ತುಳುನಾಡಿನ ಅವಳಿ ವೀರರೆಂದೇ ಕರೆಯಲ್ಪಡುವ ಕಾರಣಿಕ ಪುರುಷರಾದ ಕೋಟಿ – ಚೆನ್ನಯ್ಯ ಹಾಗೂ ಅವರ ತಾಯಿ ದೇಯಿ ಬೈದಿತಿಯ ಮೂಲ ಸ್ಥಾನ ಗೆಜ್ಜೆಗಿರಿ ನಂದನ ಬಿತ್ತಲ್ನಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಕಾರ್ಯಕ್ರಮಗಳು ಫೆ.26 ರಿಂದ ಮೊದಲ್ಗೊಂಡು ಮಾರ್ಚ್ 2 ರವರೆಗೆ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬಡಗನ್ನೂರುನಲ್ಲಿರುವ ಆದಿದೈವ ಧೂಮಾವತಿ ಕ್ಷೇತ್ರ ಸಾಯನ ಬೈದ್ಯರ ಗುರುಪೀಠ, ದೇಯಿ ಬೈದಿತಿ ಕೋಟಿ ಚೆನ್ನಯ್ಯ ಮೂಲಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿಯಲ್ಲಿ ಪ್ರತಿಷ್ಠಾ ವರ್ಧಂತಿ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವವು ಫೆ.26ರಿಂದ ಮಾರ್ಚ್ 2 ರವರೆಗೆ ನಡೆಯಲಿದೆ.
ಫೆ.26 ರಂದು ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ಥಳ ಶುದ್ಧಿ, ಶ್ರೀ ಗಣಪತಿ ಹೋಮ, ಮೀನ ಲಗ್ನ ಸುಮೂಹರ್ತದಲ್ಲಿ ಧ್ವಜಾರೋಹಣ, ಶ್ರೀ ನಾಗ ಸನ್ನಿಧಿಯಲ್ಲಿ ಕ್ಷೀರ ಅಭಿಷೇಕ, ತಂಬಿಲ. ಧೂಮಾವತಿ ಮತ್ತು ಕುಪ್ಪೆ ಪಂಜುರ್ಲಿ ಸಾನ್ನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಪರ್ವ, ಮಹಾಪೂಜೆ, ಧೂಮಾವತಿ ಸಾನ್ನಿಧ್ಯದಲ್ಲಿ ಬಲಿ ಉತ್ಸವ ನಡೆಯಲಿದೆ.
ಫೆ.27 ರಂದು ಧೂಮಾವತಿ ಸಾನ್ನಿಧ್ಯದಲ್ಲಿ ಶುದ್ಧ ಕಲಶಹೋಮ, ಪಂಚಪರ್ವ, ಧೂಮಾವತಿ ನೇಮೋತ್ಸವ, ಕುಪ್ಪೆ ಪಂಜುರ್ಲಿ ಸಾನ್ನಿಧ್ಯದಲ್ಲಿ ಶುದ್ಧ ಕಲಶಹೋಮ, ಪಂಚಪರ್ವ ಭಂಡಾರ ಇಳಿಯುವುದು, ಧೂಮಾವತಿ ಬಲಿ ಉತ್ಸವ, ಕುಪ್ಪೆ ಪಂಜುರ್ಲಿ ನೇಮೋತ್ಸವ ನಡೆಯಲಿದೆ.
ಫೆ.28 ರಂದು ನಾಗ ಸಾನ್ನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋ, ಪಂಚಾಮೃತ, ಕಲಶಾಭಿಷೇಕ, ಆಶ್ಲೇಷ ಬಲಿ, ತಂಬಿಲ, ಕಲ್ಲಾಲ್ದಾಯ ಸಾನ್ನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಪರ್ವ, ಭಂಡಾರ ಇಳಿಯುವುದು, ಧೂಮಾವತಿ ಬಲಿ ಉತ್ಸವ, ಕಲ್ಲಾಲ್ದಾಯ ನೇಮೋತ್ಸವ, ಕೊರತಿ ದೈವಕ್ಕೆ ನರ್ತನ ಸೇವೆ ನಡೆಯಲಿದೆ.
ಮಾರ್ಚ್ 1 ರಂದು ಬೆರ್ಮರ್ ಗುಂಡ, ಕೋಟಿ ಚೆನ್ನಯ ಮೂಲಸ್ಥಾನ ಗರಡಿ, ದೇಯಿ ಬೈದಿತಿ, ಸತ್ಯಧರ್ಮ ಚಾವಡಿಯಲ್ಲಿ ನವಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಮೂಲಸ್ಥಾನ ಗರಡಿಯಲ್ಲಿ ಕಲಶಹೋಮ, ಧೂಮಾವತಿ ಬಲಿ ಉತ್ಸವ ನಡೆಯಲಿದೆ.
ಮಾರ್ಚ್ 2 ರಂದು ಸತ್ಯಧರ್ಮ ಚಾವಡಿಯಲ್ಲಿ ಕಲಶಹೋಮ, ನೈವೇದ್ಯ ಸೇವೆ, ದೇಯಿಬೈದಿತಿ ಸಮಾಧಿಯಲ್ಲಿ ದೀಪಾರಾಧನೆ, ಮಹಾಪೂಜೆ, ದೇಯಿಬೈದಿತಿ ಮಹಾನೇಮ ವೈಭವ, ಧ್ವಜಾವರೋಹಣ ನಡೆದು ಉತ್ಸವ ಸಂಪನ್ನಗೊಳ್ಳಲಿದೆ. ಪ್ರತಿದಿನ ಶ್ರೀಕ್ಷೇತ್ರದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ.