೆಯಲಿವೆ. ಆದರೆ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವಿಲ್ಲ.

ಬನಶಂಕರಿ ದೇವಿ ಜಾತ್ರೆಯನ್ನು ಕೋವಿಡ್ ಕಾರಣದಿಂದ ರದ್ದುಪಡಿಸಲಾಗಿದ್ದು ಬನಶಂಕರಿ ದೇವಿ ದರ್ಶನಕ್ಕೆ ಭಕ್ತರು ಬರದಂತೆ ಜ.31 ರವರೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ದೇಗುಲ ಪ್ರಕಟಣೆ ಹೊರಡಿಸಿದೆ.


ದೇವಾಲಯದ ಮಹಾದ್ವಾರವನ್ನು ಬಂದ್ ಮಾಡಲಾಗಿದ್ದು, ಭಕ್ತರು ದೇಗುಲ ಪ್ರವೇಶಿಸದಂತೆ ಬಾದಾಮಿ ರಸ್ತೆ, ಗದಗ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಭಕ್ತರು ಮನೆಯಲ್ಲಿಯೇ ಬನಶಂಕರಿ ದೇವಿಯ ಆರಾಧನೆ ಮಾಡಬೇಕೆಂದು ಪ್ರಕಟಣೆ ತಿಳಿಸಿದೆ.

1963 ರಲ್ಲಿ ಕಾಲರಾ ರೋಗದಿಂದಾಗಿ ಜಾತ್ರೆ ರದ್ದಾಗಿತ್ತು. 2021ರಲ್ಲಿ ಕೊರೋನಾ ಕಾರಣದಿಂದ 2 ನೇ ಬಾರಿಗೆ ಐತಿಹಾಸಿಕ ಜಾತ್ರೆ ರದ್ದಾಗಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles