ಬಯಲು ಆಲಯದಲ್ಲಿ ವಿರಾಜಿಪ ಗಣಪನಿಗೆ ಘಂಟೆಯ ಹರಕೆಯೇ ಶ್ರೇಷ್ಠ

ಘಂಟೆ ಗಣಪನೆಂಬ ಹೆಸರು ಪಡೆದಿರುವ ಗಣೇಶನಿಗೆ ಭಕ್ತರು ಹರಕೆ ಹೊತ್ತುಕೊಂಡು ತಮ್ಮ ಇಷ್ಟಾರ್ಥ ಸಿದ್ಧಿಸಿದಾಗ ಶ್ರೀಕ್ಷೇತ್ರಕ್ಕೆ ಬಂದು ದೇವಸ್ಥಾನದ ಆವರಣದಲ್ಲಿ ಘಂಟೆಯ ಹರಕೆ ತೀರಿಸುತ್ತಾರೆ. ನಂಬಿಕೆಗೆ ಇಂಬು ನೀಡುವಂತೆ ದೇಗುಲದ ಆವರಣದಲ್ಲಿ ಭಕ್ತರೇ ಕಾಣಿಕೆಯಾಗಿ ಕಟ್ಟಿದ ಹಲವು ಘಂಟೆಗಳು ಸಾಕ್ಷಿಯಾಗಿ ನಿಂತಿವೆ.

ಪ್ರಕೃತಿ ಸಿರಿಯ ಮಧ್ಯೆ ಬಯಲನ್ನೇ ಆಲಯವಾಗಿಸಿಕೊಂಡು ಬಯಲ ಗಣಪನೆಂದೇ ಪ್ರಸಿದ್ಧಿ ಪಡೆದಿರುವ ಸೌತಡ್ಕ ಶ್ರೀ ಮಹಾಗಣಪತಿ ದೇಗುಲ ದಕ್ಷಿಣ ಕನ್ನಡ ಜಿಲ್ಲೆಯು ಬೆಳ್ತಂಗಡಿ ತಾಲ್ಲೂಕಿನ ಸೌತಡ್ಕದಲ್ಲಿದೆ.
ಶ್ರೀಕ್ಷೇತ್ರ ಧರ್ಮಸ್ಥಳದಿಂದ 16 ಕಿಮೀ, ಕುಕ್ಕೆ ಸುಬ್ರಹ್ಮಣ್ಯದಿಂದ 45 ಕಿಮೀ ಹಾಗೂ ಮಂಗಳೂರಿನಿ0ದ 82 ಕಿಮೀ ದೂರದಲ್ಲಿರುವ ಈ ದೇಗುಲ ಈಗ ವಿಶ್ವಪ್ರಸಿದ್ಧಿ.
ಘಂಟೆ ಗಣಪನೆಂಬ ಹೆಸರು ಪಡೆದಿರುವ ಗಣೇಶನಿಗೆ ಭಕ್ತರು ಹರಕೆ ಹೊತ್ತುಕೊಂಡು ತಮ್ಮ ಇಷ್ಟಾರ್ಥ ಸಿದ್ಧಿಸಿದಾಗ ಶ್ರೀಕ್ಷೇತ್ರಕ್ಕೆ ಬಂದು ದೇವಸ್ಥಾನದ ಆವರಣದಲ್ಲಿ ಘಂಟೆಯ ಹರಕೆ ತೀರಿಸುತ್ತಾರೆ. ನಂಬಿಕೆಗೆ ಇಂಬು ನೀಡುವಂತೆ ದೇಗುಲದ ಆವರಣದಲ್ಲಿ ಭಕ್ತರೇ ಕಾಣಿಕೆಯಾಗಿ ಆವರಣದಲ್ಲಿ ಕಟ್ಟಿದ ಹಲವು ಘಂಟೆಗಳೇ ಸಾಕ್ಷಿಯಾಗಿ ನಿಂತಿವೆ.

ಸ್ಥಳ ಪುರಾಣ:
ಈ ಪ್ರಾಂತ್ಯವನ್ನು ಆಳುತ್ತಿದ್ದ ರಾಜಮನೆತನದ ಆರಾಧ್ಯ ದೇವರ ಮೂರ್ತಿ ಇದಾಗಿತ್ತು. ಕ್ರಮೇಣ ಶತ್ರು ರಾಜರು ಈ ರಾಜರ ಪ್ರಾಂತ್ಯವನ್ನು ಆಕ್ರಮಿಸಿಕೊಂಡು ಗಣೇಶನ ಗುಡಿಯನ್ನು ನಾಶ ಮಾಡುತ್ತಾರೆ. ರಾಜಮನೆತನವೂ ನಾಶವಾಗುತ್ತದೆ. ಬಹುದಿನಗಳವರೆಗೆ ಕಾಡಿನಲ್ಲಿ ಅಜ್ಞಾತವಾಗಿದ್ದ ಗಣೇಶನ ವಿಗ್ರಹವು ದನ ಕಾಯುತ್ತಿದ್ದ ಬಾಲಕರಿಗೆ ಸಿಗುತ್ತದೆ. ಅದನ್ನು ಆ ಬಾಲಕರು ತಂದು ಬಯಲಿನ ಕಟ್ಟೆಯೊಂದರಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಹತ್ತಿರದಲ್ಲಿ ಬೆಳೆದಿದ್ದ ಸೌತೆಕಾಯಿಯನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಈ ಕಾರಣದಿಂದಲೇ ಈ ಗಣೇಶನಿಗೆ ಸೌತಡ್ಕ ಮಹಾಗಣಪತಿ ಎಂಬ ಹೆಸರು ಬಂದಿದೆ ಎಂಬುದು ತಿಳಿದು ಬರುತ್ತದೆ.

ಗರ್ಭಗುಡಿಯಿಲ್ಲದೇ ಬಯಲಿನಲ್ಲಿ ನೆಲೆನಿಂತ ಗಣಪನನ್ನು ಪೂಜಿಸಲು ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಪುಣ್ಯಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಗೆ ಸಮೀಪದಲ್ಲೇ ಇರುವುದರಿಂದ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯೂ ಹೆಚ್ಚು.
ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಮಧ್ಯಾಹ್ನ ಅನ್ನ ಪ್ರಸಾದದ ವ್ಯವಸ್ಥೆಯೂ ಇದೆ. ಗಣಪತಿ ದೇವರಿಗೆ ಸಿಹಿ ಅವಲಕ್ಕಿಯ ನೈವೇದ್ಯ ಮಾಡಲಾಗುತ್ತದೆ. ಭಕ್ತರಿಗೆ ಪ್ರಸಾದ ರೂಪದಲ್ಲಿ ಸಿಹಿ ಅವಲಕ್ಕಿಯನ್ನು ನೀಡಲಾಗುತ್ತದೆ.

ದೇಗುಲದಲ್ಲಿ ಮೂಡಪ್ಪ ಸೇವೆ, ಮಹಾ ರಂಗ ಪೂಜೆ, ಗಣಹೋಮ, ಸತ್ಯನಾರಾಯಣ ಪೂಜೆ, ಉಪನಯನ, ತುಲಾಭಾರ, ಅನ್ನಪ್ರಾಶನ ಸೇವೆಗಳು ನಡೆಯುತ್ತವೆ.
ಪ್ರತಿದಿನ ಬೆಳಗ್ಗೆ 07:15 ಕ್ಕೆ ಬೆಳಗ್ಗಿನ ಪೂಜೆ, ಮಹಾಪೂಜೆ 12:15 ಕ್ಕೆ ಮಹಾಪೂಜೆ, ರಾತ್ರಿ ​07:15ಕ್ಕೆ ಮಹಾಪೂಜೆ ನಡೆಯುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles