ಅವಶ್ಯಕತೆ ಇರುವವರಿಗೆ ಸಕಾಲದಲ್ಲಿ ಸ್ಪಂದಿಸುವುದು ನಿಜವಾದ ಸೇವೆ: ಪಂಚಾಕ್ಷರಿ ಮಹಾಸ್ವಾಮೀಜಿ

ಸವದತ್ತಿಃ “ಬಾನಿನಿಂದ ಇಳೆಗೆ ಬಿದ್ದ ನೀರು ಎತ್ತರದ ಕಡೆಗೆ ಹರಿಯುವುದಿಲ್ಲ. ಹೊಂಡಗಳಿಗೆ ಹರಿದು ಅದನ್ನು ತುಂಬಿ ಸಮಾನತೆಯನ್ನು ಸಾಧಿಸುತ್ತದೆ. ಅವಶ್ಯಕತೆ ಇರುವವರಿಗೆ ಸಕಾಲದಲ್ಲಿ ಸ್ಪಂದಿಸಿ ಉಪಕರಿಸುವುದು ಸೇವೆ ಎಂದು ಯಕ್ಕುಂಡಿಯ ಶ್ರೀ ಕುಮಾರೇಶ್ವರ ಮಠದ ಪರಮಪೂಜ್ಯ ನಿರಂಜನ ಪಂಚಾಕ್ಷರಿ ಮಹಾಸ್ವಾಮೀಜಿಯವರು ನುಡಿದರು.

ಅವರು ಸವದತ್ತಿ ತಾಲೂಕಿನ ಯಕ್ಕುಂಡಿಯಲ್ಲಿ ಜರುಗಿದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸವದತ್ತಿ ತಾಲೂಕ ಘಟಕಕ್ಕೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಬೆಳಗಾವಿ ಜಿಲ್ಲಾ ಕ.ರಾ.ಪ್ರಾ.ಶಾ.ಶಿ. ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ನಿರಂಜನ ಮೆಳವಂಕಿ ಮತ್ತು ಜಿಲ್ಲಾ ಸಹ ಕಾರ್ಯದರ್ಶಿಯಾದ ಸಾವಿತ್ರಿ ತಳವಾರ ಇವರಿಗೆ ಗುರುರಕ್ಷೆ ನೀಡಿ ಆಶೀರ್ವದಿಸಿ ಮಾತನಾಡಿದರು.

‘ಮಳೆ ನೀರು ತಗ್ಗಿಗೆ ಹರಿದು ಹರಿದು ಹೋಗುವುದು. ಅದರ ಸ್ವಭಾವವೇ ಅದು. ನಮಗೆ ಜೀವನದಲ್ಲಿ ಅವಕಾಶಗಳು ಬರುವುದು ವ್ಯಕ್ತಿತ್ವಕ್ಕೆ ನೀಡುವ ಗೌರವ ಇವು ನಮ್ಮ ಬದುಕಿನಲ್ಲಿ ಇತರರಿಗೆ ಕಷ್ಟ ಕಾಲದಲ್ಲಿ ಸ್ಪಂಧಿಸುವ ಗುಣಕ್ಕೆ. ಅಂಥ ಅವಕಾಶ ತಮಗೆ ಬಂದಿದೆ. ಶಿಕ್ಷಕರ ಪ್ರತಿನಿಧಿಗಳಾಗಿ ಅವರ ಆಗುಹೋಗುಗಳಿಗೆ ಸ್ಪಂದಿಸಿ ಉಪಕರಿಸುವ ಮೂಲಕ ನಿಮ್ಮ ವ್ಯಕ್ತಿತ್ವ ಗೌರವವನ್ನು ಇನ್ನಷ್ಟು ಹೆಚ್ಚಿಕೊಳ್ಳಿರಿ” ಎಂದರು.

ಈ ಸಂದರ್ಭದಲ್ಲಿ ಯಕ್ಕುಂಡಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ನಾಗರಾಜ ಪೆಂಟೇದ, ಕೆ.ಪಿ.ಎಸ್ ಶಾಲೆಯ ಪ್ರಧಾನ ಗುರುಗಳಾದ ಬಿ.ಎಸ್.ಪಾಟೀಲ, ಸ.ಕಿ.ಪ್ರ.ಶಾಲೆ ಕಾರ್ಲಕಟ್ಟಿಯ ಪ್ರಧಾನ ಗುರುಮಾತೆ ಎಸ್.ಜೆ.ಮುಲ್ಲಾ, ಹಿರಿಯ ಶಿಕ್ಷಕರಾದ ಎಮ್.ಸಿ.ಪೂಜೇರ, ವಿಜಯಲಕ್ಷಿö್ಮÃ ಗದ್ದಿಗೌಡರ, ಎಸ್.ಎಸ್.ಶಿವನಾಯ್ಕರ ಮೊದಲಾದ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles